ಆ.15: ನೆಲ್ಯಾಡಿ-ರಾಮನಗರದಲ್ಲಿ ಶಾಸ್ತಾರ ಫ್ರೆಂಡ್ಸ್ ವತಿಯಿಂದ ನಿರ್ಮಾಣಗೊಂಡ ಬಸ್ ತಂಗುದಾಣ ಉದ್ಘಾಟನೆ

0

ನೆಲ್ಯಾಡಿ: ಶಾಸ್ತಾರ ಫ್ರೆಂಡ್ಸ್ ಕುತ್ರಾಡಿ ಹಾರ್ಪಳ ನೆಲ್ಯಾಡಿ ಇದರ ವತಿಯಿಂದ ನೆಲ್ಯಾಡಿ-ಬಲ್ಯ ರಸ್ತೆಯ ರಾಮನಗರದಲ್ಲಿ ನಿರ್ಮಾಣಗೊಂಡ ಪ್ರಯಾಣಿಕರ ತಂಗುದಾಣದ ಉದ್ಘಾಟನೆ ಆ.15ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಕುತ್ರಾಡಿ ಹಾರ್ಪಳ ಶಾಸ್ತಾರ ಫ್ರೆಂಡ್ಸ್ ಅಧ್ಯಕ್ಷ ಅನಿಲ್‌ ಕುಮಾರ್ ರೈ ಹಾರ್ಪಳ ತಿಳಿಸಿದ್ದಾರೆ.
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕ ಪ್ರವೀಣ್ ಕುಂಟ್ಯಾನ ಉದ್ಘಾಟಿಸಲಿದ್ದಾರೆ. ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಹಿರಿಯ ನಾಗರಿಕ ವಿಠಲ್ ಮಾರ್ಲ ರಾಮನಗರ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಕೇಂದ್ರ ವಲಯ ಅಧ್ಯಕ್ಷ ಬಾಲಕೃಷ್ಣ ಗೌಡ ಹಾರ್ಪಳ, ಕುತ್ರಾಡಿ ಹಾರ್ಪಳ ಶ್ರೀ ಶಾಸ್ತಾರೇಶ್ವರ ದೇವಸ್ಥಾನದ ಗೌರವಾಧ್ಯಕ್ಷ ಸೂರ್ಯನಾರಾಯಣ ಜೋಗಿತ್ತಾಯ, ಅಧ್ಯಕ್ಷ ಸುಂದರ ಗೌಡ ಅತ್ರಿಜಾಲು, ರಾಜ್ಯಮಟ್ಟದ ಕುಣಿತ ಭಜನಾ ತರಬೇತುದಾರ ಹರೀಶ್ ನೆರಿಯಾ, ನೆಲ್ಯಾಡಿ ಗ್ರಾ.ಪಂ.ಸದಸ್ಯರಾದ ರವಿಪ್ರಸಾದ್ ಶೆಟ್ಟಿ ರಾಮನಗರ, ಪ್ರಕಾಶ್ ಪೂಜಾರಿ ರಾಮನಗರ ಉಪಸ್ಥಿತರಿರುವರು.


ಕ್ರೀಡೆಯ ಉದ್ದೇಶಕ್ಕಾಗಿ 5 ವರ್ಷದ ಹಿಂದೆ ಆರಂಭಗೊಂಡ ಶಾಸ್ತಾರ ಫ್ರೆಂಡ್ಸ್ ಸಂಘಟನೆಯು ಕ್ರೀಡೆಯ ಜೊತೆಗೆ 270ಕ್ಕೂ ಹೆಚ್ಚು ಕಡೆಗಳಲ್ಲಿ ಶ್ರಮದಾನ, ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆರ್ಥಿಕ ಸಹಾಯ, ಆಹಾರ ಸಾಮಾಗ್ರಿಗಳ ಒದಗಿಸುವಿಕೆ, ರಕ್ತದಾನ, ಧರ್ಮ ಜಾಗೃತಿ ಕಾರ್ಯಕ್ರಮ, ಕ್ರೀಡಾ ಕೂಟಗಳ ಆಯೋಜನೆ, ಮಕ್ಕಳಿಗೆ ಭಜನಾ ತರಬೇತಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ವಯಂ ಸೇವಕರಾಗಿ ಭಾಗವಹಿಸುವುದು,ಸ್ವಚ್ಛತಾ ಕಾರ್ಯಕ್ರಮ ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ನೆಲ್ಯಾಡಿ-ಬಲ್ಯ-ಕಡಬ ಮುಖ್ಯ ರಸ್ತೆಯ ರಾಮನಗರ ಅಂಗನವಾಡಿಯ ಸಮೀಪ ವಾಹನಕ್ಕಾಗಿ ಕಾಯುವವರು ರಸ್ತೆಯ ಬದಿಯಲ್ಲಿ ನಿಲ್ಲಬೇಕಿದ್ದ ಅನಿವಾರ್ಯ ಪರಿಸ್ಥಿತಿಯಿತ್ತು. ಮಳೆ, ಬಿಸಿಲಿಗೆ ರಸ್ತೆಯ ಬದಿಯಲ್ಲಿ ನಿಲ್ಲುವುದು ಕಷ್ಟದ ಕೆಲಸವಾಗಿತ್ತು, ಶಾಲೆಗೆ ಹೋಗುವ ಮಕ್ಕಗೂ ಸಮಸ್ಯೆಯಾಗಿತ್ತು. ಇಲ್ಲಿ ಪ್ರಯಾಣಿಕರ ತಂಗುದಾಣದ ಅವಶ್ಯಕತೆ ಇತ್ತು. ಇದನ್ನು ಮನಗಂಡು ಶಾಸ್ತಾರ ಫ್ರೆಂಡ್ಸ್ ವತಿಯಿಂದ ದಾನಿಗಳ ಸಹಕಾರದೊಂದಿಗೆ ಸುಸಜ್ಜಿತವಾದ ಪ್ರಯಾಣಿಕರ ತಂಗುದಾಣ ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here