ನೆಲ್ಯಾಡಿ: ಶಿವಳ್ಳಿ ಸಂಪದ ನೆಲ್ಯಾಡಿ ವಲಯದ ವಾರ್ಷಿಕ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಆಟಿ ಕೂಟ ಕಾರ್ಯಕ್ರಮವು ಹೊಸಮಜಲುನಲ್ಲಿ ಸತೀಶ ಮುಡಂಬಡಿತ್ತಾಯರವರ ಸ್ವಗೃಹ ವಾಣಿಶ್ರೀಯಲ್ಲಿ ನಡೆಯಿತು.
ಸಭೆಯಲ್ಲಿ 2023-25ನೇ ಸಾಲಿಗೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ರಾಮಕೃಷ್ಣ ಯಡಪಡಿತ್ತಾಯ ಪಟ್ಟೆ, ಅಧ್ಯಕ್ಷರಾಗಿ ರಾಜೇಶ್ ರಾವ್ ನೆಲ್ಯಾಡಿ, ಕಾರ್ಯದರ್ಶಿಯಾಗಿ ಆದಿತ್ಯ ಪಿ.ವಿ, ತಾಲೂಕು ಪ್ರತಿನಿಧಿಯಾಗಿ ಸತೀಶ್ ಮೂಡಂಬಡಿತ್ತಾಯ, ಉಪಾಧ್ಯಕ್ಷರಾಗಿ ರವೀಂದ್ರ ಟಿ, ಸುಬ್ರಹ್ಮಣ್ಯ ತೋಡ್ತಿಲ್ಲಾಯ, ಬಾಲಚಂದ್ರ ಜೋಗಿತ್ತಾಯ, ಜೊತೆ ಕಾರ್ಯದರ್ಶಿಯಾಗಿ ವೆಂಕಟರಮಣ ಯಡಪಡಿತ್ತಾಯ ಸುಳ್ತಾಜೆ, ನಿರ್ದೇಶಕರಾಗಿ ಅನುದೀಪ್ ಬಾಳ್ತಿಲ್ಲಾಯ, ಸುಕುಮಾರ್ ಯಡಪಡಿತ್ತಾಯ, ರವಿಪ್ರಸಾದ್ ಆಚಾರ್, ಲಕ್ಷ್ಮೀ ನಾರಾಯಣ ಪೆರ್ಮುದೆನ್ನಾಯ, ಮಹಿಳಾ ಸಂಪದ ಅಧ್ಯಕ್ಷರಾಗಿ ಜಯಶ್ರೀ ತೋಡ್ತಿಲ್ಲಾಯ, ಕಾರ್ಯದರ್ಶಿಯಾಗಿ ಶಾರದಾ ಮೂಡಂಬಡಿತ್ತಾಯ ಆಯ್ಕೆಯಾದರು.
ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರ ದಲ್ಲಿ ತಮ್ಮದೇ ಕೊಡುಗೆಯನ್ನು ನೀಡುತ್ತಾ ಬಂದಿರುವ ಹೋಟೆಲ್ ಉದ್ಯಮಿ ಸುಬ್ರಹ್ಮಣ ಆಚಾರ್‌ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶಿವಳ್ಳಿ ಸಂಪದ ಪುತ್ತೂರು ತಾಲೂಕು ಅಧ್ಯಕ್ಷ ದಿವಾಕರ ಕೆ. ನಿಡ್ವಣ್ಣಾಯ, ಕಾರ್ಯದರ್ಶಿ ಸತೀಶ್ ಕೆದಿಲಾಯ, ಕೋಶಾಧಿಕಾರಿ ರಂಗನಾಥ್ ಉಂಗ್ರುಪುಳಿತ್ತಾಯ, ಮಾಧ್ಯಮ ವಕ್ತಾರ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ ಶುಭ ಹಾರೈಸಿದರು. ಸತೀಶ್ ಮೂಡಂಬಡಿತಾಯ ಸ್ವಾಗತಿಸಿ, ಆದಿತ್ಯ ಪಿ.ವಿ ವಂದಿಸಿದರು. ಶ್ರೇಯಾಸ್ ಪ್ರಾರ್ಥಿಸಿ, ಧನಲಕ್ಷ್ಮಿ ನೀತಿ ಸಂಹಿತೆ ವಾಚಿಸಿದರು. ನೂತನ ಅಧ್ಯಕ್ಷರು ಮುಂದಿನ ಎರಡು ವರ್ಷ ಸಂಪದದ ಸದಸ್ಯರ ಸಹಕಾರ ಯಾಚಿಸಿದರು. ರವೀಂದ್ರ ಟಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಿರ್ವಹಿಸಿದರು. ರಾಜೇಶ್ ರಾವ್ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು. ವಲಯದ ಸದಸ್ಯರು ತಮ್ಮ ಮನೆಯಲ್ಲಿಯೇ ತಯಾರಿಸಿ ತಂದ ಆಟಿಯ ವಿಶೇಷ ತಿನಿಸುಗಳನ್ನು ಪ್ರದರ್ಶಿಸಿ ಅವುಗಳ ವಿಶೇಷತೆ ತಿಳಿಸಿ ಹಂಚಿಕೊಂಡು ಸವಿದರು.