ಪುತ್ತೂರು:`ಸಹಕಾರಿ ಪಿತಾಮಹ’ ಮೊಳಹಳ್ಳಿ ಶಿವರಾಯರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮವಾಗಿ ಸ್ಥಾಪಿಸಲ್ಪಟ್ಟ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ನಲ್ಲಿ 143ನೇ ಬ್ಯಾಂಕ್ ಸ್ಥಾಪಕರ ದಿನಾಚರಣೆಯನ್ನು ಆ.4ರಂದು ಆಚರಿಸಲಾಯಿತು.
ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ನ ಅಧ್ಯಕ್ಷ ಎನ್.ಕಿಶೋರ್ ಕೊಳತ್ತಾಯ ಅವರು ಮೊಳಹಳ್ಳಿ ಶಿವರಾಯರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ ಪುತ್ತೂರು ಪೇಟೆಯ ಬೆಳವಣಿಗೆಯಂತೆ ಬ್ಯಾಂಕ್ ಕೂಡಾ ಅಭಿವೃದ್ಧಿಯಾಗಿದೆ. ಸ್ಥಾಪಕರ ಉದ್ದೇಶದಂತೆ ಪುತ್ತೂರಿನ ಅಭಿವೃದ್ಧಿಯಲ್ಲಿ ಬ್ಯಾಂಕ್ ಯಾವ ರೀತಿ ತೊಡಗಿಸಿಕೊಳ್ಳಬಹುದೆಂದು ಚಿಂತಿಸುವ ಮೂಲಕ ಅವರ ಆದರ್ಶಗಳನ್ನು ಪಾಲಿಸೋಣ ಎಂದರು. ಈ ಸಂದರ್ಭದಲ್ಲಿ ಬ್ಯಾಂಕ್ನ ಉಪಾಧ್ಯಕ್ಷ ಕುಡ್ಗಿ ವಿಶ್ವಾಸ್ ಶೆಣೈ, ನಿರ್ದೇಶಕರಾದ ಚಂದ್ರಶೇಖರ್ ರಾವ್ ಬಪ್ಪಳಿಗೆ, ನಾರಾಯಣ ಎ.ವಿ., ಚಂದ್ರಶೇಖರ್ ಗೌಡ ಕೆ., ವಿನೋದ್ ಕುಮಾರ್ ಬಿ., ಮಲ್ಲೇಶ್ ಕುಮಾರ್, ಹೇಮಾವತಿ, ರಮೇಶ್ ನಾಯ್ಕ್ ಕೆ. ಗಾಯತ್ರಿ ಪಿ, ಸದಾಶಿವ ಪೈ, ಕಿರಣ್ ಕುಮಾರ್ ರೈ, ಜಯಂತಿ, ನಗರಸಭೆ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಕೃಷ್ಣಕುಮಾರ್ ರೈ, ರತ್ನಪ್ರಸಾದ್, ಬ್ಯಾಂಕ್ನ ಪ್ರಭಾರ ಮಹಾಪ್ರಬಂಧಕ ಚಿದಂದರ ಗೌಡ, ಸಹಾಯಕ ಮಹಾಪ್ರಬಂಧಕ ಚೇತನ್ ಯು.ಎನ್, ಸಿಬ್ಬಂದಿಗಳಾದ ಜ್ಯೋತಿ, ಪವನ್ ನಾಯಕ್, ಗಿರೀಶ್ರಾಜ್ ಎಂ.ವಿ, ಮಮತ, ರಮ್ಯ, ಆಶಿಕಾ ಎ ಕುಮಾರ್, ಶ್ರೀಕಾಂತ್, ಉದಯ ಕುಮಾರ್ ಕೆ, ಎಂ ನಾರಾಯಣ ನಾಕ್, ರುಕ್ಮಯ್ಯ ಐ, ಉಪಸ್ಥಿತರಿದ್ದರು.