ಆ.12: ಸುದಾನ-ಕಿಟ್ಟೆಲ್ ಸೆಂಟರ್ ಫಾರ್ ಡೆವಲಪ್ ಮೆಂಟ್ ಸ್ಟಡೀಸ್ ಅಧ್ಯಕ್ಷ ಡಾ|ಪೀಟರ್ ಪ್ರಭಾಕರ್ ರ ಆತ್ಮಕಥನ ‘ದೀವಿಗೆ’ ಕೃತಿ ಲೋಕಾರ್ಪಣೆ

0

ಪುತ್ತೂರು: ದರ್ಬೆ ಶ್ರೀ ರಾಮಸೌಧದಲ್ಲಿ ಕಾರ್ಯಾಚರಿಸುತ್ತಿರುವ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಇದರ ನೇತೃತ್ವದಲ್ಲಿ ಆ.11 ರಿಂದ 13ರ ವರೆಗೆ ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ‘ಪುಸ್ತಕ ಹಬ್ಬ-ಪುಸ್ತಕದಾನಿಗಳ ಮೇಳ-ಸಾಹಿತ್ಯ ವೈಭವ’ ನಡೆಯಲಿದೆ.


ಇದರ ಅಂಗವಾಗಿ ಆ.12 ರಂದು ಮಧ್ಯಾಹ್ನ ಸುದಾನ-ಕಿಟ್ಟೆಲ್ ಸೆಂಟರ್ ಫಾರ್ ಡೆವಲಪ್ಮೆಂಟ್ ಸ್ಟಡೀಸ್ ಸಹಯೋಗದಲ್ಲಿ ಸುದಾನ-ಕಿಟ್ಟೆಲ್ ಸೆಂಟರ್ ಫಾರ್ ಡೆವಲಪ್ ಮೆಂಟ್ ಸ್ಟಡೀಸ್ ಇದರ ಅಧ್ಯಕ್ಷ ಡಾ|ಪೀಟರ್ ವಿಲ್ಸನ್ ಪ್ರಭಾಕರ್ ರವರ ಆತ್ಮಕಥನ ‘ದೀವಿಗೆ’ ಕೃತಿಯ ಲೋಕಾರ್ಪಣಾ ಸಮಾರಂಭವು ಜರಗಲಿದೆ. ಅಧ್ಯಕ್ಷತೆಯನ್ನು ವಿಶ್ರಾಂತ ಪ್ರಾಧ್ಯಾಪಕ ಹಾಗೂ ಹಿರಿಯ ಸಾಹಿತಿಗಳಾದ ಪ್ರೊ.ವಿ.ಬಿ ಆರ್ತಿಕಜೆರವರು ವಹಿಸಿಕೊಳ್ಳಲಿದ್ದಾರೆ. ಕೃತಿ ಲೋಕಾರ್ಪಣೆಯನ್ನು ಕಾಸರಗೋಡು ಪ್ರಾಧ್ಯಾಪಕ ಡಾ|ರಾಧಾಕೃಷ್ಣ ಬೆಳ್ಳೂರು ನೆರವೇರಿಸಿಕೊಡಲಿದ್ದಾರೆ. ಕೃತಿ ಪರಿಚಯವನ್ನು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳ ಇದರ ಅಧ್ಯಕ್ಷ ಡಾ|ತುಕಾರಾಮ್ ಪೂಜಾರಿ, ಸುದಾನ ವಸತಿಯುತ ಶಾಲೆಯ ಸಂಚಾಲಕ ರೆ|ವಿಜಯ ಹಾರ್ವಿನ್ ಶುಭನುಡಿಯನ್ನು ಮಾಡಲಿದ್ದಾರೆ. ‘ದೀವಿಗೆ’ ಆತ್ಮಕಥನದ ಲೇಖಕರು, ಕರ್ನಾಟಕ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಇದರ ಗೌರವ ಕಾರ್ಯದರ್ಶಿ ಡಾ|ಪೀಟರ್ ವಿಲ್ಸನ್ ಪ್ರಭಾಕರ್, ಕರ್ನಾಟಕ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಇದರ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಉಪಸ್ಥಿತಲಿರುವರು ಎಂದು ಕರ್ನಾಟಕ ಸಾಹಿತ್ಯ ಪರಿಷತ್ತು ಪುತ್ತೂರು ಘಟಕ, ಕೃತಿಕಾರ ಡಾ|ಪೀಟರ್ ವಿಲ್ಸನ್ ಪ್ರಭಾಕರ್, ಸುದಾನ-ಕಿಟ್ಟೆಲ್ ಸೆಂಟರ್ ಫಾರ್ ಡೆವಲಪ್ ಮೆಂಟ್ ಸ್ಟಡೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here