ರಾಮಕುಂಜ ಆ.ಮಾ.ಶಾಲಾ ಮಂತ್ರಿಮಂಡಲ ಉದ್ಘಾಟನೆ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪ್ರಜಾಪಭುತ್ವ ಮಾದರಿಯಲ್ಲಿ ನಡೆದ ಶಾಲಾ ಮಂತ್ರಿಮಂಡಲದ ಉದ್ಘಾಟನೆ ಆ.2ರಂದು ನಡೆಯಿತು.


ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಮಾಲತಿ ಎನ್.ಕೆ.ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ನಾಯಕತ್ವ ಗುಣವನ್ನು ಬೆಳೆಸುವುದರ ಜೊತೆಗೆ ದೇಶದ ಉತ್ತಮ ಪ್ರಜೆಯಾಗಬೇಕೆಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು, ವಿದ್ಯಾರ್ಥಿ ಸಂಘವು ಸಕ್ರೀಯವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ವಿದ್ಯಾರ್ಥಿಗಳು ನಾಯಕತ್ವ ಗುಣವನ್ನು ಬೆಳೆಸಿಕೊಂಡು ಉತ್ತಮ ಸಾಧನೆ ಮಾಡಬೇಕೆಂದು ಹೇಳಿದರು. ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷೆ ಮೀನಾಕ್ಷಿಯವರು ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ರಮೇಶ್ ರೈ ಆರ್.ಬಿ ಇವರು ಉಪಸ್ಥಿತರಿದ್ದರು.
ವಿದ್ಯಾರ್ಥಿ ನಾಯಕರಾದ 10ನೇ ತರಗತಿಯ ದಿಶಾನ್, ಧನುಷ್ ಎಂ.ಎಸ್, ಉಪನಾಯಕರಾದ 9ನೇ ತರಗತಿಯ ಜಿತೇಶ್, ಧನುಷ್ ಆರ್.ಬಿ., ಶಿಕ್ಷಣಮಂತ್ರಿ-ಹಿತಾಶ್ರೀ, ಪ್ರಜ್ಞಾ, ಯುಗಾಂತ್ ಎಂ.ಪಿ., ಶಿಸ್ತು ಮಂತ್ರಿ-ಪ್ರಣಾಮ್, ನಮೃತ್, ಚೈತನ್ಯ ವೆಂಕಟರಾಮ ಎಂ., ಭಾಷಾ ಮಂತ್ರಿ-ಯಶಸ್ವಿನಿ, ಸ್ಪೂರ್ತಿ, ಭುವನ್ ಗೌಡ ಎಸ್., ಆರೋಗ್ಯ ಮಂತ್ರಿ-ಮನಸ್ವಿನಿ, ನಿಶಾಂತ್, ಚಿನ್ಮಯ್ ಶೆಟ್ಟಿ ಹೆಚ್., ಸಾಂಸ್ಕೃತಿಕ ಮಂತ್ರಿ-ವರ್ಷಾ ಪಿ.ಎನ್, ಉಪಮಾ, ಹೃತಿಕ್ ಎ.ಆರ್., ಕ್ರೀಡಾ ಮಂತ್ರಿ-ಹರ್ಷಿತಾ, ಅಬೂಬಕ್ಕರ್ ಶಾಹಿಲ್, ಧನುಷ್ ಆರ್., ವಾರ್ತಾ ಮಂತ್ರಿ-ಮೇಘಾ, ಅಲ್ ಹಮೀನ್, ಎಂ.ಭುವನ್, ಆಹಾರ ಮಂತ್ರಿ-ಶಹಾನಿ, ಜೀವನ್, ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿ-ಸಾಯಿ ಪ್ರಣವ್ ರಾಮ್, ಸೃಜನ್, ಕಲಾ ಮಂತ್ರಿ-ಮಧುರಾ, ಫಾತಿಮಾ ಕೌಸರ್, ಪುರುಷೋತ್ತಮ್ ಹೆಚ್.ಎಂ., ಇಕೋ ಕ್ಲಬ್ ಮಂತ್ರಿ-ನಿಶಾಂತ್, ನಿಶೀತ್, ಚರಣ್ ಎಸ್.ಆರ್., ವಿಜ್ಞಾನ ಮಂತ್ರಿ-ಗಗನ್ ಕೆ.ಆರ್, ಅಂಕಿತ್ ಎಸ್.ರಾವ್, ಚೇತನ್ ರಾಜ್ ಡಿ., ಸಾಹಿತ್ತಿಕ ಮಂತ್ರಿ-ಸಮರ್ಥ್ ಎಂ.ಪಿ., ಕಾರಿಡಾರ್ ಮಂತ್ರಿ-ಶ್ರೀಶಾಂತ್ ಗೌಡ ಹೆಚ್.ಹೆಚ್.ರವರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಸಹಶಿಕ್ಷಕ ರಾಧಾಕೃಷ್ಣ ಬಿ.ಅವರು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಭೋದಿಸಿದರು.
ಸಂಸ್ಥೆಯ ಆಡಳಿತಾಧಿಕಾರಿ ಆನಂದ ಎಸ್.ಟಿ. ಸ್ವಾಗತಿಸಿ, ತಾಂತ್ರಿಕ ಸಲಹೆಗಾರ ಜಯೇಂದ್ರ ಬಿ. ವಂದಿಸಿದರು. ಸಹಶಿಕ್ಷಕ ವಸಂತ್ ಕುಮಾರ್‌ರವರು ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು.

LEAVE A REPLY

Please enter your comment!
Please enter your name here