ಆ.16 : ಸವಣೂರು ಗ್ರಾ.ಪಂ.ನ ಎರಡನೇ ಅವಧಿಗೆ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ

0

ಅಧ್ಯಕ್ಷತೆ ಪ.ಜಾ. ,ಉಪಾಧ್ಯಕ್ಷತೆ ಹಿಂ.ವ.ಬಿ ಮಹಿಳೆಗೆ ಮೀಸಲು

ಅಧ್ಯಕ್ಷತೆಗೆ-ಸುಂದರಿ ಬಿ.ಎಸ್ ,ಹರೀಶ್ ಕಾಯರಗುರಿ ,ಇಂದಿರಾ ಬೇರಿಕೆ, ಉಪಾಧ್ಯಕ್ಷತೆಗೆ- ರಾಜೀವಿ ಶೆಟ್ಟಿ, ಚೇತನಾ ಶಿವಾನಂದ,ವಿನೋದಾ ರೈ,ಜಯಶ್ರೀ ,ಹರಿಕಲಾ ರೈ ಅವರಿಗೆ ಅವಕಾಶ

ವರದಿ: ಪ್ರವೀಣ್ ಚೆನ್ನಾವರ

ಸವಣೂರು : ಕಡಬ ತಾಲೂಕಿನ ಸವಣೂರು ಗ್ರಾ.ಪಂ.ನ ಎರಡನೇ ಅವಧಿಗೆ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ ಆ.16ರಂದು ಬೆಳಿಗ್ಗೆ 10ರಿಂದ ಗ್ರಾಮ ಪಂಚಾಯತ್ ನ ಸಭಾಂಗಣದಲ್ಲಿ ನಡೆಯಲಿದೆ.

ಚುನಾವಣಾ ಅಧಿಕಾರಿಯಾಗಿ ಕಾಣಿಯೂರು ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕ ಹನುಮಂತ ಅವರನ್ನು ನಿಯೋಜಿಸಲಾಗಿದೆ. ಮೊದಲ ಅವಧಿಗೆ ಅಧ್ಯಕ್ಷತೆಗೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷತೆಗೆ ಹಿಂದುಳಿದ ವರ್ಗ ಎ ಮೀಸಲಾತಿಯಂತೆ ಅಧ್ಯಕ್ಷರಾಗಿ, 2ನೇಅವಧಿಗೆ ಸದಸ್ಯರಾಗಿ ಆಯ್ಕೆಯಾಗಿದ್ದ ಸವಣೂರು 1ನೇ ವಾರ್ಡಿನ ಬಿಜೆಪಿ ಬೆಂಬಲಿತ ಸದಸ್ಯೆ ರಾಜೀವಿ ವಿ.ಶೆಟ್ಟಿ ಕೆಡೆಂಜಿ ಹಾಗೂ ಉಪಾಧ್ಯಕ್ಷರಾಗಿ ಪುಣ್ಚಪ್ಪಾಡಿ ವಾರ್ಡಿನಿಂದ ಮೊದಲ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿದ್ದ ಬಿಜೆಪಿ ಬೆಂಬಲಿತ ಸದಸ್ಯ ಶೀನಪ್ಪ ಶೆಟ್ಟಿ ನೆಕ್ರಾಜೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.

21 ಸದಸ್ಯ ಬಲವಿರುವ ಗ್ರಾ.ಪಂ.ನಲ್ಲಿ 16 ಮಂದಿ ಬಿಜೆಪಿ ಬೆಂಬಲಿತರು ಹಾಗೂ 5 ಮಂದಿ ಎಸ್.ಡಿ.ಪಿ.ಐ ಬೆಂಬಲಿತ ಸದಸ್ಯರಿದ್ದಾರೆ. ಎರಡನೇ ಅವಧಿಗೆ ಅಧ್ಯಕ್ಷತೆಗೆ ಪ.ಜಾತಿ ಹಾಗೂ ಉಪಾಧ್ಯಕ್ಷತೆಗೆ ಹಿಂ.ವ.ಬಿ ಮಹಿಳೆ ಮೀಸಲಾತಿ ನಿಗದಿಯಾಗಿದೆ. ಬಿಜೆಪಿ ಬೆಂಬಲಿತರಿಗೆ ಬಹುಮತವಿರುವ ಕಾರಣ ಬಿಜೆಪಿ ಬೆಂಬಲಿತರೇ ಎರಡನೇ ಅವಧಿಗೂ ಅಧ್ಯಕ್ಷ/ಉಪಾಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಅಧ್ಯಕ್ಷತೆಗೆ ಬಿಜೆಪಿ ಬೆಂಬಲಿತರಾಗಿರುವ 2 ನೇ ಬಾರಿ ಸದಸ್ಯರಾಗಿರುವ ಪಾಲ್ತಾಡಿ 1ನೇ ವಾರ್ಡಿನ ಸದಸ್ಯೆ ಸುಂದರಿ ಬಿ.ಎಸ್. ಬಂಬಿಲ, ಮೊದಲನೇ ಬಾರಿ ಸದಸ್ಯರಾಗಿರುವ ಪಾಲ್ತಾಡಿ 2ನೇ ವಾರ್ಡಿನ ಸದಸ್ಯ ಹರೀಶ್ ಕಾಯರಗುರಿ,ಸವಣೂರು 1ನೇ ವಾರ್ಡಿನ ಇಂದಿರಾ ಬೇರಿಕೆ, ಎಸ್.ಡಿ.ಪಿ.ಐ. ಬೆಂಬಲಿತರಾಗಿರುವ ಮೂರನೇ ಬಾರಿಗೆ ಸದಸ್ಯರಾಗಿರುವ ಸವಣೂರು 2ನೇ ವಾರ್ಡಿನ ಸದಸ್ಯೆ ಚೆನ್ನು ಮಾಂತೂರು, ಮೊದಲನೇ ಬಾರಿ ಸದಸ್ಯರಾಗಿರುವ ಸವಣೂರು 3ನೇ ವಾರ್ಡಿನ ಸದಸ್ಯ ಬಾಬು ಎನ್ ಹಾಗೂ ಉಪಾಧ್ಯಕ್ಷತೆಗೆ ಬಿಜೆಪಿ ಬೆಂಬಲಿತರಾಗಿರುವ ಹಾಲಿ ಅಧ್ಯಕ್ಷೆ ಸವಣೂರು 1ನೇ ವಾರ್ಡಿನ ಸದಸ್ಯೆ ರಾಜೀವಿ ವಿ.ಶೆಟ್ಟಿ ಕೆಡೆಂಜಿ,ಪ್ರಥಮ ಬಾರಿಗೆ ಸದಸ್ಯರಾಗಿರುವ ಪಾಲ್ತಾಡಿ 1ನೇ ವಾರ್ಡಿನ ಸದಸ್ಯರಾಗಿರುವ ವಿನೋದಾ ಸಿ.ರೈ ಚೆನ್ನಾವರ,ಹರಿಕಲಾ ರೈ ಕುಂಜಾಡಿ,ಪಾಲ್ತಾಡಿ 2ನೇ ವಾರ್ಡಿನ ಸದಸ್ಯೆ ಚೇತನಾ ಶಿವಾನಂದ ಗೌಡ ,ಪುಣ್ಚಪ್ಪಾಡಿ ವಾರ್ಡಿನ ಸದಸ್ಯೆ ಜಯಶ್ರೀ ವಿಜಯ ಗೌಡ ಅವರು ಮೀಸಲಾತಿಯಂತೆ ಅರ್ಹತೆ ಪಡೆದುಕೊಂಡಿದ್ದಾರೆ. ಆದರೆ ಬಿಜೆಪಿ ಬೆಂಬಲಿತರಿಗೆ ಬಹುಮತವಿರುವುದರಿಂದ ಅಧ್ಯಕ್ಷರಾಗಿ ಸುಂದರಿ ಬಿ.ಎಸ್,ಹರೀಶ್, ಇಂದಿರಾ ಬೇರಿಕೆ ಇವರಲ್ಲಿ ಒಬ್ಬರು ,ಉಪಾಧ್ಯಕ್ಷರಾಗಿ ರಾಜೀವಿ ಶೆಟ್ಟಿ, ಚೇತನಾ ಶಿವಾನಂದ,ಜಯಶ್ರೀ ವಿಜಯ,ವಿನೋದಾ ರೈ,ಹರಿಕಲಾ ರೈ ಇವರಲ್ಲಿ ಒಬ್ಬರು ಆಯ್ಕೆಯಾಗಲಿದ್ದಾರೆ.

LEAVE A REPLY

Please enter your comment!
Please enter your name here