ಪರಿವಾರ ಬಂಟರ ಸಂಘದಿಂದ ಕೆಸರ್ಡ್ ಒಂಜಿದಿನ

0

ಪುತ್ತೂರು:ಪರಿವಾರ ಬಂಟರ ಸಂಘ ಮಂಗಳೂರು, ಪರಿವಾರ ಬಂಟರ ಸಂಘ ಪುತ್ತೂರು ವಲಯ, ಮಹಿಳಾ ವೇದಿಕೆ, ಯುವ ಪರಿವಾರ ಬಂಟರ ಸಂಘ ಪುತ್ತೂರು ವಲಯದ ಸಹಭಾಗಿತ್ವದಲ್ಲಿ ಎರಡನೇ ವರ್ಷದ ಕೆಸರ್ಡ್ ಒಂಜಿ ದಿನ ವಿವಿಧ ಕ್ರೀಡಾ ಕೂಟಗಳು ಆ.6ರಂದು ತೆಂಕಿಲ ಕೊಟ್ಟಿಬೆಟ್ಟು ಏಳ್ನಾಡ್‌ಗುತ್ತು ತರವಾಡಿನ ಸಮೀಪ ಗದ್ದೆಯಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಪರಿವಾರ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ನಿರ್ದೇಶಕ ರತ್ನಾಕರ್ ನಾೖಕ್‌ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪ್ರಸ್ತುತ ದಿನಗಳಲ್ಲಿ ಗದ್ದೆ ಬೇಸಾಯ, ಉಳುಮೆ ಮಾಡುವುದು, ಹಳ್ಳಿಯ ಆಟಗಳು ಕಣ್ಮರೆಯಾಗಿದ್ದು ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಮನರಂಜನೆಯ ಜೊತೆಗೆ ಪುರಾತನ ಕಲೆ, ಸಂಪ್ರದಾಯಗಳನ್ನು ಯುವ ಪೀಳಿಗೆಗೆ ತಿಳಿದುಕೊಳ್ಳಲು ಸಹಕಾರಿಯಾಗಲಿದೆ ಎಂದರು.‌


ಪರಿವಾರ ಬಂಟರ ಸಂಘ ಕೇಂದ್ರ ಸಮತಿ ಹಾಗೂ ಪರಿವಾರ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಅಧ್ಯಕ್ಷ ಸಂತೋಷ್ ಕುಮಾರ್ ಎ. ಮಾತನಾಡಿ, ಕೆಸರುಗದ್ದೆ ಕ್ರೀಡಾಕೂಟಗಳು ಮೂಲಕ ಪುರಾತನ ಸಂಪ್ರದಾಯಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗದ್ದು ಯುವ ಜನಗೆ ಹೆಚ್ಚು ಹೆಚ್ಚು ಭಾಗವಹಿಸಬೇಕು ಎಂದರು.


ಅಧ್ಯಕ್ಷತೆ ವಹಿಸಿದ್ದ ಪರಿವಾರ ಬಂಟರ ಸಂಘದ ಅಧ್ಯಕ್ಷ ಸುಧಾಕರ ಕೆ.ಪಿ ಮಾತನಾಡಿ, ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜ ಬಾಂಧವರ ಸಹಕಾರದಿಂದ ಕಾರ್ಯಕ್ರಮವು ಉತ್ತಮವಾಗಿ ಮೂಡಿಬಂದಿದೆ, ಮುಂದೆಯೂ ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಸಮಾಜ ಬಾಂಧವರು ಸಹಕರಿಸುವಂತೆ ಅವರು ತಿಳಿಸಿದರು.


ಪಿಡಬ್ಲ್ಯೂಡಿ ಗುತ್ತಿಗೆದಾರ ಸಂದೀಪ್ ನಾಕ್, ಕೆಸರುಗದ್ದೆ ಕ್ರೀಡಾಕೂಟದ ಸ್ಥಳದಾನಿ ಶಶಿಧರ್ ನಾಕ್, ಸಂಘದ ಉಪಾಧ್ಯಕ್ಷ ಶಾಂತಕುಮಾರ್ ನಾಕ್, ಮಹಿಳಾ ಘಟಕದ ಅಧ್ಯಕ್ಷ ಶಕೀಲಾ ಡಿ.ನಾಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸನ್ಮಾನ:
ಕೆಸರು ಗದ್ದೆ ಕ್ರೀಡಾಕೂಟಕ್ಕೆ ಗದ್ದೆ ನೀಡಿ ಸಹಕರಿಸಿದ ಶಶಿಧರ ನಾಕ್, ಕಾರ್ಯಕ್ರಮದ ಸಂಪೂರ್ಣ ವ್ಯವಸ್ಥ ಕಲ್ಪಿಸಿದ್ದ ಪ್ರವೀಣ್ ನಾೖಕ್‌ ಕೊಟ್ಟಿಬೆಟ್ಟುರವರನ್ನು ಸನ್ಮಾನಿಸಲಾಯಿತು.
ಬಳಿಕ ನಡೆದ ಕ್ರೀಡಾಕೂಟದಲ್ಲಿ ಸುದರ್ಶನ್ ನಾಕ್ ಕಂಪ ಹಾಗೂ ಅವರ ಪುತ್ರ ಜತಿನ್ ನಾೖಕ್‌ ಕಂಪ ಸವಣೂರು ಇವರಿಂದ ಕಂಬಳ ಕೋಣಗಳ ಓಟ ವಿಶೇಷ ಆಕರ್ಷಣೆಯಾಗಿತ್ತು. ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದ್ದು ಓಟ, ರಿಲೇ ಓಟ, ಕಂಬಲ ಓಟ, ಹಾಳೆ ಎಳೆಯುವುದು, ತ್ರೋಬಾಲ್, ಪಿರಮಿಡ್ ಮೂಲಕ ಮಡಕೆ ಒಡೆಯುವುದು, ಬಾಂಬ್ ಇನ್ ದ ಸಿಟಿ, ಹಗ್ಗ ಜಗ್ಗಾಟ, ನಿಧಿ ಶೋಧ, ಹಿಮ್ಮುಟ ಓಟ, ದಂಪತಿಗಳು ಹಾಳೆ ಎಳೆಯುವುದು ಸೇರಿದಂತೆ ವಿವಿಧ ಆಟಗಳಲ್ಲಿ ಭಾಗವಹಿಸಿ ಸ್ಪರ್ಧೆಯ ಜೊತೆಗೆ ಮನರಂಜನೆಯು ದೊರೆಯಿತು.


ಮಹಿಳಾ ವೇದಿಕೆಯಿಂದ ಬೆಳಗ್ಗಿನ ಉಪಾಹಾರ, ಸಂದೀಪ್ ನಾೖಕ್‌ರಿಂದ ಮಧ್ಯಾಹ್ನದ ಭೋಜನ ಹಾಗೂ ಡಾ.ಅನ್ವಿತಾ ಅಭಿಜಿತ್ ನಾಕ್‌ರವರು ಸಂಜೆಯ ಉಪಾಹಾರದ ಪ್ರಯೋಜಕತ್ವ ನೀಡಿದ್ದರು.


ಜಿಯಾ, ಯಶ್ವೀ, ಋತ್ವಿಕಾ ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ಕವನ್ ನಾೖಕ್‌ ಸ್ವಾಗತಿಸಿದರು. ಯುವ ಪರವಾರ ಬಂಟರ ಸಂಘದ ಅಧ್ಯಕ್ಷ ಅಭಿಜಿತ್ ನಾಕ್ ಕೊಳಕ್ಕಿಮಾರ್ ವಂದಿಸಿದರು. ದೀಕ್ಷಾ ಸರ್ವೇಶ್ ನಾೖಕ್‌ ಕಾರ್ಯಕ್ರಮ ನಿರೂಪಿಸಿದರು. ಸ್ಮಿತಾ ಸುಜೀತ್ ನಾೖಕ್‌ ಹನಿಯೂರು ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಅನಿತಾ ವಸಂತ ನಾೖಕ್‌, ರಕ್ಷಿತ್ ನಾೖಕ್‌, ವೀಕ್ಷಿತ್ ಕಲ್ಲಿಮಾರ್, ಮಿಥೇಶ್, ನಿರೋಷ್, ಸರ್ವೆಶ್, ಗಗನ್ ನಾೖಕ್‌, ರಾಜೇಶ್ ನಾೖಕ್‌, ರೋಹಿತ್ ನಾೖಕ್‌, ಹರ್ಷಿತಾ, ಋತ್ವಿಕ್, ದಯಾರಾಜ್ ನಾೖಕ್‌, ಅಭೀಷ್, ರಶ್ಮೀ, ಗುರುವಚನ್, ಪವನ್, ವಸಂತಿ ಪಿ. ನಾೖಕ್‌, ಕಾವ್ಯ, ಲಿಖಿತ್, ಸಂದೀಪ್ ನಾೖಕ್‌, ಡಾ.ನಮಿತಾ, ಬಾಲಕೃಷ್ಣ ನಾೖಕ್‌ ನಂದಿಲ, ದೀಕ್ಷಿತ್ ನಾೖಕ್‌, ಗಣೇಶ್ ಬಂಜಾರ, ಹರ್ಷಿಲ್, ಸ್ನೇಹಿ, ಶಿವಕುಮಾರ್, ನವೀನ್, ಸಂತೋಷ್, ನಯನಾ, ಬಾಲಕೃಷ್ಣ ನಾಕ್ ಮಾಲ್ತೊಟ್ಟು, ಹರೀಶ್ ನಾೖಕ್‌ ಮಾಲ್ತೊಟ್ಟು ಹಾಗೂ ಭಾಸ್ಕರ ನಾೖಕ್‌ ನಂದಿಲ ಕಾರ್ಯಕ್ರಮದಲ್ಲಿ ಸಹಕರಿಸಿದರು.


‘ಕೆಸರ್ಡ್ ಒಂಜಿ ದಿನ’ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು ಇದರಲ್ಲಿ ವಿಜೇತರಾದವರು. ರನ್ನಿಂಗ್ ರೇಸ್: 12 ವರ್ಷದೊಳಗಿನ ಹೆಣ್ಣು ಮಕ್ಕಳ ವಿಭಾಗದಲ್ಲಿ ಪ್ರನಿಷ್ಕ ಪ್ರಥಮ, ಜಿಯಾ ದ್ವಿತೀಯ, 12 ವರ್ಷದೊಳಗಿನ ಗಂಡು ಮಕ್ಕಳ ವಿಭಾಗದಲ್ಲಿ ಲಲನ್ ಪ್ರಥಮ, ಚಮನ್ ದ್ವಿತೀಯ, 12 ರಿಂದ 18 ವರ್ಷದೊಳಗಿನ ಹುಡುಗರ ವಿಭಾಗದಲ್ಲಿ ತನುಷ್ ಪ್ರಥಮ, ಕಾರ್ತಿಕ್ ದ್ವಿತೀಯ, 12 ರಿಂದ 18 ವರ್ಷದೊಳಗಿನ ಹುಡುಗಿಯರ ವಿಭಾಗದಲ್ಲಿ ಲೋಶ್ನಿ ಪ್ರಥಮ, ವೀಕ್ಷಾ ದ್ವಿತೀಯ, 18 ವರ್ಷ ಮೇಲ್ಪಟ್ಟ ಹುಡುಗಿಯರ ವಿಭಾಗದಲ್ಲಿ ವೈಭವಿ ಪ್ರಥಮ, ಸುಪ್ರಿತಾ ದಿತೀಯ, ಹುಡುಗರ ವಿಭಾಗದಲ್ಲಿ ಹಿತೇಷ್ ಪ್ರಥಮ, ಸುನಿಲ್ ದ್ವಿತೀಯ.

ವಾಕಿಂಗ್ ರೇಸ್: ಮಹಿಳೆಯರ ವಿಭಾಗದಲ್ಲಿ ಅನಿತಾ ಪ್ರಥಮ, ಗೀತಾ ಸದಾಶಿವ ದ್ವಿತೀಯ, ಪುರುಷರ ವಿಭಾಗದಲ್ಲಿ ಬಾಲಕೃಷ್ಣ ಮಾಲ್ತೊಟ್ಟು ಪ್ರಥಮ, ಯಶ್ವಿತ್ ದ್ವೀತಿಯ.

ಕಂಬಳ ರೇಸ್: 12ರಿಂದ 18 ವರ್ಷದೊಳಗಿನ ಹುಡುಗರ ವಿಭಾಗದಲ್ಲಿ ತನುಷ್ ಮತ್ತು ಬಳಗದವರು ಪ್ರಥಮ, ಭವಿಷ್ ಮತ್ತು ಬಳಗ ದ್ವಿತೀಯ, ಮಕ್ಕಳ ವಿಭಾಗದಲ್ಲಿ ಲೋಶ್ನಿ ಮತ್ತು ಬಳಗ ಪ್ರಥಮ, ಹುಡುಗಿಯರ ವಿಭಾಗದಲ್ಲಿ ಮಾನ್ವಿ ಮತ್ತು ಬಳಗದವರು ಪ್ರಥಮ, 18 ರಿಂದ ಮೇಲ್ಪಟ್ಟ ಮಹಿಳೆಯರ ವಿಭಾಗದಲ್ಲಿ ಪೂಜಾ ಮತ್ತು ಬಳಗ ಪ್ರಥಮ, ಅಹನ ಮತ್ತು ಬಳಗ ದ್ವಿತೀಯಾ .6 ರಿಂದ 12 ವರ್ಷದೊಳಗಿನ ಹುಡುಗರ ವಿಭಾಗದಲ್ಲಿ ಲಲನ್ ಮತ್ತು ಬಳಗ ಪ್ರಥಮ, ಸಹಜ್ ಮತ್ತು ಬಳಗ ದ್ವಿತೀಯಾ, 12 ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಸ್ನೇಹಿಲ್ ಮತ್ತು ಬಳಗ ಪ್ರಥಮ, ಸುನಿಲ್ ಮತ್ತು ಬಳಗ ದ್ವಿತೀಯಾ.

ಬಾಂಬ್ ಇನ್ ದ ಸಿಟಿ: ವೀಕ್ಷಾ ಮತ್ತು ಬಳಗ ಪ್ರಥಮ, ನಿರೋಷ್ ಮತ್ತು ಬಳಗ ದ್ವಿತೀಯಾ.
ಅಡಿಕೆ ಸೋಗೆ ರ್‍ಯಾಲಿ: ಅನಿತಾ, ಸುಪ್ರೀತಾ ಪ್ರಥಮ, ವೀಕ್ಷಾ, ಅಶ್ವಿನಿ ದ್ವಿತೀಯಾ, ದಂಪತಿಗಳ ವಿಭಾಗದಲ್ಲಿ ಸುಪ್ರಿತಾ ಸುನಿಲ್ ಪ್ರಥಮ.
ರಿಲೇ: ಮಹಿಳಾ ವಿಭಾಗದಲ್ಲಿ ಶರಣ್ಯ ಮತ್ತು ಬಳಗ ಪ್ರಥಮ, ಅಶ್ವಿನಿ ಮತ್ತು ಬಳಗ ದ್ವಿತೀಯಾ , ಮಕ್ಕಳ ವಿಭಾಗದಲ್ಲಿ ತನುಷ್ ಮತ್ತು ಬಳಗ ಪ್ರಥಮ, ಶ್ರೀಶಾನ್ ಮತ್ತು ಬಳಗ ದ್ವಿತೀಯಾ , ಪುರುಷರ ವಿಭಾಗದಲ್ಲಿ ಸುನಿಲ್ ಮತ್ತು ಬಳಗ ಪ್ರಥಮ, ಜಯರಾಜ್ ಮತ್ತು ಬಳಗ ದ್ವಿತೀಯಾ ,
ತ್ರೋಬಾಲ್: ಪೂಜಾ ಮತ್ತು ಬಳಗ ಪ್ರಥಮ, ಸುಪ್ರೀತಾ ಮತ್ತು ಬಳಗ ದ್ವಿತೀಯಾ , 12 ರಿಂದ 18 ವರ್ಷದೊಳಗಿನ ಹುಡುಗರ ವಿಭಾಗದಲ್ಲಿ ಜನಮ್ ಮತ್ತು ಬಳಗ ಪ್ರಥಮ, ಮಹಿಮ್ ಮತ್ತು ಬಳಗ ದ್ವಿತೀಯಾ ,
ಹಗ್ಗ ಜಗ್ಗಾಟ ಸ್ಪರ್ಧೆ:ಮಹಿಳೆಯರ ವಿಭಾಗದಲ್ಲಿ ಸೌಮ್ಯ ಮತ್ತು ಬಳಗ ಪ್ರಥಮ, ರಿಷಾ ಮತ್ತು ಬಳಗ ದ್ವಿತೀಯಾ ಪುರುಷರ ವಿಭಾಗದಲ್ಲಿ ನೀತು ಮತ್ತು ಬಳಗ ಪ್ರಥಮ, ದಯಾರಾಜ್ ಮತ್ತು ಬಳಗ ದ್ವಿತೀಯಾ , 18 ವರ್ಷದೊಳಗಿನ ಹುಡುಗರ ವಿಭಾಗದಲ್ಲಿ ಉಜ್ವಲ್ ಮತ್ತು ಬಳಗ ಪ್ರಥಮ.
ಹಿಂಬದಿ ಓಟ: ಪ್ರಣೀಕ್ಷಾ ಪ್ರಥಮ, ಜಿಯಾ ದ್ವಿತೀಯಾ, ಹುಡುಗರ ವಿಭಾಗದಲ್ಲಿ ಹೃತ್ವಿಕ್ ಪ್ರಥಮ, ಶಿಶಿರ್ ದ್ವಿತೀಯಾ , 12 ರಿಂದ 18 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ನಿಹಾಲ್ ಪ್ರಥಮ, ತನುಷ್ ದ್ವಿತೀಯಾ , ಹುಡುಗಿಯರ ವಿಭಾಗದಲ್ಲಿ ವರ್ಷಿಕ ಪ್ರಥಮ, ಜಗತಿ ದ್ವಿತೀಯಾ ಅದಲ್ಲದೆ ಮಡಿಕೆ ಒಡೆಯುವ ಸ್ಪರ್ಧೆ, ನಿಧಿಹುಡುಕಾಟ ಸ್ಪಧೆಗಳನ್ನು ಏರ್ಪಡಿಸಲಾಗಿತ್ತು. ಎಲ್ಲಾ ಸ್ಪರ್ಧೆಗಳ ತೀರ್ಪುಗಾರರಾಗಿ ಅನಿತಾ ವಸಂತ್ ನಾೖಕ್‌, ಸ್ಮಿತಾ ಸುಜಿತ್ ನಾೖಕ್‌,ಹರ್ಷಿತಾ ರಾಧಾಕೃಷ್ಣನಾಕ್ ರಶ್ಮೀ ಉಮಾಶಂಕರ್ ನಾೖಕ್‌ ಸಹಕರಿಸಿದರು.

LEAVE A REPLY

Please enter your comment!
Please enter your name here