ಪುತ್ತೂರು: ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಪಾಲಕಿಯ ಹಬ್ಬವನ್ನು ದಿವ್ಯ ಬಲಿ ಪೂಜೆಯೊಂದಿಗೆ ಆರಂಭಿಸಲಾಯಿತು. ಈ ಬಲಿ ಪೂಜೆಯಲ್ಲಿ ಪುತ್ತೂರು ಧರ್ಮ ಕೇಂದ್ರದ ಎಲ್ಲಾ ಧರ್ಮ ಗುರುಗಳು ಹಾಗೂ ಬನ್ನೂರು ಧರ್ಮ ಕೇಂದ್ರದ ಧರ್ಮ ಗುರುಗಳು ಉಪಸ್ಥಿತರಿದ್ದರು.
ಸಂತ ಫಿಲೋಮಿನಾ ಪ್ರೌಢಶಾಲಾ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಅಧ್ಯಕ್ಷ ಸ್ಥಾನವನ್ನು ವಹಿಸಿದ ಶಾಲೆಯ ಸಂಚಾಲಕ ಅತೀ ವಂದನೀಯ ಗುರು ಲಾರೆನ್ಸ್ ಮಸ್ಕರೇನ್ಹಸ್ ಸಂತ ಫಿಲೋಮಿನಾರವರ ಜೀವನ ಚರಿತ್ರೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರಂತೆ ನಡೆಯಲು ಕರೆ ನೀಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಶಾಲೆಯ ಸಂಚಾಲಕರು, ಸಂತ ಫಿಲೋಮಿನಾ ಪ್ರೌಢಶಾಲೆಯ ಮುಖ್ಯ ಗುರುಗಳು ಹಾಗೂ ಶಾಲೆಯ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರು, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರು, ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ, ರಕ್ಷಕ ಶಿಕ್ಷಕ ಸಂಘದ ಸಹಕಾರ್ಯದರ್ಶಿ, ಉಭಯ ಶಾಲೆಗಳ ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು.
ಶಿಕ್ಷಕಿ ಆಶಾ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ಸಿಸ್ಟರ್ ಲೋರಾ ಪಾಯ್ಸ್ ರವರು ಸ್ವಾಗತಿಸಿದರು. ಶಿಕ್ಷಕಿ ಸಂಧ್ಯಾರವರು ಸಂತ ಫಿಲೋಮಿನಾರವರ ಜೀವನ ಚರಿತ್ರೆಯನ್ನು ವಾಚಿಸಿದರು. ವಿದ್ಯಾರ್ಥಿ ನಾಯಕ ಅದ್ವಿತ್ ರೈ ವಂದಿಸಿದರು.