ಕಾಣಿಯೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಡಬ ತಾಲೂಕು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ನಡೆಯುತ್ತಿರುವ ಮದ್ಯವರ್ಜನ ಶಿಬಿರದಲ್ಲಿ ಗಣ್ಯರಿಂದ ಮಾಹಿತಿ- ಮಾರ್ಗದರ್ಶನ ಆ.5ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉದಯ ರೈ ಮಾದೋಡಿ ವಹಿಸಿದ್ದರು. ಕಡಬ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಕೆ ಸವಣೂರು, ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ನಾವೂರು, ಬಿಳಿನೆಲೆ ವಲಯದ ಜನಜಾಗೃತಿ ವೇದಿಕೆಯ ಅಧ್ಯಕ್ಷ ತಮ್ಮಯ್ಯ ಗೌಡ, ಬೆಳಂದೂರು ಗ್ರಾ.ಪಂ.ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಕಾಣಿಯೂರು ಗ್ರಾ.ಪಂ.ಸದಸ್ಯರಾದ ವಸಂತ ಪೆರ್ಲೋಡಿ, ರಾಮಣ್ಣ ಗೌಡ ಮುಗರಂಜ, ಸವಣೂರು ಗ್ರಾ.ಪಂ.ಸದಸ್ಯ ತೀರ್ಥಕುಮಾರ್ ಕೆಡೆಂಜಿ, ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಮಣ್ಣ ಗೌಡ ಮೂಡೈಮಜಲು, ಪ್ರಗತಿಪರ ಕೃಷಿಕ ಲೋಕನಾಥ್ ವಜ್ರಗಿರಿ, ಕುದ್ಮಾರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ವಾರಿಜಾ, ಮಂಗಳೂರು ಹಾಫ್‌ಕಾಮ್ಸ್ ನಿರ್ದೇಶಕ ಸಚಿನ್‌ಕುಮಾರ್ ಜೈನ್, ನಾಣಿಲ ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷೆ ಭಾಗೀರಥಿ, ಸಮಿತಿಯ ಕೋಶಾಧಿಕಾರಿ ಸುರೇಶ್ ಓಡಬಾಯಿ, ಜತೆ ಕಾರ್ಯದರ್ಶಿ ಜಯಂತ ಅಬೀರ ಉಪಸ್ಥಿತರಿದ್ದರು. ಬಿಳಿನೆಲೆ ವಲಯ ಮೇಲ್ವೀಚಾರಕ ಆನಂದ ಡಿ.ಬಿ ಸ್ವಾಗತಿಸಿ, ಸಿರಿಬಾಗಿಲು ಸೇವಾಪ್ರತಿನಿಧಿ ವಿನೋದ್ ಕೆ.ಸಿ ವಂದಿಸಿದರು. ಬಿಳಿನಲೆ ಸೇವಾಪ್ರತಿನಿಧಿ ಸತೀಶ್ ಎ ಕಾರ್ಯಕ್ರಮ ನಿರೂಪಿಸಿದರು.