ಪೆರಿಯಡ್ಕ:ರಬ್ಬರ್ ಕಾರ್ಮಿಕರ ಹೊಡೆದಾಟ-ಮರದ ತುಂಡಿನಿಂದ ಹಲ್ಲೆ-ಆಸ್ಪತ್ರೆಗೆ ದಾಖಲು

0

ಉಪ್ಪಿನಂಗಡಿ:ರಬ್ಬರ್ ಟ್ಯಾಪಿಂಗ್ ಕಾರ್ಮಿಕರ ನಡುವೆ ಜಗಳ ನಡೆದು ಓರ್ವ ಆಸ್ಪತ್ರೆಗೆ ದಾಖಲಾದ ಘಟನೆ ಉಪ್ಪಿನಂಗಡಿ ಪೆರಿಯಡ್ಕದ ನೆಡ್ಚಿಲ್ ಬಳಿ ಶನಿವಾರ ರಾತ್ರಿ ನಡೆದಿದೆ.


ಕೇರಳ ಮೂಲದ ಮೂವರು ಇಲ್ಲಿ ಬಾಡಿಗೆ ರೂಂನಲ್ಲಿದ್ದು, ರಬ್ಬರ್ ಟ್ಯಾಪಿಂಗ್ ಕೆಲಸ ನಡೆಸುತ್ತಿದ್ದರು.ಶನಿವಾರ ರಾತ್ರಿ ಇವರು ತಮ್ಮ ಬಾಡಿಗೆ ಕೊಠಡಿಯಲ್ಲಿ ಪರಸ್ಪರ ಜಗಳವಾಡಿಕೊಂಡಿದ್ದಾರೆ.ಈ ವೇಳೆ ಇಬ್ಬರು ಸೇರಿ ಮರದ ತುಂಡಿನಿಂದ ಮತ್ತೋರ್ವನ ತಲೆಗೆ ಹೊಡೆದಿದ್ದಲ್ಲದೆ, ತೀವ್ರ ಗಾಯಗೊಂಡು ಬಿದ್ದಿದ್ದ ಈತನನ್ನು ಕೊಠಡಿಯ ಹೊರಗೆ ಹಾಕಿ, ಬಾಗಿಲು ಹಾಕಿ ಕುಳಿತ್ತಿದ್ದರು.ಸ್ಥಳೀಯರು ಇದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿ, ಗಾಯಾಳುವನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ.ಈತನ ತಲೆಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ.ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಬಂದು ಹಲ್ಲೆ ನಡೆಸಿದ ಇಬ್ಬರನ್ನು ಕರೆದೊಯ್ದಿದ್ದಾರೆ.ಇವರ ಊರು ಹಾಗೂ ಹೆಸರು ಸೇರಿದಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

LEAVE A REPLY

Please enter your comment!
Please enter your name here