ಕುಂತೂರು ಮಾಪಲದಲ್ಲೂ ಆನೆ ದಾಳಿ

0

ಪೆರಾಬೆ: ಕುಂತೂರು ಗ್ರಾಮದ ಮಾಪಾಲ ಎಂಬಲ್ಲಿಯೂ ಕೃಷಿ ತೋಟಕ್ಕೆ ಆನೆ ದಾಳಿ ನಡೆಸಿರುವುದು ವರದಿಯಾಗಿದೆ. ಮಾಪಲ ನಿವಾಸಿ ರಾಧಾಕೃಷ್ಣ ಗೌಡ ಎಂಬವರ ತೋಟಕ್ಕೆ ದಾಳಿ ನಡೆಸಿದ ಆನೆ ಬಾಳೆಗಿಡಗಳನ್ನು ನಾಶಗೊಳಿಸಿದೆ. ಮಾಪಲ-ಬೊಳ್ತಿಮಾರು ರಸ್ತೆಯಲ್ಲಿ ಆನೆ ಸಂಚಾರ ಮಾಡಿರುವ ಕುರುಹು ಪತ್ತೆಯಾಗಿದೆ. ಶಿವಾರು ರಕ್ಷಿತಾರಣ್ಯಕ್ಕೆ ಹೊಂದಿಕೊಂಡಿರುವ ಗೋಳಿತ್ತೊಟ್ಟು ಸಮೀಪದ ಅಂಬರ್ಜೆ ನಿವಾಸಿ ವೀರಪ್ಪ ಪೂಜಾರಿಯವರ ತೋಟಕ್ಕೆ ದಾಳಿ ನಡೆಸಿದ್ದ ಆನೆ ಬಾಳೆಗಿಡ ಹಾನಿಗೊಳಿಸಿತ್ತು. ಇದೇ ಆನೆ ಕುಂತೂರು ಗ್ರಾಮದ ಮಾಪಲದಲ್ಲೂ ಬಾಳೆಗಿಡ ನಾಶಗೊಳಿಸಿರಬಹುದು ಎಂದು ಅಂದಾಜಿಸಲಾಗಿದೆ.

LEAVE A REPLY

Please enter your comment!
Please enter your name here