ಪುತ್ತೂರು: ಅಂತರಾಷ್ಟ್ರೀಯ ರೋಟರಿಯಲ್ಲಿ ನೀರು ಮತ್ತು ಶುಚಿತ್ವಕ್ಕೆ ಸಂಬಂಧಿಸಿದ ಕ್ರಿಯಾತ್ಮಕ ಗುಂಪು (ವಾಶ್ ವಾಟರ್, ಸ್ಯಾನಿಟೇಶನ್, ಹೈಜೀನ್) ಇದರ ರೋಟರಿ ಜಿಲ್ಲೆ 3181ರ ಪ್ರಥಮ ರಾಯಭಾರಿಯಾಗಿ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಡಾ.ರಾಜೇಶ್ ಬೆಜ್ಜಂಗಳ ಅವರು ಮೂರು ವರ್ಷಗಳ ಅವಧಿಗೆ ನೇಮಕಗೊಂಡಿದ್ದಾರೆ.
ಅಂತಾರಾಷ್ಟ್ರೀಯ ರೋಟರಿಯು UCRK ಚಟುವಟಿಕೆಗಳನ್ನು ಏಷ್ಯಾ ,ಯುರೋಪ್, ಅಮೇರಿಕಾ ಮತ್ತು ಆಫ್ರಿಕನ್ ವಿಭಾಗ ಮಾಡಲಾಗಿದ್ದು 83ನೇ ರಾಯಭಾರಿಯಾಗಿ ರಾಜೇಶ್ ಬೆಜ್ಜಂಗಳ ನೇಮಕಗೊಂಡಿದ್ದಾರೆ. ರೋಟರಿ ಭಾರತದಲ್ಲಿ 16 ಮಂದಿ ಇದ್ದು ಕರ್ನಾಟಕದಲ್ಲಿ ಇವರು ಎರಡನೇ ರಾಯಭಾರಿಯಾಗಿರುತ್ತಾರೆ. ರೋಟರಿ ಜಿಲ್ಲೆ 3181ರ ಎಲ್ಲಾ ಕ್ಲಬ್ ಗಳಲ್ಲಿ ನಡೆಯುವ ನೀರು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಮಾರ್ಗದರ್ಶನ ಮತ್ತು ದಾಖಲೀಕರಣವು ರಾಯಭಾರಿಗಳ ಜವಾಬ್ದಾರಿಯಾಗಿರುತ್ತದೆ.
ಈ ವಲಯದ ಸೇವಾ ಅನುಭವ ಮತ್ತು ರೋಟರಿಯ 185 ಆನ್ ಲೈನ್ ಕೋರ್ಸ್ ಗಳು ಸೇರಿದಂತೆ ವಿಶ್ವಬ್ಯಾಂಕ್, ವಿಶ್ವ ಸಂಸ್ಥೆ ಮತ್ತು ಸ್ವಚ್ಚ ಭಾರತ ಮಿಷನ್ ಗಳ 200 ಆನ್ ಲೈನ್ ಕೋರ್ಸ್ ಗಳು ಈ ಸ್ಥಾನ ಪಡೆಯಲು ಸಹಕರಿಸಿದೆ.