ಉದನೆ: ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ – 60 ಮಾಜಿ ಯೋಧರಿಗೆ ಸನ್ಮಾನ

0

ನೆಲ್ಯಾಡಿ: ದೇಶದ 77ನೇ ಸ್ವಾತಂತ್ರ್ಯದ ಹಬ್ಬವನ್ನು ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಕಡಬ ತಾಲೂಕಿನ ಮಾಜಿ ಯೋಧರ ಸಂಘದ ಸಹಯೋಗದೊಂದಿಗೆ ನಡೆದ ಉತ್ಸವ ಇಂದಿನ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದಿತು.


ಧ್ವಜಾರೋಹಣವನ್ನು ಕಡಬ ತಾಲೂಕಿನ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಕೆ.ಸಿ ಸೈಮನ್ ನೆರವೇರಿಸಿದರು. ಬಳಿಕ ಉದನೆ ಪೇಟೆಯಲ್ಲಿ ಮೆರವಣಿಗೆ ನಡೆಯಿತು. ವಿದ್ಯಾರ್ಥಿಗಳ ಬ್ಯಾಂಡ್ ವಾದ್ಯ ಘೋಷದೊಂದಿಗೆ ಯೋಧರು, ವಿದ್ಯಾರ್ಥಿಗಳು, ಸಂಸ್ಥೆಯ ಸಿಬ್ಬಂದಿ ವರ್ಗದವರು, ಪೂರ್ವ ವಿದ್ಯಾರ್ಥಿ ವೃಂದ, ಪಾಲಕರು ಮೆರವಣಿಗೆಯಲ್ಲಿ ಸಾಗಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್ ವಹಿಸಿದ್ದರು. ಶಿರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನೀತಾ ತಂಗಚ್ಚನ್, ಎಕ್ಸ್ ಸರ್ವಿಸ್ ಮನ್ ಅಸೋಸಿಯೇಶನ್ ದ.ಕ. ಇದರ ಅಧ್ಯಕ್ಷರಾದ ಜೆ.ಪಿ.ಎಂ.ಚೆರಿಯನ್, ಎಕ್ಸ್ ಸರ್ವಿಸ್‌ಮನ್ ಕಡಬ ತಾಲೂಕು ಅಧ್ಯಕ್ಷರಾದ ಸೈಮನ್ ಕೆ.ಸಿ., ಎಕ್ಸ್ ಸರ್ವಿಸ್‌ಮೆನ್ ಅಸೋಸಿಯೇಷನ್‌ನ ಸ್ಥಾಪಕಾಧ್ಯಕ್ಷರೂ, ಗೌರವಾಧ್ಯಕ್ಷರೂ ಆದ ಮ್ಯಾಥ್ಯೂ ಟಿ.ಜಿ., ಎಕ್ಸ್ ಸರ್ವಿಸ್‌ಮನ್ ದ.ಕ. ಗೌರವಾಧ್ಯಕ್ಷ ವಾಸುದೇವ ಗೌಡ, ವೀರನಾರಿ ದ.ಕ ಇದರ ಜಿಲ್ಲಾಧ್ಯಕ್ಷೆ ಜಿ.ಕೆ ಗೀತಾ ಅತಿಥಿಗಳಾಗಿ ಉಪಸ್ಥಿತರಿದ್ದು, ಸೈನಿಕ ಸೇವೆಯ ನೆನಪುಗಳನ್ನು ಹಂಚಿಕೊಂಡರು. ನಿವೃತ್ತ ಸೈನಿಕರಾದ ಜೆ.ಪಿ.ಎಂ.ಚೆರಿಯನ್, ಒ.ಜಿ ನೈನಾನ್, ವಾಸುದೇವ ಗೌಡರವರು ದಿಕ್ಸೂಚಿ ಭಾಷಣ ಮಾಡಿದರು. ಮ್ಯಾಥ್ಯೂ ಟಿ.ಜಿ., ವಿನೀತಾ ತಂಗಚ್ಚನ್‌ರವರು ಶುಭ ಹಾರೈಸಿದರು. ಸಂಚಾಲಕ ರೆ.ಫಾ ಹನಿ ಜೇಕಬ್‌ರವರು ಸೈನಿಕರ ದೇಶ ಸೇವೆಯನ್ನು ಕೊಂಡಾಡಿ ಸ್ವಾತಂತ್ರ್ಯದಿನದ ಶುಭಾಶಯ ಕೋರಿದರು. ಮಾಜಿ ಯೋಧರಿಗೆ ಗೌರವಾರ್ಪಣೆ ಮಾಡಲಾಯಿತು.
ಕನ್ನಡ ಮಾಧ್ಯಮದ ಮುಖ್ಯಸ್ಥ ಶ್ರೀಧರ ಗೌಡರವರು ಮಾಜಿ ಸೈನಿಕರ ಪರಿಚಯ ಮಾಡಿದರು. ಬಳಿಕ ವಿದ್ಯಾರ್ಥಿಗಳಿಂದ ಹಲವು ದೇಶಭಕ್ತಿ ಕಾರ್ಯಕ್ರಮ ನೆರವೇರಿತು. ಸೈಂಟ್ ಆಂಟನೀಸ್ ಹಾಗೂ ಬಿಷಪ್ ಪೋಳಿಕಾರ್ಪಸ್ ಸಂಸ್ಥೆಯ ಮುಖ್ಯಸ್ಥರು, ಶಿಕ್ಷಕ ಶಿಕ್ಷಕೇತರ ವೃಂದ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಚಾಲಕವೃಂದ, ಪಾಲಕರು, ಪೂರ್ವವಿದ್ಯಾರ್ಥಿಗಳು, ಅಡುಗೆ ಸಿಬ್ವಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಿರಿಯ ಶಿಕ್ಷಕ ಬಾಲಕೃಷ್ಣ ಗೌಡ ಸ್ವಾಗತಿಸಿ, ದೈಹಿಕ ಶಿಕ್ಷಕ ಜಿಮ್ಸನ್ ವರ್ಗೀಸ್ ವಂದಿಸಿದರು. ಶಿಕ್ಷಕಿಯರಾದ ಸುಪ್ರೀತಾ ಹಾಗೂ ವಿಲ್ಮಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here