ಬಸ್ ತಂಗುದಾಣದ ವಿಶೇಷತೆ:
ಸಂಪ್ರದಾಯಿಕ ಮಣ್ಣಿನ ಹೂಜಿಯಿಂದ ಕುಡಿಯಲು ನೀರಿನ ಸೌಲಭ್ಯ
ಪ್ರಯಾಣಿಕರಿಗೆ ಮೊಬೈಲ್ ಚಾರ್ಜರ್ ಸೌಲಭ್ಯ
ಕುಳಿತು ಕೊಳ್ಳಲು ಆರಾಮದಾಯಕ ಸೌಲಭ್ಯ
ರಾತ್ರಿಯೂ ವಿದ್ಯುತ್ ದೀಪದ ಬೆಳಕಿನ ಸೌಲಭ್ಯ
ಪುತ್ತೂರು: 27 ವರ್ಷಗಳ ಹಿಂದೆ ಇನ್ನರ್ ವೀಲ್ ಕ್ಲಬ್ ವತಿಯಿಂದ ನಿರ್ಮಾಣಗೊಂಡ ಬಸ್ ಪ್ರಯಾಣಿಕರ ತಂಗುದಾಣವನ್ನು ಪ್ರಯಾಣಿಕರಿಗೆ ಆಧುನಿಕ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕ್ಲಬ್ ವತಿಯಿಂದ ಆಧುನಿಕರಣಗೊಳಿಸಿ ಆ.9 ರಂದು ಅದರ ಉದ್ಘಾಟನಾ ಕಾರ್ಯಕ್ರಮ ನಡೆಸಲಾಯಿತು.
ಸಂಪ್ರದಾಯಿಕ ಮಣ್ಣಿನ ಹೂಜಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಮೊಬೈಲ್ ಚಾರ್ಜರ್, ಕುಳಿತು ಕೊಳ್ಳಲು ಆರಾಮದಾಯಿಕ ಸೌಲಭ್ಯ ಸಹಿತ ರಾತ್ರಿ ವಿದ್ಯುತ್ ದೀಪದ ವ್ಯವಸ್ಥೆಯನ್ನು ಕಲ್ಪಿಸಲಾಗಿರುವ ಬಸ್ ಪ್ರಯಾಣಿಕರ ತಂಗುದಾಣವನ್ನು ಇನ್ನರ್ ವೀಲ್ ಕ್ಲಬ್ ನ ಜಿಲ್ಲಾಧ್ಯಕ್ಷೆ ಪೂರ್ಣಿಮಾ ರವಿ ಮತ್ತು ರವಿ ಅಪ್ಪಾಜಿ ಅವರು ಉದ್ಘಾಟಿಸಿದರು. ಈ ಸಂದರ್ಭ ಪುತ್ತೂರು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ, ಕಾರ್ಯದರ್ಶಿ ಶ್ರೀದೇವಿ ರೈ, ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್, 1996 ರಲ್ಲಿ ಬಸ್ ತಂಗುದಾಣ ಉದ್ಘಾಟನೆ ಸಂದರ್ಭದಲ್ಲಿ ಕಾರ್ಯದರ್ಶಿ ಆಗಿದ್ದ ಪುಷ್ಪಾ ಕೆ, ಮುಳಿಯ ಜ್ಯುವೆಲ್ಸ್ ನ ಎಮ್ ಡಿ ಕೃಷ್ಣನಾರಾಯಣ ಮುಳಿಯ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.