ಬೆಳಿಯೂರುಕಟ್ಟೆ ಸ.ಪ.ಪೂ.ಕಾಲೇಜಿನಲ್ಲಿ ಪೊಕ್ಸೋ,ಮಾನವ ಕಳ್ಳ ಸಾಗಾಣಿಕೆ ಮಾಹಿತಿ

0

ಪುತ್ತೂರು:ಬೆಳಿಯೂರುಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪುತ್ತೂರು ಗ್ರಾಮಾಂತರ ಪೋಲಿಸ್ ಠಾಣೆ ಜಂಟಿ ಆಶ್ರಯದಲ್ಲಿ ಪೋಕ್ಸೋ,ಮಾನವ ಕಳ್ಳ ಸಾಗಾಣಿಕೆ, ಸೈಬರ್ ಕ್ರೈಂ ಹಾಗೂ ಮಾದಕ ದ್ರವ್ಯ ತಡೆ ಕಾಯಿದೆಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಸಂಪ್ಯ ಗ್ರಾಮಾಂತರ ಠಾಣೆಯ ಅಪರಾಧ ವಿಭಾಗದ ಪೊಲೀಸ್ ಉಪನಿರೀಕ್ಷಕ ಸುಬ್ರಹ್ಮಣ್ಯರವರು ಉದ್ಘಾಟಿಸಿ, ಮಾಹಿತಿ ನೀಡಿದರು.ಕಾಲೇಜು ಪ್ರಾಂಶುಪಾಲರಾದ ಹರಿಪ್ರಕಾಶ ಬಿ.ರವರು ಸ್ವಾಗತಿಸಿ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುನೀತ ಎಂ.ರವರು ವಂದಿಸಿದರು.ಕಾರ್ಯಕ್ರಮದಲ್ಲಿ ಬೀಟ್ ಪೊಲೀಸ್ ನಾಗೇಶ್, ಹಿರಿಯ ಉಪನ್ಯಾಸಕಿ ಶ್ರೀಮತಿ ರವಿಕಲಾ ಟಿ.ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here