ಪುತ್ತೂರು: ತ್ಯಾಗರಾಜೆ ನೂರುಲ್ ಹುದಾ ಜುಮಾ ಮಸೀದಿಯಲ್ಲಿ 77ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಜಮಾಅತ್ ಅಧ್ಯಕ್ಷ ಆದಂ ಬೇರಿಕೆ ಧ್ವಜಾರೋಹಣ ನೆರವೇರಿಸಿದರು. ಸ್ಥಳೀಯ ಖತೀಬ್ ಅಬ್ದುಲ್ ನಾಸಿರ್ ಫೈಝಿ ಕುಂತೂರು ಮಾತನಾಡಿ ನಮ್ಮ ಪೂರ್ವಿಕರು ದೊರಕಿಸಿಕೊಟ್ಟ ಭಾರತದ ಸ್ವಾತಂತ್ರ್ಯವನ್ನು ಉಳಿಸಲು ಪ್ರತಿಯೊಬ್ಬ ಭಾರತೀಯರು ಬದ್ಧರಾಗಬೇಕೆಂದು ಹೇಳಿದರು. ನಂತರ ಮದ್ರಸ ವಿದ್ಯಾರ್ಥಿ ಸಂಘಟನೆಯಾದ ಎಸ್ಕೆಎಸ್‌ಬಿವಿ ವಿದ್ಯಾರ್ಥಿಗಳಿಂದ ದೇಶ ಭಕ್ತಿಗೀತೆ ಹಾಡಲಾಯಿತು. ಮದ್ರಸ ಮುಖ್ಯೋಪಾಧ್ಯಾಯರಾದ ನಾಸಿರ್ ಫೈಝಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಸಹ ಅಧ್ಯಾಪಕ ಅಬೂಬಕ್ಕರ್ ಅಝ್ಹರಿ ದುವಾ ನೆರವೇರಿಸಿದರು. ಎಸ್ಕೆಎಸ್ಸೆಸ್ಸೆಫ್ ಹಮಾರಾ ವತನ್ ಕಾರ್ಯಕ್ರಮ ನಡೆಯಿತು. ಜಮಾತ್ ಕಾರ್ಯದರ್ಶಿ ಶರೀಫ್ ತ್ಯಾಗರಾಜೆ, ಕೋಶಾಧಿಕಾರಿ ಸುಲೈಮಾನ್ ಪಟ್ಟೆ, ಯಂಗ್‌ಮೆನ್ಸ್ ಅಧ್ಯಕ್ಷ ಹಾರಿಸ್ ತೋಟ ಸೇರಿದಂತೆ ಜಮಾಅತರು, ಎಸ್‌ಕೆಎಸ್ಸೆಸ್ಸೆಫ್, ಎನ್‌ಎಚ್‌ವೈಎ ಸದಸ್ಯರು, ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸ್ವಾತಂತ್ರ್ಯದ ಅಂಗವಾಗಿ ಮದ್ರಸದಲ್ಲಿ ನಡೆದ ಕಲಾ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಿ, ಕೊನೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು.