ಪುತ್ತೂರಿನ ಇತಿಹಾಸ ಪ್ರಸಿದ್ಧ ಕಲ್ಲೇಗ ಜುಮಾ ಮಸೀದಿ ಹಾಗೂ ಮ-ಅದನುಲ್ ಉಲೂಂ ಸೆಕೆಂಡರಿ ಮದ್ರಸ ವತಿಯಿಂದ ಸಂಭ್ರಮದ 77ನೇಯ ಸ್ವಾತಂತ್ರ್ಯೊತ್ಸವನ್ನು ಆಚರಿಸಲಾಯಿತು.
ಕಲ್ಲೇಗ ಜಮಾಅತ್ ಅಧ್ಯಕ್ಷರಾದ ಜಃ ಕೆ.ಪಿ.ಮುಹಮ್ಮದ್ ಹಾಜಿ ಧ್ವಜಾರೋಹಣ ನೆರವೇರಿಸಿದರು. ರೆಂಜಲಾಡಿ ಹುಸೈನ್ ದಾರಿಮಿ, ಶಾಫಿ ಫೈಝಿ, ಕಲ್ಲೇಗ ಇರ್ಫಾನಿ ಉಸ್ತಾದ್ ಸ್ವಾತಂತ್ರ್ಯೊತ್ವದ ಸಂದೇಶಗಳನ್ನು ನೀಡಿದರು. ಸ್ವಾತಂತ್ರ್ಯೊತ್ಸವದ ಸಲುವಾಗಿ ಮದ್ರಸ ವಿಧ್ಯಾರ್ಥಿಗಳಿಗೆ ಏರ್ಪಾಡಿಸಲಾಗಿದ್ದ ವಿವಿಧ ಸ್ಪರ್ಧಾ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಶಾಶ್ವತ ಫಲಕ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮದ್ರಸ ವಿಧ್ಯಾರ್ಥಿಗಳು, ದರ್ಸ್ ವಿಧ್ಯಾರ್ಥಿಗಳು, ಜಮಾಅತ್ ಕಮಿಟಿಯ ಪದಾಧಿಕಾರಿಗಳು, ಅಲ್- ಅಮೀನ್ ಯಂಗ್ ಮೆನ್ಸ್ ನ ಪದಾಧಿಕಾರಿಗಳು, SKSSF ನ ಪದಾಧಿಕಾರಿಗಳು, ಕಲ್ಲೇಗ NRI ಸಮಿತಿಯ ಸದಸ್ಯರು, ಜಮಾಅತ್ ಬಾಂಧವರು, ಮದ್ರಸ ಅಧ್ಯಾಪಕರು ಪಾಲ್ಗೊಂಡಿದ್ದರು. ಮದ್ರಸ ಮುಖ್ಯೋಪಾಧ್ಯಾಯರಾದ ಬಹುಃ ಶಮೀರ್ ದಾರಿಮಿ ಉಸ್ತಾದ್ ಸ್ವಾಗತಿಸಿದರು. ಮದ್ರಸ ಉಸ್ತುವಾರಿಗಳಾದ ಅಡ್ವಕೇಟ್ ಕೆ.ಯಂ.ಸಿದ್ದೀಕ್ ಹಾಜಿ , ಅಬ್ದುಲ್ ಲತೀಫ್ ಹಾಜಿ, ಸುಲೈಮಾನ್ ಉಸ್ತಾದ್ ಕಾರ್ಯಕ್ರಮ ನಿರೂಪಿಸಿದರು. ಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಧನ್ಯವಾದ ಸಮರ್ಪಿಸಿದರು.