ಪುತ್ತೂರು: ನೆಲ್ಲಿಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಎಸ್ ಡಿಎಂಸಿ ಅಧ್ಯಕ್ಷೆ ವಸುಧ ಧ್ವಜಾರೋಹಣ ನೆರವೇರಿಸಿದರು.
ಉಲ್ಲಾಸ್ ಪೈ ಮಾತನಾಡಿ ನಾವು ಸ್ವತಂತ್ರ ಜೀವನ ನಡೆಸಲು ಮಹಾನ್ ವ್ಯಕ್ತಿಗಳ ಹಿರಿಯರ ತ್ಯಾಗ ಬಲಿದಾನಗಳನ್ನು ವಿದ್ಯಾರ್ಥಿಗಳಿಗೆ ನೆನಪಿಸುತ್ತ ತಮ್ಮ ಜೀವನದಲ್ಲಿ ಉತ್ತಮವಾಗಿ ಕಲಿತು ದೇಶಪ್ರೇಮ ದೇಶ ಅಭಿಮಾನ ಹಾಗೂ ದೇಶ ಸೇವೆ ಮಾಡಲು ಕಟಿಬದ್ಧರಾಗಬೇಕು ನಮ್ಮ ಭಾರತ ದೇಶವು ವಿಶ್ವದಲ್ಲೇ ಅಭಿವೃದ್ಧಿ ಹೊಂದಿದ ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತಿದ್ದು ಇದನ್ನು ಮುಂದುವರಿಸುವ ಜವಾಬ್ದಾರಿ ನಮ್ಮೆಲ್ಲಾ ಪ್ರಜೆಗಳ ಮೇಲೆ ಇದೆ ಎಂದರು.
ವೇದಮೂರ್ತಿ ವೆಂಕಟೇಶ್ ಭಟ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತೃ ಸೇವೆ ಮಾತೃಪೂಜನ ಉತ್ತಮ ವಿದ್ಯಾರ್ಥಿಗಳಾಗಿ ಬಾಳಬೇಕು ಮಹಾತ್ಮ ಗಾಂಧಿಯವರ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿಸಿದರು. ಎಸ್ ಡಿ ಎಂ ಸಿ ಅಧ್ಯಕ್ಷೆ ವಸುದಾ ಅವರು ಸ್ವಾತಂತ್ರ್ಯೋತ್ಸವದ ಶುಭಾಶಯಗಳು ಸಲ್ಲಿಸಿದರು. ಮುಖ್ಯ ಗುರು ಯಶೋಧ ಸ್ವಾಗತಿಸಿದರು ಹಾಗೂ ಶಿಕ್ಷಕಿ ರಾಜೇಶ್ವರಿ ವಂದಿಸಿದರು.
ಶಾಲಾ ಮುಖ್ಯ ಗುರು ಯಶೋಧ, ದತ್ತು ಸಮಿತಿ ವೇದಮೂರ್ತಿ ವೆಂಕಟೇಶ್ ಭಟ್, ನಿವೃತಾ ಶಿಕ್ಷಕಿ ಮೀನಾಕ್ಷಿ, ಸಮಾಜ ಸೇವಕಿ ನಯನರೈ, ಅಂಗನವಾಡಿ ಕಾರ್ಯಕರ್ತೆಯರು, ಪುತ್ತೂರು ರೋಟರಿ ಕ್ಲಬ್ ಸಿಟಿ ಚಾರಿಟೇಬಲ್ ಟ್ರಸ್ಟ್ “ವಿದ್ಯಾ ಜ್ಯೋತಿ” ಎಲ್ ಕೆ ಜಿ ಶಿಕ್ಷಕಿಯರು, ಶಾಲಾ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.