ಪುಣಚ: ಸ್ನೇಹ ಕಲಾವಿದರು ಪುಣಚ ಇವರ 11ನೇ ವರ್ಷದ ರಂಗ ಪಯಣದ ಅಂಗವಾಗಿ ಸ್ನೇಹ ಸಂಗಮ ಕಾರ್ಯಕ್ರಮ ಪುಣಚ ಮಣಿಲ ಜಲಗಂಗಾ ಇರಿಗೇಶನ್ಸ್ ಆವರಣದಲ್ಲಿ ಆ.13ರಂದು ನಡೆಯಿತು. ತಂಡದ ಹಿರಿಯ ಸಂಗೀತ ನಿರ್ದೇಶಕ ವಿಶ್ವನಾಥ್ ಶೆಟ್ಟಿ ನೆಲ್ಯಾಡಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ ತಂಡದ ಹಿರಿಯ ಸಂಯೋಜಕ, ಮುಖ್ಯ ಗುರು ರವಿಶಂಕರ್ ಶಾಸ್ತ್ರಿ ಮಣಿಲ ಮಾತನಾಡಿ, ತಂಡದಲ್ಲಿ ಪಾಲ್ಗೊಂಡ ಎಲ್ಲಾ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಕಾಣುವ ಮಹತ್ತರವಾದ ಆಸೆಯೊಂದಿಗೆ, ಕಲಾವಿದರು, ಧ್ವನಿ ಹಾಗೂ ಬೆಳಕಿನ ಸಂಯೋಜಕರು, ಸಂಗೀತ ನಿರ್ದೇಶಕರು, ಹಿನ್ನೆಲೆ ಸಹಾಯಕರು, ತಂತ್ರಜ್ಞರು ಭಾಗವಹಿಸಿ ನಮ್ಮ ಸ್ನೇಹ ಹಾಗೂ ಪ್ರೀತಿಯನ್ನು ಹಂಚಿಕೊಳ್ಳಲು ಈ ಕಾರ್ಯಕ್ರಮವನ್ನು ಆಯೋಚನೆ ಮಾಡಲಾಗಿದೆ. ಎಂದು ಹೇಳಿ ಶುಭ ಹಾರೈಸಿದರು. ಹಿರಿಯ ಕಲಾವಿದ ರಾಜೀವ ಶೆಟ್ಟಿ, ತಂಡದ ವ್ಯವಸ್ಥಾಪಕ ಹರ್ಷ ಎ.ಎಸ್, ರಂಗ ಕಲಾವಿದ ದೀಪಕ್ ರೈ ಪಾಣಾಜೆ, ಸಂದರ್ಭೋಚಿತವಾಗಿ ಮಾತನಾಡಿ ತಂಡದ ಬೆಳವಣಿಗೆಗೆ ಶುಭ ಹಾರೈಸಿದರು. ರವಿ ವರ್ಕಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಂಡದ ಕಲಾವಿದ ಹರೀಶ್ ಎಸ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಸನ್ಮಾನ: ಸ್ನೇಹ ಕಲಾವಿದರ ತಂಡದ ಹಿರಿಯ ಸಂಯೋಜಕ, ಮುಖ್ಯ ಗುರು ರವಿಶಂಕರ್ ಶಾಸ್ತ್ರಿ ಮಣಿಲ, ಹಾಗೂ ತಂಡದ ಸದಸ್ಯರಾದ ಹರೀಶ್ ಹಾಗೂ ರಾಜೇಶ್ ರವರನ್ನು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ತಂಡದ ಎಲ್ಲಾ ಸದಸ್ಯರಿಗೆ ನೆನಪಿನ ಕಾಣಿಕೆ ನೀಡಲಾಯಿತು.
ತಂಡದ ಸದಸ್ಯೆ ಶ್ರುತಿಕಾ ಪ್ರಾರ್ಥಿಸಿ, ತಂಡದ ಸದಸ್ಯ ರಂಗಯ್ಯ ಬಲ್ಲಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ವಿಶೇಷ ಆಕರ್ಷಣೆ: ಪುಣಚ ಶ್ರೀ ಮಹಿಷಮರ್ದಿನಿ ಸಿಂಗಾರಿ ಮೇಳದ ತಂಡದವರಿಂದ ಚೆಂಡೆ ವಾದನ ನಡೆಯಿತು.