ಕಡಬ ತಾಲೂಕು ಜನಜಾಗೃತಿ ವೇದಿಕೆಯ ವತಿಯಿಂದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಗೆ ಆಹ್ವಾನ

0

ಪುತ್ತೂರು: ಅಖಿಲಿ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು ವತಿಯಿಂದ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸ್ಪರ್ಧೆಗಳ ವಿವರ:
ಹೈಸ್ಕೂಲ್, ಕಾಲೇಜು ಹಾಗೂ ಸಾರ್ವಜನಿಕ ವಿಭಾಗದಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಪ್ರತೀ ವಿಭಾಗದಲ್ಲಿ ಪ್ರಥಮ, ದ್ವಿತೀಯ, ಹಾಗೂ 3 ಜನರಿಗೆ ಸಮಾಧಾನಕರ ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು. ಪ್ರಬಂಧಗಳು 3 ಪುಟಕ್ಕೆ ಮೀರದಂತಿರಬೇಕು.

ಪ್ರಬಂಧ ಸ್ಪರ್ಧೆಯ ವಿಷಯಗಳು

ಹೈಸ್ಕೂಲ್ ವಿಭಾಗ = “ದುಶ್ಚಟ—-ಮಕ್ಕಳ ಬೆಳವಣಿಗೆಗೆ ಮಾರಕ

ಕಾಲೇಜು ವಿಭಾಗ = “ದುಶ್ಚಟದಿಂದ ಕುಟುಂಬದ ಮೇಲೆ ಆಗುವ ಪರಿಣಾಮ”

ಸಾರ್ವಜನಿಕ ವಿಭಾಗ = “ಮಾದಕ ಮುಕ್ತ ಸಮಾಜ”

ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಸಪ್ಟೆಂಬರ್ 9ರ ಒಳಗೆ ತಮ್ಮ ಹೆಸರು, ವಿಳಾಸ, ವಯಸ್ಸು, ವಿಭಾಗ, ಮೊಬೈಲ್ ಸಂಖ್ಯೆ ವಿವರಗಳೊಂದಿಗೆ ನೊಂದಾಯಿತ ಅಂಚೆಯ ಮೂಲಕ ಮಹೇಶ್ ಕೆ ಸವಣೂರು, ಅಧ್ಯಕ್ಷರು ಕಡಬ ತಾಲೂಕು ಜನಜಾಗೃತಿ ವೇದಿಕೆ, ಅಶ್ವಿನಿ ಕಾಂಪ್ಲೆಕ್ಸ್‌, ಸವಣೂರು ಗ್ರಾಮ ಮತ್ತು ಅಂಚೆ, ಕಡಬ ತಾಲೂಕು, ದ.ಕ 574202 ಇಲ್ಲಿಗೆ ಕಳಿಸಬಹುದು.

LEAVE A REPLY

Please enter your comment!
Please enter your name here