





ಪುತ್ತೂರು: ತನ್ನ ಸುತ್ತ ಮುತ್ತಲು ನಡೆಯುವ ಪ್ರತಿಯೊಂದು ಘಟನೆಗಳಿಗೆ ಏನು? ಏಕೆ ?ಹೇಗೆ? ಎಂಬ ಕಾರಣಗಳನ್ನು ಹುಡುಕುವುದರ ಮೂಲಕ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಮುಂಡೂರು ಶಾಲೆಯ ಮುಖ್ಯಗುರು ವಿಜಯ ಪಿ ಹೇಳಿದರು.
ಮುಂಡೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಜ್ಞಾನ ಸಂಘ ಹಾಗೂ ವಾರದ ವಿಜ್ಞಾನ ಪ್ರಯೋಗ ಇದರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.




ವಿಜ್ಞಾನ ಶಿಕ್ಷಕ ರವೀಂದ್ರ ಶಾಸ್ತ್ರಿ ವಿಜ್ಞಾನ ಸಂಘದ ಅಗತ್ಯ ಮತ್ತು ಸಂಘದ ಮೂಲಕ ಹಮ್ಮಿಕೊಳ್ಳಬಹುದಾದ ಕಾರ್ಯಚಟಿಕಗಳ ಬಗ್ಗೆ ವಿವರಿಸಿದರು. ಹಿರಿಯ ಶಿಕ್ಷಕ ರಾಮಚಂದ್ರ ಗೌಡ ಅವರು ಮುಂದಿನ ದಿನಗಳಲ್ಲಿ ಪ್ರತಿ ಗುರುವಾರ ವಿಜ್ಞಾನ ಪ್ರಯೋಗಗಳನ್ನು ಮಾಡಿ ಮಕ್ಕಳಲ್ಲಿ ವಿಜ್ಞಾನದ ಬಗೆಗಿನ ಆಸಕ್ತಿಯನ್ನು ಹೆಚ್ಚಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಹಲಿಮತ್ ಹಿಬಾ, ಸೃಜನ್ ಕೆ ಹಾಗೂ ಪರ್ಝಾನ ಇವರು ವಿಜ್ಞಾನದ ಕೆಲವು ಪ್ರಯೋಗಗಳನ್ನು ಮಾಡಿದರು.
ವಿಜ್ಞಾನ ಸಂಘದ ಸದಸ್ಯರಾದ ಮುಹಮ್ಮದ್ ರಾಝಿಕ್ ಸ್ವಾಗತಿಸಿದರು. ತೇಜಸ್ ವಂದಿಸಿದರು. ಅಧ್ಯಕ್ಷ ಕೆ.ನಿಹಾಲ್ ರೈ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು.














