ಪುತ್ತೂರು: ಬಲ್ನಾಡು ಗ್ರಾ.ಪಂ ವ್ಯಾಪ್ತಿಯ ಬಂಡಾರಿಕೆರೆ ಮೊಗೇರ ಗೇಟ್‌ವೇ ಸಂಘಟನೆಯಿಂದ ಬಂಡಾರಿಕೆರೆ ಉಮೇಶ್‌ರವರು ನಿವಾಸದ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ರಂಗಭೂಮಿ ಹಾಸ್ಯ ಕಲಾವಿದ ರವಿ ರಾಮಕುಂಜರವರು ಧ್ವಜಾರೋಹಣ ನೆರವೇರಿಸಿ ಶುಭಾಶಯ ಕೋರಿದರು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಹಿರಿಯರಾದ ಫಕೀರ ಬಂಡಾರಿಕೆರೆ ದೀಪ ಬೆಳಗಿಸಿ ಉದ್ಘಾಟಿಸಿದರು. ಮೊಗೇರ ಗೇಟ್‌ವೇ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಉಮೇಶ್ ಬಂಡಾರಿಕೆರೆ ಸಭಾಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪತ್ರಕರ್ತ ಸಿಶೇ ಕಜೆಮಾರ್, ಗ್ರಂಥಾಲಯ ಸಹಾಯಕ ಸುಂದರ ಸಾರ್ಯ, ಹಿರಿಯರಾದ ಸುಂದರಿ ಪನೆತ್ತಡ್ಕ, ಗುರಿಕಾರ ಶೇಷಪ್ಪ ಮಂಜ, ಅಂಗನವಾಡಿ ಕಾರ್ಯಕರ್ತೆ ಅಶ್ವಿನಿ ಕೆರೆಮೂಲೆ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಚಿತ್ರಕಲೆ ಹಾಗೂ ಆಶು ಭಾಷಣ ಸ್ಪರ್ಧೆ ನಡೆದು ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಲ್ನಾಡು ಗ್ರಾಪಂ ಸದಸ್ಯೆ ಚಂದ್ರಾವತಿ ಬಂಡಾರಿಕೆರೆ ಸ್ವಾಗತಿಸಿದರು. ಚಮೀಷಾ ಬಂಡಾರಿಕೆರೆ, ವರ್ಷಾ ಬಂಡಾರಿಕೆರೆ, ಮೋನಪ್ಪ ಕೆರೆಮೂಲೆ, ಅಶೋಕ್ ಬಂಡಾರಿಕೆರೆ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಯಜ್ಞೇಶ್ ಕುಲಾಲ್ ವಂದಿಸಿದರು. ಸೌಮ್ಯ ಎರ್ಮೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಪನೆತ್ತಡ್ಕ, ಸೀತಾ ಪನೆತ್ತಡ್ಕ, ರಿತಿಕ್, ನವೀನ್, ರಂಜಿತ್ ಮತ್ತಿತರರು ಸಹಕರಿಸಿದ್ದರು. ಶಿಕ್ಷಣ, ಕ್ರಾಂತಿ, ಸಮೃದ್ಧಿ ಹೆಸರಿನಲ್ಲಿ ಸೇವೆಗೈಯುತ್ತಿರುವ ಮೊಗೇರ ಗೇಟ್‌ವೇ ಸಂಘಟನೆಯ ಎರಡನೇ ಕಾರ್ಯಕ್ರಮ ಇದಾಗಿದೆ. ಮೊಗೇರ ಗೇಟ್‌ವೇ ಸಂಸ್ಥಾಪಕ ಅಶೋಕ್ ಪನೆತ್ತಡ್ಕ ಕಾರ್ಯಕ್ರಮ ಸಂಯೋಜಿಸಿದ್ದರು.