ಬಿಎಂಎಸ್ ಆಟೋ ರಿಕ್ಷಾ ಚಾಲಕ ಮಾಲ್ಹಕರ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ

0

ರೂ. 1.81ಲಕ್ಷ ಲಾಭ, ಶೇ.5 ಡಿವಿಡೆಂಡ್ ಘೋಷಣೆ


ಪುತ್ತೂರು: ಬಿಎಂಎಸ್ ಆಟೋರಿಕ್ಷಾ ಚಾಲಕ ಮಾಲ್ಹಕರ ಸೌಹಾರ್ದ ಸಹಕಾರಿ ಸಂಘವು 2022-23 ನೇ ಸಾಲಿನಲ್ಲಿ 4,14,95,556ರೂ ವ್ಯವಹಾರ ನಡೆಸಿ, ಶೇ.1,81,432ರೂ ಲಾಭ ಗಳಿಸಿದ್ದು ಸಹಕಾರಿ ಸಂಘದ ನಿಯಮದಂತೆ ಲಾಭಾಂಶ ವಿಂಗಡನೆ ಮಾಡಿ ಸದಸ್ಯರಿಗೆ ಶೇ.5 ಡಿವಿಡೆಂಡ್ ನೀಡುವುದಾಗಿ ಸಂಘದ ಅಧ್ಯಕ್ಷ ಸುರೇಶ್ ಸುದಾಕರ್ ನಾಯಕ್ ಅವರು ಘೋಷಣೆ ಮಾಡಿದ್ದಾರೆ.


ಪುತ್ತೂರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಮುದಾಯ ಭವನದ ಸಭಾಭವನದಲ್ಲಿ ಆ.8ರಂದು ನಡೆದ ಬಿಎಂಎಸ್ ಆಟೋ ರಿಕ್ಷಾ ಚಾಲಕ ಮಾಲ್ಹಕರ ಸೌಹಾರ್ದ ಸಹಕಾರಿ ಸಂಘದ ಮಹಾಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಮಾತೃ ಸಂಘಕ್ಕೆ ರಿಕ್ಷಾ ಚಾಲಕರ ಅನೇಕ ಸಮಸ್ಯೆಗಳ ಕುರಿತು ದೂರುಗಳು ಬರುತ್ತಿತ್ತು. ಆದರೆ ಈ ದೂರುಗಳ ಪೈಕಿ ಬಡ್ಡಿ ವ್ಯವಹಾರದಲ್ಲಿ ಸಾಲ ಪಡೆದ ವಿಚಾರದಲ್ಲೂ ದೂರು ಬರುತ್ತಿರುವುದು ಸಂಘಕ್ಕೆ ಇಕ್ಕಟ್ಟಾಗಿತ್ತು. ಆಗ ಸದಸ್ಯರು ಬಹಳಷ್ಟು ಮಂದಿ ಲೇವಾದೇವಿಯಿಂದ ತೊಂದರೆ ಅನುಭವಿಸುತ್ತಿರುವುದು ಕಂಡು ಈ ಸಮಸ್ಯೆಗಳ ಪರಿಹಾರವಾಗಿ ಹುಟ್ಟಿಕೊಂಡ ಸಂಘವೇ ನಮ್ಮದೇ ಸೌಹಾರ್ದ ಸಂಘ. ಸಂಘದ ಆರಂಂಭದ ಒಂದು ವರ್ಷ ಬಹಳಷ್ಟು ಕಷ್ಟ ಪಟ್ಡಿದ್ದೇವೆ. ಇವತ್ತು ನಮ್ಮ ಅದೇಷ್ಟೋ ಸದಸ್ಯರಿಗೆ ಸಂಘದ ಮೂಲಕ ಪ್ರಯೋಜನ ಲಭಿಸಿದೆ. ಎಷ್ಟೋ ಮಂದಿ ಲೇವಾದೇವಿಯ ಮೂಲಕ ರಿಕ್ಷಾ ಕಳೆದು ಕೊಂಡವರು ಮತ್ತೆ ರಿಕ್ಷಾವನ್ನು ರಸ್ತೆಗೆ ಇಳಿಸಲು ಸಂಘ ಸಹಕಾರ ನೀಡಿದೆ. ಈ ಮೂಲಕ ಸಂಘ ಸದಸ್ಯರ ಕುಟುಂಬದ ಜೀವನ ನಿರ್ವಹಣೆಗೆ ಅನುಕೂಲವಾಗಿದೆ. ಇವತ್ತು ಸಂಘ ೫ ವರ್ಷ ಯಶಸ್ವಿಯಾಗಿ ಪೂರೈಸಿದಲ್ಲದೆ ಲಾಭದಲ್ಲಿದ್ದೇವೆ ಎಂದ ಅವರು ಸಾಲ ಪಡೆದವರು ಕ್ಲಪ್ತ ಸಮಯದಲ್ಲಿ ಮರುಪಾವತಿ ಮಾಡುವಂತೆ ವಿನಂತಿಸಿದರು.

ಸಂಘದ ಕಾರ್ಯನಿರ್ವಹಣಾಧಿಕಾರಿ ಸರ್ವಮಂಗಲ ಮಹಾಸಭೆ ತಿಳುವಳಿಕೆ ಪತ್ರ, ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಿದರು. ಧನ್ಯಶ್ರೀ 2021-22 ನೇ ಸಾಲಿನ ನಡಾವಳಿ ಪತ್ರ ಮಂಡಿಸಿದರು. ಸಂಘದ ಉಪಾಧ್ಯಕ್ಷ ಬಿ.ಮೋಹನ್ ಹೆಗ್ಡೆ, ನಿರ್ದೇಶಕರಾದ ಡಾ. ಎಂ.ಕೆ.ಪ್ರಸಾದ್, ಎಮ್.ಬಾಲಕೃಷ್ಣ ಗೌಡ, ಹುಸೈನ್ ಜಿ, ರಾಘವೇಂದ್ರ ರೈ, ರಾಜೇಶ್ ಕೆ, ಬಿ.ಜನಾರ್ದನ, ಬಿ.ಕೆ.ಸುಂದ ನಾಯ್ಕ, ಎ.ಭಾಸ್ಕರ ನಾಯ್ಕ, ಕೆ.ಎಸ್ ಹರಿಣಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಸ್ನೇಹ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಪಿಗ್ಮಿ ಸಂಗ್ರಹಕ ರವಿಚಂದ್ರ ಸ್ವಾಗತಿಸಿದರು. ಮಹೇಶ್ ಪ್ರಭು ಕಾರ್ಯಕ್ರಮ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here