ತಾಲೂಕು ಬಿಲ್ಲವ ಸಂಘಕ್ಕೆ ಆಯ್ಕೆಅಧ್ಯಕ್ಷರಾಗಿ ಸತೀಶ್ ಕುಮಾರ್ ಕೆಡೆಂಜಿ ಪುನರಾಯ್ಕೆ

0


ಕಾರ್ಯದರ್ಶಿ:ಚಿದಾನಂದ ಸುವರ್ಣ,ಕೋಶಾಧಿಕಾರಿ:ಬಿ.ಟಿ ಮಹೇಶ್ಚಂದ್ರ ಸಾಲಿಯಾನ್

ಪುತ್ತೂರು: ಅವಿಭಜಿತ ಪುತ್ತೂರು ಹಾಗೂ ಕಡಬ ತಾಲೂಕು ಒಳಗೊಂಡ ಪ್ರತಿಷ್ಠಿತ ಪುತ್ತೂರು ತಾಲೂಕು ಬಿಲ್ಲವ ಸಂಘದ ಮುಂದಿನ 2023-25ನೇ ಸಾಲಿನ ಪದಾಧಿಕಾರಿಗಳ ಚುನಾವಣಾ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಪ್ರಗತಿಪರ ಕೃಷಿಕ, ಉದ್ಯಮಿ ಸತೀಶ್ ಕುಮಾರ್ ಕೆಡಂಜಿರವರು ಪುನರಾಯ್ಕೆಗೊಂಡಿದ್ದು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕುಂಜೂರುಪಂಜ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಚಿದಾನಂದ ಸುವರ್ಣ, ಕೋಶಾಧಿಕಾರಿಯಾಗಿ ಮಹಾನ್ ರಕ್ತದಾನಿ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್‌ರವರು ಪುನರಾಯ್ಕೆಗೊಡಿರುತ್ತಾರೆ.

ಆ.3ರಂದು ಸಂಘದ ಕಚೇರಿಯಲ್ಲಿ ಚುನಾವಣಾಧಿಕಾರಿ ಪುತ್ತೂರು ಬಿಲ್ಲವ ಸಂಘದ ಮಾಜಿ ಕಾರ್ಯದರ್ಶಿ,‌ ನಿವೃತ್ತ ತಹಶೀಲ್ದಾರ್ ವಿಶ್ವನಾಥ ಕೆಂಗುಡೇಲುರವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಉಪಾಧ್ಯಕ್ಷರುಗಳಾಗಿ ಅಶೋಕ್ ಕುಮಾರ್ ಪಡ್ಪು ಹಾಗೂ ವಿಮಲ ಸುರೇಶ್, ಜತೆ ಕಾರ್ಯದರ್ಶಿಯಾಗಿ ದಯಾನಂದ ಕರ್ಕೇರಾ ಆಲಂಕಾರುರವರು ಆಯ್ಕೆಯಾಗಿರುತ್ತಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪಿ.ಆನಂದ ಟೈಲರ್, ಬಾಳಪ್ಪ ಪೂಜಾರಿ, ಕೆ.ಪಿ ದಿವಾಕರ್, ಜಯಂತ್ ನಡುಬೈಲು, ಪಿ.ಆನಂದ ಪೂಜಾರಿ, ಶೀನಪ್ಪ ಪೂಜಾರಿ, ಜಯರಾಮ ಕರ್ಮಲ, ಅವಿನಾಶ್ ಹಾರಾಡಿ, ವೇದಾವತಿ, ಸಂಗೀತಾ ಮನೋಹರ್, ಜಯಲಕ್ಷ್ಮೀ ಸುರೇಶ್ ಕೇಪುಳು, ದೇವಿಕಾ ಬನ್ನೂರು, ವಲಯ ಸಂಚಾಲಕರಾಗಿ ಕಿರಣ್ ಕುಮಾರ್ ಬಲ್ನಾಡು(ಪುತ್ತೂರು ನಗರ), ಅಣ್ಣಿ ಪೂಜಾರಿ ಅನಂತಿಮಾರ್(ಪುತ್ತೂರು ಗ್ರಾಮಾಂತರ), ಅಶೋಕ್ ಕುಮಾರ್ ಪಡ್ಪು(ಉಪ್ಪಿನಂಗಡಿ), ಡಾ.ಸದಾನಂದ ಕುಂದರ್(ನೆಲ್ಯಾಡಿ), ಮಾಧವ ಪೂಜಾರಿ ರೆಂಜ(ಆರ್ಯಾಪು), ಜಯಂತ್ ಕೆಂಗುಡೇಲು(ಕುಂಬ್ರ), ಯತೀಶ್ ಪೂಜಾರಿ ಕಾವು(ಬಡಗನ್ನೂರು), ಶಿವಕುಮಾರ್ ಆನಡ್ಕ(ನರಿಮೊಗರು), ಸಂತೋಷ್ ಪೂಜಾರಿ ಮರಕ್ಕಡ(ಸವಣೂರು), ದಯಾನಂದ ಆಲಂಕಾರು(ಆಲಂಕಾರು), ಸುಂದರ ಪೂಜಾರಿ ಅಂಗಣ(ಕಡಬ), ಸತೀಶ್ ಕೆ.ಐತೂರು, ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳಾದ ಮಹಿಳಾ ಘಟಕದ ಅಧ್ಯಕ್ಷೆ ವಿಮಲ ಸುರೇಶ್, ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ಬಾಯಾರು, ಯುವವಾಹಿನಿ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಮನೋಹರ್ ಕುಮಾರ್, ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿ ಹೊನ್ನಪ್ಪ ಪೂಜಾರಿ ಕೈಂದಾಡಿ, ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಜಯಂತ್ ನಡುಬೈಲು, 51 ವಿವಿಧ ಗ್ರಾಮ ಸಮಿತಿ ಅಧ್ಯಕ್ಷರಾದ ಕೇಶವ ಪೂಜಾರಿ ಬೆದ್ರಾಳ(ಪುತ್ತೂರು ನಗರ), ಚಂದ್ರಶೇಖರ(ಬಲ್ನಾಡು), ಚಂದಪ್ಪ ಪೂಜಾರಿ(ಬುಳೇರಿಕಟ್ಟೆ), ಕೇಶವ ಪಿ(ಕೊಡಿಪ್ಪಾಡಿ), ಪ್ರಕಾಶ್ ಪೂಜಾರಿ(ಕೆಮ್ಮಿಂಜೆ), ವಾಸು ಕೆ(ಪಡ್ನೂರು), ಭಾಸ್ಕರ ಬಿ(ಚಿಕ್ಕಮುಡ್ನೂರು), ವಸಂತ ಪೂಜಾರಿ(ಬೆಳ್ಳಿಪ್ಪಾಡಿ), ಜಯಪ್ರಕಾಶ್ ಕೆ(ಕೋಡಿಂಬಾಡಿ), ವಸಂತ ಪೂಜಾರಿ(ಕಬಕ), ವಸಂತ ಕುಕ್ಕುಜೆ(ಉಪ್ಪಿನಂಗಡಿ), ನವೀನ್ ಪಿ(ಹಿರೇಬಂಡಾಡಿ), ಸೋಮಸುಂದರ(ಬಜತ್ತೂರು), ಅಜಿತ್ ಕುಮಾರ್(ಗೋಳಿತೊಟ್ಟು), ಮಾಧವ ಪೂಜಾರಿ(ಶಿರಾಡಿ), ಶ್ರೀನಿವಾಸ ಸಿ(ಇಚ್ಲಂಪಾಡಿ), ಮೋಹನ್ ಕುಮಾರ್(ನೆಲ್ಯಾಡಿ), ರವಿ ಸುವರ್ಣ(ಆರ್ಯಾಪು), ಶಶಿಧರ್ ಕಿನ್ನಿಮಜಲು(ಕುರಿಯ), ಚಿದಾನಂದ ಸುವರ್ಣ(ಕುಂಜೂರುಪಂಜ), ವಿಠಲ ಪೂಜಾರಿ(ಬೆಟ್ಟಂಪಾಡಿ), ವಿಶ್ವನಾಥ ಪೂಜಾರಿ(ಪಾಣಾಜೆ), ರಮೇಶ್ ಪೂಜಾರಿ(ನಿಡ್ಪಳ್ಳಿ), ಉಮೇಶ್ ಕುಮಾರ್(ಒಳಮೊಗ್ರು), ಬಾಲಕೃಷ್ಣ ಪಿ(ಕೆಯ್ಯೂರು), ಬಾಲಪ್ಪ ಸುವರ್ಣ(ಕೆದಂಬಾಡಿ), ಲಿಂಗಪ್ಪ ಪೂಜಾರಿ(ಕೊಳ್ತಿಗೆ), ಭರತ್ ಪೂಜಾರಿ(ಅರಿಯಡ್ಕ), ಕರುಣಾಕರ್ ಸಾಲ್ಯಾನ್(ಪಾಲ್ತಾಡಿ), ಜನಾರ್ದನ ಪೂಜಾರಿ(ಸುಳ್ಯಪದವು), ನಾರಾಯಣ ಪೂಜಾರಿ(ನೆಟ್ಟಣಿಗೆ ಮುಡ್ನೂರು), ಮೋನಪ್ಪ ಪೂಜಾರಿ(ಕಾವು), ವೇದನಾಥ ಸುವರ್ಣ(ನರಿಮೊಗರು), ವಿನಯ ಜಿ(ಆನಡ್ಕ), ರವಿಕುಮಾರ್ ಕೆ(ಶಾಂತಿಗೋಡು), ರಾಮಕೃಷ್ಣ ಎಸ್.ಡಿ(ಸರ್ವೆ), ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್(ಮುಂಡೂರು), ವಿಜಯಕುಮಾರ್ ಸೊರಕೆ(ಕಾಣಿಯೂರು), ಸತೀಶ್ ಕುಮಾರ್ ಕೆಡೆಂಜಿ(ಕುದ್ಮಾರು), ಗಂಗಾಧರ ಸುಣ್ಣಾಟೆ(ಸವಣೂರು), ದಿನೇಶ್ ಕೇಪುಳು(ಆಲಂಕಾರು), ಪುರುಷೋತ್ತಮ(ಹಳೇನೇರಂಕಿ), ವೇಣುಗೋಪಾಲ್ ಪೂಜಾರಿ(ರಾಮಕುಂಜ), ಹರ್ಷಿತ್ ಮಾಯಿಲ್ಗ(ಪೆರಾಬೆ), ಹರೀಶ್(ಬಲ್ಯ), ಲಕ್ಷ್ಮೀಶ ಬಂಗೇರ(ಕಡಬ), ಸುರೇಶ್ ಎಸ್(ಕೋಡಿಂಬಾಳ), ವಸಂತ ಪೂಜಾರಿ(ನೂಜಿಬಾಳ್ತಿಲ), ಸಂಜೀವ ಪೂಜಾರಿ(ರೆಂಜಿಲಾಡಿ), ಧನಂಜಯ(ಬಂಟ್ರ-ಐತೂರು-102 ನೆಕ್ಕಿಲಾಡಿ), ನೋಣಯ್ಯ ಕೆ(ಕೊಂಬಾರು) ಹೀಗೆ 80 ಮಂದಿ ಸಮಿತಿಯನ್ನು ಒಳಗೊಂಡಿರುತ್ತಾರೆ.
ಕಾರ್ಯದರ್ಶಿ ಚಿದಾನಂದ ಸುವರ್ಣ:
ಆರ್ಯಾಪು ಗ್ರಾಮದ ಗೆಣಸಿನಕುಮೇರು ನಿವಾಸಿ, ಪ್ರಗತಿಪರ ಕೃಷಿಕರಾದ ಚಿದಾನಂದ ಸುವರ್ಣರವರು ಕಳೆದ ಸಾಲಿನಲ್ಲಿ ಜೊತೆ ಕಾರ್ಯದರ್ಶಿಯಾಗಿರುತ್ತಾರೆ. ಕುಂಜೂರುಪಂಜ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷರಾಗಿ, ಸ್ವಾಭಿಮಾನಿ ಸೌಹಾರ್ದ ಸಹಕಾರಿಯ ನಿರ್ದೇಶಕರಾಗಿ, ಕುಂಜೂರುಪಂಜ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ವಳತ್ತಡ್ಕ ಆದಿಶಕ್ತಿ ಯುವಕ ಮಂಡಲದ ಮಾಜಿ ಅಧ್ಯಕ್ಷ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂಜೂರುಪಂಜ ಒಕ್ಕೂಟದ ಮಾಜಿ ಅಧ್ಯಕ್ಷರಾಗಿರುತ್ತಾರೆ.
ಕೋಶಾಧಿಕಾರಿ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್:
ಮುಂಡೂರು ಗ್ರಾಮದ ನಡುಬೈಲುಗುತ್ತು ನಿವಾಸಿಯಾಗಿರುವ ಬಿ.ಟಿ.ಮಹೇಶ್ಚಂದ್ರ ಸಾಲ್ಯಾನ್‌ರವರು ಮಹಾನ್ ರಕ್ತದಾನಿಯಾಗಿದ್ದು 62 ಬಾರಿ ರಕ್ತದಾನ ಮಾಡಿರುತ್ತಾರೆ.ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾಗಿರುವ ಇವರು, ಮುಂಡೂರು ಗ್ರಾ.ಪಂನಲ್ಲಿ ಮೂರು ಅವಧಿಯಲ್ಲಿ ಸದಸ್ಯರಾಗಿ, ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಪುತ್ತೂರು ರೋಟರ‍್ಯಾಕ್ಟ್ ಕ್ಲಬ್‌ನ ಅಧ್ಯಕ್ಷರಾಗಿ, ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷರಾಗಿ, ಯುವವಾಹಿನಿ ಕೇಂದ್ರ ಸಮಿತಿ ಸುಳ್ಯ ತಾಲೂಕು ಸಂಘಟನಾ ಕಾರ್ಯದರ್ಶಿಯಾಗಿ, ಕೇಂದ್ರ ಸಮಿತಿಯ ವಿವಿಧ ಪದಾಧಿಕಾರಿಯಾಗಿ, ತಾಲೂಕು ಬಿಲ್ಲವ ಸಂಘದ ಗ್ರಾಮ ಸಮಿತಿಗಳ ಚಾಲನೆಯ ಕಾರಣಕರ್ತರಾಗಿ, ನವೋದಯ ಸ್ವ-ಸಹಾಯ ಗುಂಪುಗಳ ತಾಲೂಕು ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ, ಬಿಲ್ಲವ ಮಹಾಮಂಡಲದಿಂದ ಸುಳ್ಯ ತಾಲೂಕು ಸಂಘಟನಾ ಜವಾಬ್ದಾರಿ, ಪಂಚಾಯತ್ ಜನಪ್ರತಿನಿಧಿಗಳ ತಾಲೂಕು ಒಕ್ಕೂಟದ ಕೋಶಾಧಿಕಾರಿ, ಮುಂಡೂರು ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ, ಭಕ್ತಕೋಡಿ ಶ್ರೀರಾಮ ಭಜನಾ ಮಂದಿರದ ಜತೆ ಕಾರ್ಯದರ್ಶಿ, ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದ ಷಷ್ಠಿ ಸಮಿತಿಯಲ್ಲಿ ಎರಡು ಬಾರಿ ಅಧ್ಯಕ್ಷರಾಗಿ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಸದಸ್ಯರಾಗಿ, ಪುತ್ತೂರು ತುಳು ಕೂಟದ ನಿರ್ದೇಶಕರಾಗಿ, ಭಕ್ತಕೋಡಿ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾಗಿ, ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.
ಉಪಾಧ್ಯಕ್ಷ ಅಶೋಕ್ ಕುಮಾರ್ ಪಡ್ಪು:
ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಅಶೋಕ್ ಕುಮಾರ್ ಪಡ್ಪುರವರು ಹಿರೇಬಂಡಾಡಿ ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷರಾಗಿ, ಬಿಲ್ಲವ ಗ್ರಾಮ ಸಮಿತಿಗಳ ಉಪ್ಪಿನಂಗಡಿ ವಲಯ ಸಂಚಾಲಕರಾಗಿ, ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಯುವವಾಹಿನಿ ಸಂಸ್ಥೆಯ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾಗಿ, ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ , ಅಲ್ಲದೇ ಅನೇಕ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿರುತ್ತಾರೆ.
ಉಪಾಧ್ಯಕ್ಷೆ ವಿಮಲ ಸುರೇಶ್:
ನೂತನ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ವಿಮಲ ಸುರೇಶ್‌ರವರು ಪ್ರಿಯದರ್ಶಿನಿ ಮಹಿಳಾ ಸಹಕಾರಿ ಸಂಘದ ನಿರ್ದೇಶಕಿಯಾಗಿ, ಪಡ್ನೂರು ಬಿಲ್ಲವ ಮಹಿಳಾ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಜೊತೆ ಕಾರ್ಯದರ್ಶಿ ದಯಾನಂದ ಕರ್ಕೇರಾ:
ಜೊತೆ ಕಾರ್ಯದರ್ಶಿಯಾಗಿ ಆಯ್ಕೆಯಾದ ದಯಾನಂದ ಕರ್ಕೇರಾ ಆಲಂಕಾರುರವರು ಆಲಂಕಾರು ಬಿಲ್ಲವ ಸಂಘದ ಅಧ್ಯಕ್ಷರಾಗಿ, ಗೆಜ್ಜೆಗಿರಿ ಕರಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಗೆಜ್ಜೆಗಿರಿ ಬ್ರಹ್ಮಕಲಶದ ಹೊರೆಕಾಣಿಕೆ ಸಮಿತಿಯ ತಾಲೂಕು ಸಂಚಾಲಕರಾಗಿ, ಆಲಂಕಾರು ಸರಕಾರಿ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ, ಆಲಂಕಾರು ಸಿಎ ಬ್ಯಾಂಕ್‌ನ ನಿರ್ದೇಶಕರಾಗಿ, ಪುತ್ತೂರು ಬಿಲ್ಲವ ಸಂಘದ ವಲಯ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸತತ ದ್ವಿತೀಯ ಬಾರಿ ಅಧ್ಯಕ್ಷರಾಗಿ ಸತೀಶ್ ಕೆಡೆಂಜಿ..
ಕುದ್ಮಾರು ಗ್ರಾಮದ ಕೆಡೆಂಜಿಗುತ್ತು ನಿವಾಸಿಯಾಗಿರುವ ಸತೀಶ್ ಕುಮಾರ್ ಕೆಡೆಂಜಿಯವರು ಪ್ರಸ್ತುತ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾಗಿ, ನರಿಮೊಗರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ, ಕೆಪಿಸಿಸಿ ಸದಸ್ಯರಾಗಿ, ದ.ಕ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರಾಗಿ, ಕುದ್ಮಾರು ಹಿ.ಪ್ರಾ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ, ಜಿಲ್ಲಾ ಕೆಡಿಪಿ ಸದಸ್ಯರಾಗಿ, ಕಡಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಹಾಗೂ ಕುದ್ಮಾರು ಹಿ.ಪ್ರಾ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿಯೂ ಇವರು ಸೇವೆ ಸಲ್ಲಿಸಿದ್ದರು.

ಪುತ್ತೂರು ಹಾಗೂ ಕಡಬ ತಾಲೂಕಿನ 51 ಗ್ರಾಮ ಸಮಿತಿಗಳ ಅಧ್ಯಕ್ಷರು, 12 ವಲಯಗಳ ಸಂಚಾಲಕರು, 12 ನಗರ ಪ್ರತಿನಿಧಿಗಳು, ಪುತ್ತೂರು, ಉಪ್ಪಿನಂಗಡಿ ಯುವವಾಹಿನಿಯ 2 ಅಧ್ಯಕ್ಷರು, ಓರ್ವ ಬಿಲ್ಲವ ಮಹಿಳಾ ಪ್ರತಿನಿಧಿ ಹಾಗೂ ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘ ಅಧ್ಯಕ್ಷರು ಸೇರಿದಂತೆ ಒಟ್ಟು 80 ಮಂದಿ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಗಿದೆ.

LEAVE A REPLY

Please enter your comment!
Please enter your name here