ಅಮ್ಚಿನಡ್ಕ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ – ನೂತನ ಧ್ವಜಸ್ಥಂಭ ಉದ್ಘಾಟನೆ-ಸಾಧಕರಿಗೆ ಸನ್ಮಾನ

0

ಪುತ್ತೂರು: ಬದ್ರಿಯಾ ಜುಮಾ ಮಸೀದಿ ಅಮ್ಚಿನಡ್ಕ ಹಾಗೂ ಅಲ್ ಬದ್ರಿಯಾ ಯೂತ್ ವಿಂಗ್ ಇದರ ಜಂಟಿ ಆಶ್ರಯದಲ್ಲಿ 77ನೇ ಸ್ವಾತಂತ್ರ್ಯೋತ್ಸವ ಆಚರಣೆ ಮಸೀದಿ ವಠಾರದಲ್ಲಿ ನಡೆಯಿತು. ಅಮ್ಚಿನಡ್ಕ ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್ ಸಿ.ಎ ಧ್ವಜಾರೋಹಣ ನೆರವೇರಿಸಿದರು. ಬದ್ರಿಯಾ ಯೂತ್ ವಿಂಗ್ ಅಧ್ಯಕ್ಷ ಅಬ್ದುಲ್ ಮಜೀದ್ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಖತೀಬ್ ಅಬ್ದುಲ್ ಸಲಾಂ ಫೈಝಿ ಸಂದೇಶ ಭಾಷಣ ಮಾಡಿದರು. ಅಮ್ಚಿನಡ್ಕ ಮಸೀದಿಯ ಮುಅಲ್ಲಿಂ ಇಬ್ರಾಹಿಂ ಬಾತಿಷಾ ಝುಹ್ರಿ ಆಶಂಸ ಭಾಷಣ ನಡೆಸಿದರು. ಇದೇ ಸಂದರ್ಭದಲ್ಲಿ ಮಸೀದಿ ಮುಂಭಾಗದಲ್ಲಿ ನಿರ್ಮಾಣಗೊಂಡ ನೂತನ ಧ್ವಜಸ್ಥಂಭವನ್ನು ಉದ್ಘಾಟಿಸಲಾಯಿತು.

ಸನ್ಮಾನ:
ಮಸೀದಿಯಲ್ಲಿ ಸುಧೀರ್ಘ ಕಾಲ ಸೇವೆ ಸಲ್ಲಿಸಿದ ಅಬ್ದುಲ್ ಖಾದರ್ ಕೆ.ಕೆ, ವೈದ್ಯಕೀಯ ಕ್ಷೇತ್ರದ ಸೇವೆಗಾಗಿ ಡಾ.ನಝೀರ್ ಅಹ್ಮದ್, ಖಬರ್ ಕಾರ್ಯ ನಿರ್ವಹಿಸುವ ನಿಸ್ವಾರ್ಥ ಸೇವೆಗಾಗಿ ಇಸ್ಮಾಯಿಲ್ ಕೆ.ಎಂ, ಅರಿಯಡ್ಕ ಗ್ರಾ.ಪಂನ ಜನ ಮೆಚ್ಚಿದ ವಾಟರ್‌ಮೆನ್ ನಾರಾಯಣ ಗೌಡ, ಯುವ ಸಾಮಾಜಿಕ ಹೋರಾಟಗಾರ ಎಡ್ವರ್ಡ್ ಡಿಸೋಜಾ ಮೊದಲಾದವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಅಮ್ಚಿನಡ್ಕ ಮಸೀದಿಯ ಮಾಜಿ ಅಧ್ಯಕ್ಷರಾದ ಹಾಜಿ ಅಡ್ಕಾರ್ ಮಹಮ್ಮದ್ ಹಾಗೂ ಹಸೈನಾರ್ ಹಾಜಿ, ಬದ್ರಿಯಾ ಯೂತ್ ವಿಂಗ್‌ನ ಮಾಜಿ ಅಧ್ಯಕ್ಷರಾದ ಖಲಂದರ್, ಅಝೀಝ್, ಹಾಶಿಂ ಅನ್ಸಾರಿ, ಸಾದಿಕ್, ಮಸೀದಿಯ ಕೋಶಾಧಿಕಾರಿ ಯೂಸುಫ್ ಹಾಜಿ, ಸಾಮಾಜಿಕ ಕಾರ್ಯಕರ್ತ ರಶೀದ್ ಅಮ್ಚಿನಡ್ಕ ಸಹಿತ ಜಮಾಅತರು,, ಸರ್ವ ಧರ್ಮಿಯರು, ಊರವರು ಉಪಸ್ಥಿತರಿದ್ದರು. ಬದ್ರಿಯಾ ಯೂತ್ ವಿಂಗ್‌ನ ಪ್ರ.ಕಾರ್ಯದರ್ಶಿ ಸಿದ್ದೀಕ್ ಎಂ.ಕೆ ಸ್ವಾಗತಿಸಿದರು. ಉಪಾಧ್ಯಕ್ಷ ಆಶಿಕ್ ಮುಖಾರಿಮೂಲೆ ವಂದಿಸಿದರು.

LEAVE A REPLY

Please enter your comment!
Please enter your name here