ಪುತ್ತೂರು ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಭರ್ಜರಿ ಮಾನ್ಸೂನ್ ಧಮಾಕ

0

*ಭಾರೀ ರಿಯಾಯಿತಿ
*ಬಹುಮಾನಗಳ ಸುರಿಮಳೆ
*ಪ್ರತಿ ಖರೀದಿಗೊಂದು ಕೂಪನ್
*ಪಾರದರ್ಶಕ ಡ್ರಾ

ಪುತ್ತೂರು: ಕಳೆದ 21 ವರ್ಷಗಳಿಂದ ಗ್ರಾಹಕರ ಸೇವೆಯಲ್ಲಿರುವ ಪುತ್ತೂರು ಶೇಟ್ ಇಲೆಕ್ಟ್ರಾನಿಕ್ಸ್ ತನ್ನ ಪಾರದರ್ಶಕ ಸೇವೆಯ ಮೂಲಕ ಗ್ರಾಹಕರಿಂದ ಶಹಬ್ಬಾಸ್ ಗಿಟ್ಟಿಸಿಕೊಂಡಿದೆ. ಎಲ್ಲಾ ಬಗೆಯ ಇಲೆಕ್ಟ್ರಾನಿಕ್ಸ್ ಐಟಮ್‌ಗಳು ಹಾಗೂ ಸಿಸಿಟಿವಿ ಸೇಲ್ಸ್ ಮತ್ತು ಸರ್ವಿಸ್‌ನ ಮೂಲಕ ಗ್ರಾಹಕರಿಂದ ವಿಶ್ವಾಸನೀಯ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದುಕೊಂಡಿರುವ ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಮಳೆಗಾಲದ ಭರ್ಜರಿ ಆಫರ್ ಆರಂಭಗೊಂಡಿದೆ. ಭಾರೀ ರಿಯಾಯಿತಿಯಲ್ಲಿ ಇಲೆಕ್ಟ್ರಾನಿಕ್ಸ್ ಐಟಮ್‌ಗಳನ್ನು ಖರೀದಿಸಬಹುದಾಗಿದೆ. ಇದಲ್ಲದೆ ಪ್ರತಿ ರೂ.2000ದ ಖರೀದಿಗೆ ಒಂದು ಕೂಪನ್ ನೀಡಲಾಗುತ್ತಿದ್ದು ಈ ಕೂಪನ್‌ನಲ್ಲಿ ದ್ವಿಚಕ್ರ ವಾಹನದಿಂದ ಹಿಡಿದು ಹಲವು ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ.

ಗ್ರಾಹಕರ ವಿಶ್ವಾಸ ಗಳಿಸಿಕೊಂಡ ಸಂಸ್ಥೆ: ಶೇಟ್ ತನ್ನ ಆರಂಭದ ದಿನದಿಂದಲೇ ಗ್ರಾಹಕರಿಗೆ ರಿಯಾಯಿತಿ ಮತ್ತು ಆಕರ್ಷಕ ಬಹುಮಾನಗಳನ್ನು ಕೊಡುತ್ತಾ ಬಂದಿದೆ. ಆದ್ದರಿಂದಲೇ ತನ್ನ 21 ವರ್ಷಗಳ ಸೇವಾ ಅವಧಿಯಲ್ಲೂ ಗ್ರಾಹಕರಿಂದ ವಿಶ್ವಾಸನೀಯ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿದೆ.
ಮಾನ್ಸೂನ್ ಧಮಾಕ ಭರ್ಜರಿ ಆಫರ್: ಶೇಟ್‌ನಲ್ಲಿ ಮಳೆಗಾಲದ ವಿಶೇಷ ಆಫರ್ ಆರಂಭಗೊಂಡಿದೆ. 2000 ರೂಪಾಯಿಯ ಖರೀದಿಗೆ ಒಂದು ಲಕ್ಕಿ ಕೂಪನ್ ನೀಡಲಾಗುತ್ತಿದೆ. ಈ ಸಲ ವಿಶೇಷವಾಗಿ ಒಂದು ಕುಕ್ಕರ್ ಖರೀದಿಸಿದರೆ ಇನ್ನೊಂದು ಕುಕ್ಕರ್ ಉಚಿತ, ಒಂದು ಗ್ಯಾಸ್ ಸ್ಟೌವ್ ಖರೀದಿಸಿದರೆ ಮಿಕ್ಸಿಯನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಇದಲ್ಲದೆ ಸೆಮಿ ಅಟೋಮ್ಯಾಟಿಕ್ ವಾಷಿಂಗ್ ಮೆಷಿನ್ ಖರೀದಿಯ ಮೇಲೆ ರೂ.2೦೦೦ದ ಉಚಿತ ಗಿಪ್ಟ್ ಪಡೆದುಕೊಳ್ಳಬಹುದು, ಅಟೋಮ್ಯಾಟಿಕ್ ವಾಷಿಂಗ್ ಮೆಷಿನ್ ಖರೀದಿಯ ಮೇಲೆ ರೂ.3೦೦೦ ಬೆಲೆಯ ಆಕರ್ಷಕ ಉಡುಗೊರೆ ತಮ್ಮದಾಗಿಸಿಕೊಳ್ಳಬಹುದು. ಇದಲ್ಲದೆ ಸಿಂಗಲ್ ಡೋರ್ ರೆಫ್ರಿಜರೇಟರ್ ಖರೀದಿ ಮೇಲೆ ರೂ.2೦೦೦ದ ಗಿಫ್ಟ್ ಇದೆ. ಡಬ್ಬಲ್ ಡೋರ್ ರೆಫ್ರಿಜರೇಟರ್ ಖರೀದಿ ಮೇಲೆ 3೦೦೦ ರೂ.ಬೆಲೆಯ ಉಡುಗೊರೆ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಹತ್ತು ಹಲವು ಆಕರ್ಷಕ ಗಿಫ್ಟ್‌ಗಳನ್ನು ತಮ್ಮದಾಗಿಸಿಕೊಳ್ಳಬಹುದು. ಹಾಗಾದರೆ ತಡ ಯಾಕೆ ಇಂದೇ ಶೇಟ್‌ಗೆ ಭೇಟಿ ಕೊಡಿ ನಿಮ್ಮಿಷ್ಟದ ಇಲೆಕ್ಟ್ರಾನಿಕ್ಸ್ ಐಟಮ್ ಖರೀದಿಸಿ ಅದರೊಂದಿಗೆ ಆಕರ್ಷಕ ಉಡುಗೊರೆ ಸಹಿತ ಮನೆಗೊಯ್ಯಿರಿ.
ಭಾರೀ ರಿಯಾಯಿತಿ ದರದಲ್ಲಿ ಸಿಸಿಟಿವಿ ಅಳವಡಿಕೆ: ಇನ್ನೆಲ್ಲೂ ಸಿಗದ ಭಾರೀ ರಿಯಾಯಿತಿ ದರದಲ್ಲಿ ಸಿಸಿಟಿವಿ ಅಳವಡಿಸಿಕೊಳ್ಳುವ ಸುವರ್ಣಾವಕಾಶವನ್ನು ಶೇಟ್ ತನ್ನೆಲ್ಲಾ ಗ್ರಾಹಕರಿಗೆ ನೀಡುತ್ತಿದೆ. ಸಿಸಿಟಿವಿ ಅಳವಡಿಸಬೇಕು ಎಂದುಕೊಂಡಿದ್ದರೂ ಅದೆಷ್ಟು ಖರ್ಚಾಗುತ್ತದೆ ಎಂಬ ಚಿಂತೆ ಬಿಟ್ಟು ಬಿಡಿ ಕೇವಲ ರೂ.9797 ಗೆ ನಿಮ್ಮ ಮನೆ, ಕಛೇರಿಗಳಲ್ಲಿ ಸಿಸಿಟಿವಿ ಅಳವಡಿಸಿಕೊಳ್ಳಬಹುದಾಗಿದೆ. ಇದಲ್ಲದೆ ಇಂಟರ್‌ಕಂ, ಬಯೋ ಮೆಟ್ರಿಕ್ ಅಟೆಂಡೆನ್ಸ್, ಆಕ್ಸಸ್ ಕಂಟ್ರೋಲ್ ಎಲ್ಲವೂ ರಿಯಾಯಿತಿ ದರದಲ್ಲಿ ಲಭ್ಯವಿದೆ. ನಮ್ಮ ಮನೆಯ ತೋಟದಲ್ಲಿ ಸಿಸಿಟಿವಿ ಅಳವಡಿಸಬೇಕು ಎಂಬ ಆಸೆ ಇರುತ್ತದೆ. ಆದರೆ ತುಂಬಾ ಖರ್ಚು ತಗಲುತ್ತದೆ ಎಂದು ಬಿಟ್ಟು ಬಿಡುತ್ತೇವೆ. ಇದೀಗ ತೋಟಗಳಲ್ಲಿ ಅಳವಡಿಸಲು ವಯರ್‌ಲೆಸ್ ಸೋಲಾರ್ ಸಿಸಿಟಿವಿ ಲಭ್ಯವಿದೆ. ಸಿಸಿಟಿವಿ ಸೇಲ್ಸ್ ಮತ್ತು ಸರ್ವಿಸ್ ಹಾಗೂ ಹೆಚ್ಚಿನ ಮಾಹಿತಿಗೆ ಗ್ರಾಹಕರು ಮೊಬೈಲ್ ನಂಬರ್ 7022306090 ಗೆ ಕರೆ ಮಾಡಬಹುದಾಗಿದೆ.
ಅಟೋಮೇಶನ್ ಸಿಸ್ಟಮ್‌ಗೆ ಶೇಟ್‌ಗೆ ಬನ್ನಿ: ಅಟೋಮೇಶನ್ ಸಿಸ್ಟಮ್ ಇತ್ತೀಚಿನ ದಿನಗಳಲ್ಲಿ ಕೃಷಿಕರಿಗೆ ಅತೀ ಮುಖ್ಯ. ಯಾಕೆಂದರೆ ತೋಟದಲ್ಲಿ ಪಂಪು ಸ್ವಿಚ್ ಆನ್ ಮಾಡಿ ಬಂದರೆ ಸ್ವಿಚ್ ಆಫ್ ಮಾಡಲು ಮತ್ತೆ ತೋಟಕ್ಕೆ ಹೋಗಬೇಕಾಗುತ್ತದೆ. ಆದರೆ ತೋಟಕ್ಕೆ ಹೋಗದೆ ಯಾವುದೇ ಸ್ಥಳದಿಂದ ಬೇಕಾದರೂ ಮೊಬೈಲ್‌ನಲ್ಲೇ ಪಂಪು ಮತ್ತು ಇನ್ನಿತರ ಇಲೆಕ್ಟ್ರಾನಿಕ್ ಉಪಕರಣಗಳನ್ನು ಸ್ವಿಚ್ ಆನ್ ಆಫ್ ಮಾಡುವ ಆಧುನಿಕ ಶೈಲಿಯ ಅಟೋಮೇಶನ್ ಸಿಸ್ಟಮ್ ಅನ್ನು ಶೇಟ್‌ನಿಂದ ಅಳವಡಿಸಿಕೊಡಲಾಗುತ್ತಿದೆ.
ಸುಲಭ ಕಂತುಗಳಲ್ಲಿ ಲಭ್ಯ: ಕೈಯಲ್ಲಿ ಹಣ ಇಲ್ಲ ಎಂಬ ಚಿಂತೆಯನ್ನು ಬಿಟ್ಟು ಬಿಡಿ ಇಂದೇ ಶೇಟ್‌ಗೆ ಬನ್ನಿ ಶೂನ್ಯ ಬಡ್ಡಿ ದರದಲ್ಲಿ ನಿಮ್ಮ ಮನೆಗೆ ಬೇಕಾದ ಇಲೆಕ್ಟ್ರಾನಿಕ್ಸ್ ಐಟಮ್‌ಗಳನ್ನು ಸುಲಭ ಕಂತುಗಳ ಮೂಲಕ ಖರೀದಿಸಿ. ಗ್ರಾಹಕರ ಅನುಕೂಲಕ್ಕಾಗಿ ಬಜಾಜ್, ಎಚ್‌ಡಿಬಿ, ಎಚ್‌ಡಿಎಫ್‌ಸಿ, ಟಿವಿಎಸ್, ಕೊಟಾಕ್‌ನಂತಹ ಫೈನಾನ್ಸ್ ಸಂಸ್ಥೆಗಳ ಮೂಲಕ ತಮಗೆ ಬೇಕಾದ ಐಟಮ್‌ಗಳನ್ನು ಕಂತುಗಳಲ್ಲಿ ಖರೀದಿಸುವ ಅವಕಾಶ ಶೇಟ್‌ನಲ್ಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಸ್ಕೂಟರ್ ಸಹಿತ 35 ಬಹುಮಾನಗಳು
ಈ ಸಲದ ಡ್ರಾದಲ್ಲಿ ಬಂಪರ್ ಬಹುಮಾನವಾಗಿ ಸ್ಕೂಟರ್ ನೀಡಲಾಗಿದೆ. ಒಟ್ಟು 35 ಬಹುಮಾನಗಳಿದ್ದು ಉಳಿದಂತೆ 4 ಎಲ್‌ಇಡಿ ಟಿವಿ, 2 ರೆಫ್ರಿಜರೇಟರ್, 10 ಮಿಕ್ಸರ್ ಗ್ರೈಂಡರ್, 3 ಮೈಕ್ರೋ ವೋವೆನ್, 10 ಇಂಡೆಕ್ಷನ್ ಸ್ಟೌವ್ ಹಾಗೂ 5 ಗ್ಯಾಸ್ ಸ್ಟೌವ್ ಇದೆ. ಪಾರದರ್ಶಕವಾಗಿ ಎಲ್ಲರ ಎದುರಲ್ಲೇ ನಡೆಯುವ ಡ್ರಾ ದ ಮೂಲಕ ಗ್ರಾಹಕರು ತಮ್ಮ ಅದೃಷ್ಟವನ್ನು ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ.

ಕರೆ ಮಾಡಿ
ಹೆಚ್ಚಿನ ಮಾಹಿತಿಗೆ ಶೇಟ್ ಇಲೆಕ್ಟ್ರಾನಿಕ್ಸ್ ಪುತ್ತೂರು ಸೆಂಟರ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೆಳಗಡೆ, ತಾಲೂಕು ಆಫೀಸ್ ರಸ್ತೆ. ಮೊ: 7022306099, 7022306090 ಗೆ ಕರೆ ಮಾಡಬಹುದಾಗಿದೆ.

ಖರೀದಿಸಿ ಬಹುಮಾನ ಗೆಲ್ಲಿರಿ
ಇದು ಶೇಟ್‌ನ ವಿಶೇಷತೆ. ಗ್ರಾಹಕರಿಗೆ ಇನ್ನೆಲ್ಲೂ ಸಿಗದ ಒಂದು ಬಂಪರ್ ಅವಕಾಶವನ್ನು ಶೇಟ್ ಒದಗಿಸಿಕೊಟ್ಟಿದೆ. ಕಳೆದ 10 ವರ್ಷಗಳಿಂದ `ಖರೀದಿಸಿ ಮತ್ತು ಬಹುಮಾನ ಗೆಲ್ಲಿರಿ’ ಡ್ರಾ ನಡೆಯುತ್ತಿದೆ. ಶೇಟ್‌ನಿಂದ 2 ಸಾವಿರ ಬೆಲೆಯ ಯಾವುದೇ ವಸ್ತುವನ್ನು ಖರೀದಿಸಿದಾಗ ಒಂದು ಕೂಪನ್ ನೀಡಲಾಗುತ್ತಿದೆ. ಈ ಕೂಪನ್ ಅನ್ನು ಡ್ರಾ ಮಾಡಲಾಗುತ್ತದೆ. ಇದರಲ್ಲಿ ಅತ್ಯಾಕರ್ಷಕ ಬಹುಮಾನಗಳಿರುತ್ತವೆ. ಈಗಾಗಲೇ ಬಂಪರ್ ಬಹುಮಾನವಾಗಿ ಕಾರು ಗೆದ್ದ ಗ್ರಾಹಕರು ನಮ್ಮ ಜೊತೆ ಇದ್ದಾರೆ. ಈ ಮಾನ್ಸೂನ್ ಆಫರ್‌ನಲ್ಲೂ ಗ್ರಾಹಕರಿಗೆ ವಿಶೇಷ 23 ಬಹುಮಾನಗಳನ್ನು ನೀಡಲಾಗಿದೆ. ಇದರ ಡ್ರಾ ಆಗಸ್ಟ್ ಅಂತ್ಯಕ್ಕೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here