ಚಾರ್ವಾಕ ಸಿ.ಎ ಬ್ಯಾಂಕಿನ ಪ್ರಧಾನ ಕಚೇರಿ ಕಾಣಿಯೂರಿನಲ್ಲಿ ಸ್ವಾತಂತ್ರೋತ್ಸವ ದಿನಾಚರಣೆ

0

ಕಾಣಿಯೂರು: ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪ್ರಧಾನ ಕಛೇರಿ ಕಾಣಿಯೂರಿನಲ್ಲಿ 77ನೇ ಸ್ವಾತಂತ್ರೋತ್ಸವ ದಿನಾಚರಣೆಯು ನಡೆಯಿತು.

ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ ಧ್ವಜಾರೋಹಣ ನೆರವೇರಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಮುರಳೀಧರ ಪುಣ್ಚತ್ತಾರು, ನಿರ್ದೇಶಕರುಗಳಾದ ಅನಂತ್ ಕುಮಾರ್ ಬೈಲಂಗಡಿ,ಪುಟ್ಟಣ್ಣ ಗೌಡ ಮುಗರಂಜ, ವಿಶ್ವನಾಥ ಕೂಡಿಗೆ, ವಿಶ್ವನಾಥ ಮರಕ್ಕಡ, ರಮೇಶ್ ಉಪ್ಪಡ್ಕ,ಕಾಣಿಯೂರು ಗ್ರಾ. ಪಂ ಅಧ್ಯಕ್ಷೆ ಲಲಿತಾ ದರ್ಖಾಸು, ಉಪಾಧ್ಯಕ್ಷ ಗಣೇಶ್ ಉದನಡ್ಕ, ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಕರಂದ್ಲಾಜೆ, ಕಾಣಿಯೂರು ಕುಮಾರ್ ಕ್ಲೀನಿಕ್‌ನ ಡಾ. ಉದಯ ಕುಮಾರ್, ಪುತ್ತೂರು ಪಿ.ಎಲ್. ಬ್ಯಾಂಕ್ ಬ್ಯಾಂಕ್ ನಿರ್ದೇಶಕ ದೇವಯ್ಯ ಗೌಡ ಖಂಡಿಗ, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ, ಉಪಾಧ್ಯಕ್ಷ ಬಾಲಕೃಷ್ಣ ಇಡ್ಯಡ್ಕ, ಸಂಘದ ಮಾಜಿ ಅಧ್ಯಕ್ಷ ಧರ್ಮೇಂದ್ರ ಗೌಡ ಕಟ್ಟತ್ತಾರು, ಮಾಜಿ ನಿರ್ದೇಶಕರಾದ ಪದ್ಮಯ್ಯ ಗೌಡ ಅನಿಲ, ದೇವಿಪ್ರಸಾದ್ ದೋಳ್ಪಾಡಿ, ರಾಶಿ ಕಾಂಪ್ಲೆಕ್ಸ್ ಮಾಲಕ ಚಂದ್ರಶೇಖರ್ ಬರೆಪ್ಪಾಡಿ ಪಸ್ಥಿತರಿದ್ದರು. ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ವಾಣಿ ಅಬಿಕಾರ, ಭವತ್ ಅಗಳಿ, ಪುನಿತ್ ಬಂಡಾಜೆ, ವಸಂತಿ, ವಿನಯ್ ಎಳುವೆ, ದುರ್ಗಾ ಪ್ರಸಾದ್, ಲೋಕೇಶ್, ವೇಣುಗೋಪಾಲ, ಈಶ್ವರ, ಕೇಶವ ಗೌಡ ಸಹಕರಿಸಿದರು.

LEAVE A REPLY

Please enter your comment!
Please enter your name here