ಪುತ್ತೂರು:ಪಾಪ್ಯುಲರ್ ಸೆಲಬ್ರೇಶನ್ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಆಹಾರೋತ್ಸವಕ್ಕೆ(ಫುಡ್ ಫೆಸ್ಟಿವಲ್) ಖ್ಯಾತ ಉದ್ಯಮಿ ಬಲರಾಂ ಆಚಾರ್ಯ ಚಾಲನೆ ನೀಡಿದರು.
ಆ.12ರಿಂದ ಆ.15ರವರೆಗೆ ನಗರದ ಜಿ ಎಲ್ ವನ್ ಮಾಲ್ ನಲ್ಲಿ ಈ ಫುಡ್ ಫೆಸ್ಟಿವಲ್ ನಡೆಯಲಿದ್ದು ನಿಮ್ಮ ಇಚ್ಚೆಯ ಸ್ವಾಧಿಷ್ಟಕಾರಿ ಆಹಾರ ಒಂದೇ ಸೂರಿನಡಿ ದೊರೆಯಲಿದೆ.ಪಾಕ ಪ್ರವೀಣರ ನುರಿತ ಕೈಗಳಲ್ಲಿ ತಯಾರಾದ ವೈವಿಧ್ಯಮಯ ರುಚಿಕರ ಆಹಾರಗಳು ನಿಮ್ಮ ಮನಸೂರೆಗೊಳ್ಳಲಿದೆ. ಪ್ರತೀ ದಿನ ಬೆಳಿಗ್ಗೆ 10ರಿಂದ ರಾತ್ರಿ 10ರವರೆಗೆ ಆಹಾರೋತ್ಸವ ನಡೆಯಲಿದೆ.