ಪೆರಾಜೆ ಗ್ರಾಮ ಪಂಚಾಯತ್ -ಅಧ್ಯಕ್ಷರಾಗಿ ಕುಶಲ ಎಂ. ಪೆರಾಜೆ, ಉಪಾಧ್ಯಕ್ಷರಾಗಿ ಶಶಿ ಕುಮಾರಿ

0

ವಿಟ್ಲ: ಪೆರಾಜೆ ಗ್ರಾಮ ಪಂಚಾಯತ್ ನ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಕುಶಲ ಎಂ.ಪೆರಾಜೆ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯರಾದ ಶಶಿಕುಮಾರಿ ರವರು ಆಯ್ಕೆಯಾಗಿದ್ದಾರೆ.


ಬಂಟ್ವಾಳ ತಾಲೂಕು ಅಕ್ಷರ ದಾಸೋಹದ ಸಾಹಾಯಕ ನಿರ್ದೇಶಕ ನೋಣಯ್ಯರವರು ಚುನಾವಣಾ ಪ್ರಕ್ರೀಯೆ ನಡೆಸಿಕೊಟ್ಟರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ
ಶಂಬು ಶರ್ಮರವರು ಸಹಕರಿಸಿದರು.

ಪೆರಾಜೆ ಗ್ರಾಮ ಪಂಚಾಯತ್ ನಲ್ಲಿ ಒಟ್ಟು 8 ಸದಸ್ಯರಿದ್ದು, ಅದರಲ್ಲಿ ನಾಲ್ವರು ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ ನಾಲ್ವರು ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಕುಶಲ ಎಂ. ಪೆರಾಜೆ ಹಾಗೂ ಬಿಜೆಪಿ ಬೆಂಬಲಿತ ಸದಸ್ಯ ಹರೀಶ್ ಪಾನೂರುರವರು ನಾಮಪತ್ರ ಸಲ್ಲಿಸಿದ್ದರು. ಈ ವೇಳೆ ನಡೆದ ಮತದಾನ ಇಬ್ಬರೂ ಸಮಬಲ ಸಾಧಿಸಿದ್ದರು. ಬಳಿಕ ಚೀಟಿ ಎತ್ತುವ ಮೂಲಕ ಆಯ್ಕೆ ಪ್ರಕ್ರೀಯೆ ನಡೆಯಿತು. ಈ ವೇಳೆ ಕಾಂಗ್ರೆಸ್ ಬೆಂಬಲಿತ ಸದಸ್ಯ ಕುಶಲ ಎಂ.ಪೆರಾಜೆರವರು ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಸುನಿತಾ ಹಾಗೂ ಬಿಜೆಪಿ ಬೆಂಬಲಿತ ಸದಸ್ಯೆ ಶಶಿಕುಮಾರಿರವರು ನಾಮಪತ್ರ ಸಲ್ಲಿಸಿದ್ದರು. ಬಳಿಕ ಚುನಾವಣೆ ನಡೆದಾಗ ಇಬ್ಬರೂ ಸಮಾಭಲ ಸಾಧಿಸಿದ್ದರು. ಬಳಿಕ ಚೀಟಿ ಎತ್ತುವ ಮೂಲಕ‌ ಅಧ್ಯಕ್ಷರ ಆಯ್ಕೆ ನಡೆಯಿತು. ಈ ವೇಳೆ ಬಿಜೆಪಿ ಬೆಂಬಲಿತ ಸದಸ್ಯೆ ಶಶಿಕುಮಾರಿರವರು ಆಯ್ಕೆಯಾದರು. ಸದಸ್ಯರಾದ ಉಮ್ಮಾರ್, ರೋಹಿಣಿ, ರಾಜಾರಾಮ ಭಟ್, ಹರೀಶ್ ಪಾಣೂರು, ಸುನಿತಾ, ಮಮತಾ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here