ಪ್ರಕರಣವನ್ನು ಮರುತನಿಖೆಗೆ ಆಗ್ರಹಿಸಿ ಹೋರಾಟಕ್ಕೆ ನಿರ್ಧಾರ
ಸಮಾಜದಿಂದ ಹೋರಾಟ ಸಮಿತಿ, ವಕೀಲರ ಸಮಿತಿಯಿಂದ ಪ್ರತ್ಯೇಕ ರೀತಿಯಲ್ಲಿ ಹೋರಾಟ
ಸಭೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ಭಾಗಿ
ಪುತ್ತೂರು: ದ.ಕ ಜಿಲ್ಲೆ, ಬೆಳ್ತಂಗಡಿ ತಾಲೂಕು, ಉಜಿರೆಯಲ್ಲಿ 2011 ರಲ್ಲಿ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ನೈಜ್ಯ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಮುಂದಿನ ಹೋರಾಟಕ್ಕೆ ಜಿಲ್ಲಾ ಮಟ್ಟದ ಹೋರಾಟ ಸಮಿತಿ ರಚನೆಯಾಗಿದೆ.
ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಆ.6 ರಂದು ಮಂಗಳೂರು, ಸುಳ್ಯ, ಬೆಳ್ತಂಗಡಿ, ಕಡಬ , ಬಂಟ್ವಾಳ, ವಿಟ್ಲ, ಪುತ್ತೂರು ತಾಲೂಕಿನ ಒಕ್ಕಲಿಗ ಗೌಡ ಸಮಾಜ ಬಾಂಧವರ ಜಿಲ್ಲಾ ಮಟ್ಟದ ಗೌಡ ಸಭೆ ಯಲ್ಲಿ ಸುದೀರ್ಘ ಚರ್ಚೆಯ ಬಳಿಕ ಈ ಹೋರಾಟ ಸಮಿತಿ ರಚನೆಯಾಗಿದೆ. ಸಭೆಯಲ್ಲಿ ಸೌಜನ್ಯ ಅವರ ತಾಯಿ ಕುಸುಮಾವತಿ ಸಹಿತ ಅವರ ಸಂಬಂಧಿಕರು ಕೂಡಾ ಸಭೆಯಲ್ಲಿ ಭಾಗವಹಿಸಿದ್ದರು. ಅವರ ಸಂಬಂಧಿಕಾರದ ವಿಠಲ ಮತ್ತು ಜಗದೀಶ್ ಅವರು ಸೌಜನ್ಯ ಕೊಲೆ ನಡೆದ ಮತ್ತು ಅದರ ಬಳಿಕ ನಡೆದ ತನಿಖೆ, ಬೆದರಿಕೆ ಕುರಿತು ಮಾಹಿತಿ ನೀಡಿದರು. ಕುಸುಮಾವತಿ ಅವರು ಮಾತನಾಡಿ ನನಗೆ ನ್ಯಾಯ ಕೊಡಿಸಿ ಎಂದು ಅವಲತ್ತುಗೊಂಡರು.
ಪ್ರಕರಣವನ್ನು ಮರುತನಿಖೆಗೆ ಆಗ್ರಹಿಸಿ ಹೋರಾಟ ನಿರ್ಧಾರ
ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಬಂಧಿತವಾದ ಆರೋಪಿಯನ್ನು ನಿರಪರಾಧಿಯೆಂದು ನ್ಯಾಯಾಲಯವು ಘೋಷಿಸಿದೆ. ಇದೀಗ ನೈಜ ಆಪರಾಧಿಗಳು ಯಾರೆಂದು ಇಲ್ಲಿಯವರೆಗೂ ಗೊತ್ತಾಗಿರುವುದಿಲ್ಲ. ಅದುದರಿಂದ ಈ ಪ್ರಕರಣವನ್ನು ಮರು ತನಿಖೆ ನಡೆಸಿ ನೈಜ ಅಪರಾಧಿಯನ್ನು ಪತ್ತೆ ಹಚ್ಚಿ ಸೂಕ್ತ ಶಿಕ್ಷೆ ನೀಡುವಂತೆ ವಿವಿಧ ರೀತಿಯ ಹೋರಾಟದ ಮೂಲಕ ಒತ್ತಾಯಿಸಲಾಗುವುದು. ಜೊತೆಯಲ್ಲಿ ವಕೀಲರಗಳ ಪ್ರತ್ಯೇಕ ಸಮಿತಿಯಿಂದ ಕಾನೂನಾತ್ಮಕ ರೀತಿಯಲ್ಲಿ ಹೋರಾಟ ನಡೆಯಲಿದೆ.
ಹೋರಾಟದ ಜಿಲ್ಲಾ ಸಂಘಟನಾ ಸಂಚಾಲಕರಾಗಿ ಡಿ.ಬಿ.ಬಾಲಕೃಷ್ಣ ಆಯ್ಕೆ
ಜಿಲ್ಲಾ ಮಟ್ಟದ ಸಭೆಯಲ್ಲಿ ಸಮಾಜದ ಪ್ರಮುಖರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸುದೀರ್ಘ ಚರ್ಚೆಗಳ ಬಳಿಕ ಹೋರಾಟ ಸಮಿತಿ ಮಾಡುವ ತೀರ್ಮಾನ ಕೈಗೊಂಡು ಮಂಗಳೂರು ಒಕ್ಕಲಿಗರ ಗೌಡ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಬಿ ಬಾಲಕೃಷ್ಣ ಗೌಡರನ್ನು ಹೋರಾಟದ ಜಿಲ್ಲಾ ಸಂಘಟನಾ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು. ಅವರಿಗೆ ರಕ್ಷಿತ್ ವಿದ್ಯುನ್ಮಾನ ಬಳಕೆಯ ಮೂಲಕ ಜಿಲ್ಲಾ ಸದಸ್ಯರ ಸಂಪರ್ಕಕ್ಕಾಗಿ ಸಹ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು. ಉಳಿದಂತೆ ಎಲ್ಲಾ ತಾಲೂಕಿನ ಒಕ್ಕಲಿಗ ಗೌಡ ಸೇವಾ ಸಂಘ, ಯುವ ಸಂಘ, ಮಹಿಳಾ ಸಂಘದ ಅಧ್ಯಕ್ಷರುಗಳು ಸಹ ಸಂಚಾಲಕರಾಗಿರುತ್ತಾರೆ ಎಂದು ಸಭೆಯಲ್ಲಿ ಸೂಚಿಸಲಾಯಿತು. ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಉಪಾಧ್ಯಕ್ಷ ಚಿದಾನಂದ ಬೈಲಾಡಿ, ಬೆಳ್ತಂಗಡಿಯ ಅಧ್ಯಕ್ಷ ಕುಶಾಲಪ್ಪ ಗೌಡ, ಮಂಗಳೂರು ಸಂಘದ ಅಧ್ಯಕ್ಷ ಗುರುದೇವ್, ಕಡಬದ ಅಧ್ಯಕ್ಷ ಸುರೇಶ್, ಸುಳ್ಯದ ಅಧ್ಯಕ್ಷ ಚಂದ್ರ ಕೋಲ್ಚರ್, ಪುತ್ತೂರು ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಕಿರಣ್ ಬುಡ್ಲೆಗುತ್ತು, ಆನಂದ ಗೌಡ, ವಕೀಲ ನವೀನ್, ಬೆಳ್ತಂಗಡಿಯ ಗೌರವಾಧ್ಯಕ್ಷ ಪದ್ಮ ಗೌಡ, ಪ್ರವೀಣ್ ಕುಂಟ್ಯಾನ, ನಾಗೇಶ್ ಕೆಡೆಂಜಿ, ತಿಮ್ಮಪ್ಪ ಗೌಡ, ಗೋಪಾಲಕೃಷ್ಣ, ಸುಬ್ರಾಯ, ಪುರುಷೋತ್ತಮ ಮುಂಗ್ಲಿಮನೆ , ಹಿರಿಯರಾದ ಲೀಲಾವತಿ ಅವರು ಹೋರಾಟಕ್ಕೆ ಸಲಹೆ ನೀಡಿದರು.