ಪುತ್ತೂರು: ಪುತ್ತೂರು ಒಕ್ಕಲಿಗ ಮಹಿಳಾ ಗೌಡ ಸಂಘದಿಂದ ಆಟಿ ಹಬ್ಬ-2023 ಕಾರ್ಯಕ್ರಮ ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಆ.6 ರಂದು ಉದ್ಘಾಟನೆಗೊಂಡಿತು.
93 ವರ್ಷ ಪ್ರಾಯದ ದರ್ಬೆ ನಿವಾಸಿ ಮಾಧವಿ ಕೆ ಅವರು ಕಾರ್ಯಕ್ರಮ ಉದ್ಘಾಟಿಸಿ ಚೆನ್ನೆಮಣೆ ಆಡುವ ಮೂಲಕ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿದರು.
ಮೂಡನಂಬಿಕೆಯಲ್ಲ ವೈಜ್ಞಾನಿಕ ಸತ್ಯವಿದೆ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಒಕ್ಕಲಿಗ ಗೌಡ ಮಹಿಳಾ ಸಂಘದ ಉಪಾಧ್ಯಕ್ಷೆ ಗೀತಾ ಅವರು ಮಾತನಾಡಿ ಆಟಿ ಆಚರಣೆ ಮೂಡನಂಬಿಕೆಯಲ್ಲ ವೈಜ್ಞಾನಿಕ ಸತ್ಯವಿದೆ. ಸಮುದಾಯ ಬಾಂಧವರು ಒಟ್ಟುಗೂಡುವುದು ಇಲ್ಲಿ ಮುಖ್ಯ ಎಂದರು.
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಸಲಹಾ ಸಮಿತಿ ಉಪಾಧ್ಯಕ್ಷ ಚಿದಾನಂದ ಬೈಲಾಡಿ, ಮಂಗಳೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಗುರುದೇವ್, ಯುವ ಗೌಡ ಸೇವಾ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ, ಮಹಿಳಾ ಗೌಡ ಸಂಘದ ಪ್ರಧಾನ ಕಾರ್ಯದರ್ಶಿ ವಾರಿಜಾ ಕೆ ಗೌಡ ಶುಭ ಹಾರೈಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಮಕ್ಕಳು ಹುರುಪಿನಿಂದ ಭಾಗವಹಿಸಿದರು. ಖಜಾಂಜಿ ಉಷಾಮಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೇಮಲತಾ ನಂದಿಲ ಸ್ವಾಗತಿಸಿ, ವಿದ್ಯಾ ಲಿಂಗಪ್ಪ ಗೌಡ ವಂದಿಸಿದರು. ಸಂಧ್ಯಾ ಬೈಲಾಡಿ ಕಾರ್ಯಕ್ರಮ ನಿರೂಪಿಸಿದರು.