ಹಿರೇಬಂಡಾಡಿ: ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಹಿರೇಬಂಡಾಡಿ ಇದರ ನೇತೃತ್ವದಲ್ಲಿ ಒಕ್ಕಲಿಗ ಗೌಡ ಗ್ರಾಮ ಸಮಿತಿ ಹಿರೇಬಂಡಾಡಿ,ಯುವ ಘಟಕ ,ಮಹಿಳಾ ಘಟಕ ಹಿರೇಬಂಡಾಡಿ ಇದರ ಸಹಕಾರದೊಂದಿಗೆ ಆಟಿಡೊಂಜಿ ದಿನ ಕಾರ್ಯಕ್ರಮ,ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ ಆಟೋಟ ಸ್ಪರ್ಧೆಯು ಮಂಜುಶ್ರೀ ಭಜನಾ ಮಂದಿರ ಶಿವನಗರ ಮುರದಮೇಲು ನಲ್ಲಿ ನಡೆಯಿತು.
ಉದ್ಘಾಟನಾ ಕಾರ್ಯಕ್ರಮ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕಿ ದೇವಮ್ಮ ಕುಬಲ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಿರೇಬಂಡಾಡಿ ಇದರ ಅಧ್ಯಕ್ಷರಾದ ಜನಾರ್ಧನ ಗೌಡ ಸಾಂತಿದಡ್ಡ ಹಾಗೂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರೇಬಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಾವತಿ ನೆಹರುತೋಟ, ನಿವೃತ್ತ ಸೈನಿಕರಾದ ಮೋಹನ ಗೌಡ ಸಿಂಕ್ರುಕೊಡಂಗೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಸಭಾ ಕಾರ್ಯಕ್ರಮ,ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಅಧ್ಯಕ್ಷರಾದ ವಿಶ್ವನಾಥ ಗೌಡ,ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಸಂಜೀವ ಮಠ0ದೂರು, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಅಧ್ಯಕ್ಷರಾದ ಡಿ ವಿ ಮನೋಹರ್ ,ಟ್ರಸ್ಟ್ ಸ್ಥಾಪಕ ಅಧ್ಯಕ್ಷರಾದ ಎ ವಿ ನಾರಾಯಣ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಒಕ್ಕಲಿಗ ಸ್ವ ಸಹಾಯ ಸಂಘಗಳ ಉಪ್ಪಿನಂಗಡಿ ವಲಯದ ಅಧ್ಯಕ್ಷರಾದ ಗಂಗಯ್ಯ ಗೌಡ ನೆಕ್ಕಿಲಾಡಿ, ಹಿರೇಬಂಡಾಡಿ ಮಾಗಣೆ ಗೌಡ್ರು ಯಾನಪ್ಪ ಗೌಡ ,ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ನಿರ್ದೇಶಕರು ಶ್ರೀಧರ ಗೌಡ ಕಣಜಲು, ನಿವೃತ್ತ ಅಧ್ಯಾಪಕರು ಉಮೇಶ್ ಬಂಡಾಡಿ , ಒಕ್ಕಲಿಗ ಗೌಡ ಗ್ರಾಮ ಸಮಿತಿ ಅಧ್ಯಕ್ಷರಾದ ಸುಧಾಕರ್ ಕಜೆ, ಹಿರೇಬಂಡಾಡಿ ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷರಾದ ವಿನೋದ್ ರಾಜ್ ,ಯುವ ಘಟಕದ ಅಧ್ಯಕ್ಷರಾದ ಗುರುರಾಜ್ ಹೊಸಮನೆ,ಮಹಿಳಾ ಘಟಕದ ಅಧ್ಯಕ್ಷರಾದ ಸೌಮ್ಯ ಹೆನ್ನಾಳ ಉಪಸ್ಥಿತರಿದ್ದರು,
ಕಾರ್ಯಕ್ರಮದಲ್ಲಿ 2022-2023 ನೇ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಮತ್ತು ಪಿಯುಸಿ ನಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗನ್ನು ಶಾಲು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.ಪುರುಷರಿಗೆ,ಮಹಿಳೆಯರಿಗೆ ,ಮಕ್ಕಳಿಗೆ ನಡೆದ ವಿವಿಧ ಅಟೋಟ ಸ್ಪರ್ಧೆಗಳ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಅತ್ಯುತ್ತಮ ಸ್ವ ಸಹಾಯ ಸಂಘ ಆಯ್ಕೆ
ಹಿರೇಬಂಡಾಡಿ ಗ್ರಾಮದ ಒಟ್ಟು 31 ಸ್ವ ಸಹಾಯ ಸಂಘಗಳ ಪೈಕಿ ಅತ್ಯುತ್ತಮ ಸ್ವ ಸಹಾಯ ಸಂಘವಾಗಿ ಆಯ್ಕೆಗೊಂಡ ಶಿವಾನಿ ಒಕ್ಕಲಿಗ ಸ್ವ ಸಹಾಯ ಸಂಘದ ಸದಸ್ಯರಿಗೆ ಕಾರ್ಯಕ್ರಮದಲ್ಲಿ ಶಾಲು ಹಾಕಿ ಹೂ ಗುಚ್ಛ ನೀಡಿ ಗೌರವಿಸಲಾಯಿತು.
ಅಪಘಾತದಿಂದ ಗಾಯಗೊಂಡ ಸದಸ್ಯೆಗೆ ಸಹಾಯಧನ ಚೆಕ್ ವಿತರಣೆ
ಆದಿಶಕ್ತಿ ಒಕ್ಕಲಿಗ ಸ್ವ ಸಹಾಯ ಸಂಘದ ಸದಸ್ಯರಾದ ದಮಯಂತಿರವರು ರಸ್ತೆ ಅಪಘಾತದಲ್ಲಿ ಬಲವಾದ ಗಾಯಗಳಾಗಿದ್ದು ಇವರಿಗೆ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನಿಂದ ನೀಡುವ ಸಹಾಯ ಧನ ಚೆಕ್ ನ್ನು ಇದೇ ಸಂದರ್ಭದಲ್ಲಿ ನೀಡಲಾಯಿತು.ಕಾರ್ಯಕ್ರಮವನ್ನು ಗ್ರಾಮ ಸಮಿತಿ ಅಧ್ಯಕ್ಷರಾದ ಸುಧಾಕರ್ ಕಜೆ ಸ್ವಾಗತಿಸಿ,ಕಾರ್ಯದರ್ಶಿ ಸೋಮೇಶ್ ವಂದಿಸಿದರು, ಒಕ್ಕೂಟದ ಕಾರ್ಯದರ್ಶಿ ಭಾರತಿ ಜಾಡೆಂಕಿ ಒಕ್ಕೂಟದ ವಾರ್ಷಿಕ ವರದಿ ವಾಚಿಸದರು,ಟ್ರಸ್ಟ್ ನ ಮೇಲ್ವಿಚಾರಕಾರದ ಸುಮಲತಾ ಕಾರ್ಯಕ್ರಮ ನಿರೂಪಿಸಿದರು, ಬೆಳಿಗ್ಗೆ ಆಟಿ ತಿಂಗಳ ವಿಶೇಷ ತಿಂಡಿ ತಿನಿಸುಗಳ ಉಪಹಾರ ಹಾಗೂ ಮಧ್ಯಾಹ್ನ ಭೋಜನ ನಡೆಯಿತು