ಆನಡ್ಕ ಶಾಲೆಯಲ್ಲಿ”ಆಟಿದ ಕೂಟ” ಆಚರಣೆ

0

ಪುತ್ತೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕ ಇಲ್ಲಿ ಆಟಿದ ಕೂಟದ ಲೇಸ್. ತುಳುನಾಡಿನ ವೈಭವಗಳೊಂದಿಗೆ ಊರಿನ ಗಣ್ಯರ ಕೂಡುವಿಕೆಯೊಂದಿಗೆ ಅರ್ಥಪೂರ್ಣವಾಗಿ ನಡೆಯಿತು.

ಪ್ರಸಿದ್ಧ ನಾಟಿ ವೈದ್ಯ ನಾರ್ಣಪ್ಪ ಸಾಲ್ಯಾನ್ ಚೆನ್ನೆ ಮಣೆ ಆಟದ ಮೂಲಕ ಆಟಿಕೂಟದ ಉದಿಪನ ಮಾಡಿ ಈ ತಿಂಗಳ ಮಹತ್ವವನ್ನು ತಿಳಿಸಿದರು.
SDMC ಅಧ್ಯಕ್ಷ ನಾರಾಯಣ ಸುವರ್ಣ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಶುಭ ಹಾರೈಸಿದರು. ನರಿಮೊಗರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸುಧಾಕರ ಕುಲಾಲ್ ಹಿಂದೆ ಆಟಿ ತಿಂಗಳಿನಲ್ಲಿ ಇದ್ದ ಕಷ್ಟದ ಜೀವನ, ಆಗ ಜನರು ಪ್ರಕೃತಿಯನ್ನು ಬಳಸಿಕೊಂಡ ಬಗೆ, ಈ ತಿಂಗಳಿನಲ್ಲಿರುವ ವಿಶೇಷ ಸಸ್ಯಗಳ ಬಗ್ಗೆ ಆಟಿಕೂಟದ ಮದಿಪು ಕೊಟ್ಟರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಎಂ ದಿನೇಶ್ ಗೌಡ, ತಾರನಾಥ ಹಾಗೂ ದಾನಿಗಳಾದ ಬಾಲಕೃಷ್ಣ ನಾಯಕ್ ಮಜಲು ಉಪಸ್ಥಿತರಿದ್ದು ಶುಭ ಹಾರೈಸಿದರು. BIRT ತನುಜಾ ಮೇಡಂ ಹಾಗೂ ಸೀತಮ್ಮ, ಸಿ ಆರ್.ಪಿ. ಪರಮೇಶ್ವರಿ ಮೇಡಂ, ದೇಸಿ ವೈಭವದ ಸಂಪನ್ಮೂಲ ವ್ಯಕ್ತಿ ರಮೇಶ್ ಉಳಯ ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶೋಭೆ ನೀಡಿದರು.

ಮುಖ್ಯ ಗುರು ಶುಭಲತಾ ಪ್ರಾಸ್ತಾವಿಕ ಮಾತುಗಳನ್ನಾಡಿ ಪೋಷಕರು ಮತ್ತು ಶಾಲೆಯ ನಡುವಿನ ಸೌಹಾರ್ದಯುತ ಸಾಮಾಜಿಕ ಬಾಂಧವ್ಯಕ್ಕೆ ಇಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆ ಎಂದು ನುಡಿದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಶಿಕ್ಷಕರಾದ ಫೆಲ್ಸಿಟಾ ಡಿಕುನ್ಹಾ ಸ್ವಾಗತಿಸಿ ವಿಶಾಲಾಕ್ಷಿ ವಂದಿಸಿದರು. ಶಿಕ್ಷಕಿ ಮಾಲತಿ ಸಹಕಾರ ನೀಡಿದ ಎಲ್ಲರನ್ನು ವಂದಿಸಿ ಗೌರವಿಸಿದರು. ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. ಸೌಮ್ಯ ಹಾಗೂ ಲೀಲಾವತಿ ಸಹಕರಿಸಿದರು.
ಎಸ್ ಡಿಎಂಸಿ ಸದಸ್ಯರು, ಪೋಷಕರು, ಊರಿನ ಗಣ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಆಟಿಕಳೆಂಜದ ಕುಣಿತ ಕಾರ್ಯಕ್ರಮಕ್ಕೆ ಅಂದ ನೀಡಿ ಎಲ್ಲರನ್ನು ಮುದಗೊಳಿಸಿತು.
ಪೋಷಕರು ತಾವು ಮನೆಯಲ್ಲಿ ತಯಾರಿಸಿ ತಂದ 30 ಬಗೆಯ ಆಟಿ ತಿಂಗಳ ವಿಶೇಷ ಖಾದ್ಯಗಳನ್ನು ಪ್ರೀತಿಯಿಂದ ಮಕ್ಕಳಿಗೆ ಹಾಗೂ ಅತಿಥಿಗಳಿಗೆ ಉಣಬಡಿಸುವುದನ್ನು ಕಾಣುವುದೇ ಕಣ್ಣಿಗೆ ಹಬ್ಬವಾಗಿತ್ತು.

LEAVE A REPLY

Please enter your comment!
Please enter your name here