ಕುಂಬ್ರ: ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರಿಂದ ಶ್ರಮದಾನ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ ಪುತ್ತೂರು ಇದರ ಕುಂಬ್ರ ಒಕ್ಕೂಟ ಹಾಗೂ ಬೆಳಕು ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಂದ ಅಂಗನವಾಡಿ ಶಾಲೆ ಹಾಗೂ ಕೆಪಿಎಸ್ ಪ್ರಾಥಮಿಕ ಶಾಲೆ ಕುಂಬ್ರದಲ್ಲಿ ಸ್ವಾತಂತ್ರೋತ್ಸವ ಕಾರ್ಯಕ್ರಮದ ಪ್ರಯುಕ್ತ ಶ್ರಮದಾನ ಮಾಡಲಾಯಿತು. ಒಕ್ಕೂಟದ ಉಪ ಕಾರ್ಯದರ್ಶಿ ಯತೀಶ್ ಗೌಡ ತ್ಯಾಗರಾಜೆ ಯವರು ಹುಲ್ಲು ಕತ್ತರಿಸುವ ಯಂತ್ರದ ಮೂಲಕ ಸ್ವಚ್ಛತೆಗೆ ಸಹಕರಿಸಿದರು.


ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಎಸ್ ಮಾಧವ ರೈ ಕುಂಬ್ರ, ಸೇವಾ ಪ್ರತಿನಿಧಿ ಶಶಿಕಲಾ ರೈ, ಜ್ಞಾನ ವಿಕಾಸ ಸಮಿತಿ ಸಂಯೋಜಕಿ ರಾಜೀವಿ ಕುಂಬ್ರ, ಅಂಗನವಾಡಿ ಕಾರ್ಯಕರ್ತೆ ಆಶಾಲತಾ ರೈ ಎಂ ಕುಂಬ್ರ, ಪ್ರಾಥಮಿಕ ಶಾಲಾ ಶಿಕ್ಷಕ ಶಿವಪ್ಪ ರಾಥೋಡ್, ಬಾಲವಿಕಾಸ ಸಮಿತಿ ಅಧ್ಯಕ್ಷೆ ಸುಜಾತ ಎಸ್ ರೈ, ಸದಸ್ಯರಾದ ವಿನೋದ್ ಶೆಟ್ಟಿ ಮುಡಾಲ, ಶಶಿಕಲಾ ಬಡಕೋಡಿ, ರೋಹಿಣಿ ಬಡಕೋಡಿ, ಶಶಿಕಲಾ ಮುಡಾಲ ಹಾಗೂ ಒಕ್ಕೂಟದ ಪದಾಧಿಕಾರಿಗಳು ಹಾಗೂ ಒಕ್ಕೂಟದ ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here