ಆ.13: ಡಾ. ಸುಂದರ ದೇವಾಡಿಗರಿಗೆ ಸನ್ಮಾನ

0

ಉಪ್ಪಿನಂಗಡಿ: ಸಂಗೀತ ಕ್ಷೇತ್ರದ ಸಾಧನೆಗಾಗಿ ಉಪ್ಪಿನಂಗಡಿಯ ಡಾ. ಸುಂದರ ದೇವಾಡಿಗರಿಗೆ ಆ.13 ರಂದು ದೇವಾಡಿಗರ ಸಂಘದ ವತಿಯಿಂದ ಮಂಗಳೂರಿನ ಮಣ್ಣಗುಡ್ಡದಲ್ಲಿ ನಡೆಯುವ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಸನ್ಮಾನ ನಡೆಯಲಿದೆ.


ಡಾ. ಸುಂದರ ದೇವಾಡಿಗರು ಸ್ಯಾಕ್ಸೋಫೋನ್ ವಾದಕರಾಗಿದ್ದು, ಆಕಾಶವಾಣಿಯ ಎ ಗ್ರೇಡ್ ಕಲಾವಿದರಾಗಿದ್ದಾರೆ. ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮತ್ತು ಮಹಿಳಾ ಹಾಗೂ ಯುವ ಸಂಘಟನೆಯ ವತಿಯಿಂದ ಆ.13ರಂದು ಮಣ್ಣಗುಡ್ಡದಲ್ಲಿರುವ ದೇವಾಡಿಗ ಸಮಾಜ ಭವನದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿಲಿದ್ದು, ಈ ಸಂದರ್ಭ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುತ್ತಿದೆ.

LEAVE A REPLY

Please enter your comment!
Please enter your name here