ಪುತ್ತೂರು : ಸವಣೂರು ಅರೆಲ್ತಡಿ ಸ.ಕಿ. ಪ್ರಾ . ಶಾಲೆಯಲ್ಲಿ ಸ್ವಚ್ಛತೆ ಮತ್ತು ಶ್ರಮದಾನ ಹಾಗೂ ವನಮಹೋತ್ಸವ ಇತ್ತೀಚೆಗೆ ನೆರವೇರಿತು.
ಕಾರ್ಯಕ್ರಮವನ್ನೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟ ಅರೆಲ್ತಡಿ ಕಾರ್ಯಕ್ಷೇತ್ರ , ಪೋಷಕರು ಹಾಗೂ ಎಸ್ಡಿಎಂಸಿ ಸದಸ್ಯರುಗಳು ಮತ್ತು ಊರಿನವರ ಸಹಕಾರದೊಂದಿಗೆ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟ ಇದರ ಸೇವಾ ಪ್ರತಿನಿಧಿ ಪ್ರೇಮಾ ಸಾಂಕೇತಿಕವಾಗಿ ಗಿಡವನ್ನು ನೀಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ , ಹಾರೈಸಿದರು.
ಎಸ್ ಡಿ ಎಮ್ ಸಿ ಅಧ್ಯಕ್ಷೆ ಸೀತಮ್ಮ ,ಸಿದ್ದೀಕ್ ಅರೆಲ್ತಡಿ , ಆರಿಸ್ ಪಾರೆ, ನಾರಾಯಣಗೌಡ ಕಡೆಂಜಿ ಮಾರು, ಬದ್ರುನ್ನೀಸಾ ಅರೆಲ್ತಡಿ ,ಅವ್ವಮ್ಮ ,ಸಫಿಯ , ಹೇಮಾ ಕೆಡಂಜಿ,ಅನುರಾಧ, ಜ್ಯೋತಿ ಪಟ್ಟೆ, ವನಜಾಕ್ಷಿ ಕೆಡಂಜಿ ಮಾರು, ರೋಹಿಣಿ ಕೆಡಂಜಿ, ಸುನಿತಾ ಮಡಕೆ, ಜಯಶ್ರೀ ಕುದ್ಮನ ಮಜಲು, ಪವಿತ್ರ ಕೆಡಂಜಿ, ಅಪ್ಸ , ಖತೀಜ ಮೊಗರು, ಪಾಚು ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯ ಗುರು ಜಗನ್ನಾಥ್ ಎಸ್ ಸ್ವಾಗತಿಸಿ, ಶ್ರೀಕಾಂತ ನಾಯಕ್ ಕಂಬಳ ಕೊಡಿ ಧನ್ಯವಾದ ವಿತ್ತರು .ಗೌರವ ಶಿಕ್ಷಕಿ ರಮ್ಯ ರೈ ಸಹಕರಿಸಿದರು.