ಬೀಡಿ ಕಾರ್ಮಿಕರಿಗೆ ಬೋನಸ್ -ಸಾವಿರ ಬೀಡಿಗೆ ರೂ. 38.15

0

ಕಡಿಮೆ ಬೋನಸ್ ವಿತರಣೆ ಆದಲ್ಲಿ ಮಾಹಿತಿ ನೀಡಿ – ಬಿ.ಎಮ್. ಭಟ್


ಪುತ್ತೂರು: 2022-23 ನೇ ಸಾಲಿನ ಬೀಡಿ ಕಾರ್ಮಿಕರ ಬೋನಸ್ ಬಿಡುಗಡೆಯಾಗಿದ್ದು ರಜಾ ಸಂಬಳ, ಹಬ್ಬದ ರಜಾ ಸಂಬಳ, ಸೇರಿ ಒಟ್ಟು ಸಾವಿರ ಬೀಡಿಗೆ ರೂ 38.15 ಕಾರ್ಮಿಕರಿಗೆ ಸಿಗಲಿದೆ ಎಂದು ಪುತ್ತೂರು ತಾಲೂಕು ಬೀಡಿ ಕೆಲಸಗಾರ ಸಂಘದ ಅದ್ಯಕ್ಷ ಗುಡ್ಡಪ್ಪ ಗೌಡ, ಕಾರ್ಯದರ್ಶಿ ಬಿ.ಎಂ.ಭಟ್, ಮುಖಂಡರಾದ ಪಿ.ಕೆ ಸತೀಶನ್, ಈಶ್ವರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.


ಈ ವರ್ಷದ ಬೋನಸ್ ಶೇ.8.33 ನಂತೆ ರೂ. 19.35, ರಜಾ ಸಂಬಳ ಶೇ.5 ರಂತೆ ರೂ. 11.61 , ಹಬ್ಬದ ರಜಾ ಸಂಬಳ ಶೇ.3.10 ರಂತೆ ರೂ 7.19 ಒಟ್ಟು ಪ್ರತಿ ಸಾವಿರ ಬೀಡಿಗೆ ರೂ 38.15 ಸಿಗಲಿದೆ. ಈ ಬೋನಸ್ ಹಣ ಸಿಗದಿದ್ದಲ್ಲಿ ಕಡಿಮೆ ಬೋನಸ್ ವಿತರಣೆ ಆದಲ್ಲಿ ಬೋನಸ್ ಪಡೆದು ಕೊಳ್ಳದೆ ತಕ್ಷಣ ಸಂಘದ ಗಮನಕ್ಕೆ ತರಬೇಕೆಂದು, ಸಂಘ ಪೂರ್ತಿ ಬೋನಸ್ ತೆಗೆದು ಕೊಡಿಸುವುದಾಗಿ ಅವರು ಬೀಡಿಕಾರ್ಮಿಕರಿಗೆ ಕರೆ ನೀಡಿದ್ದಾರೆ. 1 ಲಕ್ಷ ಬೀಡಿಗೆ ಬೋನಸ್ ಒಟ್ಟು ರೂ 3,815 ಆಗುತ್ತದೆ ಎಂದವರು ತಿಳಿಸಿದರು. ಸಂಪರ್ಕ ನಂಬ್ರ 9448155980, 8792591538 ಕ್ಕೆ ಕರೆ ಮಾಡಿ ತಿಳಿಸಬಹುದು. ಬೀಡಿ ಕಾರ್ಮಿಕರಿಗೆ ಬೀಡಿ ಮಾಲಕರು ನೀಡುವ ವೇತನವೂ ಪ್ರತಿ ಸಾವಿರ ಬೀಡಿಗೆ ರೂ. 252.34 ಇದ್ದು ಇದರಿಂದ ಪಿ.ಎಫ್ ಕಡಿತಗೊಂಡು ಸಾವಿರ ಬೀಡಿಗೆ ರೂ 227.34 ರಂತೆ ಕಾರ್ಮಿಕರ ಹಸ್ತವೇತನ ಸಿಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here