ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದಿಂದ ಬಿರುಮಲೆ ಬೆಟ್ಟ ಪ್ರಜ್ಞಾ ಆಶ್ರಮದಲ್ಲಿ ಸ್ವಾತಂತ್ರ್ಯೋತ್ಸವ – ಆರ್ಥಿಕ ನೆರವು

0

ಪುತ್ತೂರು: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ 77ನೇ ಸ್ವಾತಂತ್ರ್ಯೋತ್ಸವವನ್ನು ಬಿರುಮಲೆ ಬೆಟ್ಟದ ಪ್ರಜ್ಞಾ ವಿಶೇಷ ಚೇತನರ ಆಶ್ರಮದಲ್ಲಿ ಧ್ವಜಾರೋಹಣದೊಂದಿಗೆ ಆಚರಿಸಲಾಯಿತು.


ಪ್ರೊ ವಿ ಬಿ ಅರ್ತಿಕಜೆಯವರು ರಾಷ್ಟ್ರಧ್ವಜವನ್ನು ಅರಳಿಸಿದರು. ಬಳಿಕ ಸಭಾ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯೋತ್ಸವ ಸಂದೇಶವನ್ನು ನಿವೃತ್ತ ಎಸ್ಪಿಯಾಗಿರುವ ಸಂಘದ ಉಪಾಧ್ಯಕ್ಷ ರಾಮ್‌ದಾಸ್ ಗೌಡರು ನೀಡಿದರು. ಹಿರಿಯ ನಾಗರಿಕರ ಹಿತರಕ್ಷಣಾ ಸಂಘದ ಅಧ್ಯಕ್ಷ ಝೇವಿಯರ್ ಡಿ’ಸೋಜ ರವರು ಸ್ವಾತಂತ್ರ್ಯ ದಿನಾಚರಣೆಯ ಔಚಿತ್ಯದ ಬಗ್ಗೆ ಮಾತಾಡಿದರು. ಸಂಘದ ಅಧ್ಯಕ್ಷ ಬಿ ಐತ್ತಪ್ಪ ನಾಯ್ಕ್ ರವರು ಅಧ್ಯಕ್ಷತೆ ವಹಿಸಿ ಪ್ರಜ್ಞಾ ಆಶ್ರಮದ ಅಣ್ಣಪ್ಪ, ಜ್ಯೋತಿ ದಂಪತಿಯನ್ನು ಅಭಿನಂದಿಸಿ, ನಿವೃತ್ತ ಸೇನಾನಿ ರಮೇಶ ಬಾಬುರವರು ನೀಡಿದ ಧನಸಹಾಯ ರೂ 5000 ವನ್ನು ಹಸ್ತಾಂತರಿಸಿದರು. ಸಂಘದ ಕಾರ್ಯದರ್ಶಿ ತಿರುಮಲೇಶ್ವರ ಭಟ್ ರವರು ಸ್ವಾಗತಿಸಿದರು. ಕೋಶಾಧ್ಯಕ್ಷೆ ಶಾಂತಿ ಟಿ ಹೆಗಡೆ ವಂದಿಸಿದರು.

ನಿವೃತ್ತ ನೌಕರ ಸಂಘದ ಪದಾಧಿಕಾರಿಗಳಾದ ಜಗನ್ನಾಥ ರೈ, ಲೀನಾ ಫುಡ್ತಾದೊ,ಶಂಕರಿ ಎಂ ಎಸ್ ಭಟ್, ಶಿವಾನಂದ ಎನ್, ಸೂರಪ್ಪ ಗೌಡ ಬಿ,ಜಗನ್ನಾಥ ರೈ ಎಮ್, ಗೋಪಾಲಕೃಷ್ಣ ಉಪಾಧ್ಯಾಯ, ಸುಶೀಲಾ ಕುಮಾರಿ ಕೆ, ನಿರ್ಮಲ ಬಿ ಕೆ, ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ಯಶೋದಾ ಪಿ ರಾವ್,ಕೋಶಾಧಿಕಾರಿ ಜಯಂತಿ ಪಿ ನಾಯ್ಕ್,ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು,ಕಛೇರಿ ವ್ಯವಸ್ಥಾಪಕರಾದ ಶ್ರೇಯಾ ಶೆಟ್ಟಿರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.ಸಂಘದ ಎಲ್ಲ ಸದಸ್ಯರು ಪ್ರಜ್ಞಾ ಆಶ್ರಮಕ್ಕೆ ತಮ್ಮ ಕೊಡುಗೆಯಾಗಿ ನೀಡಿದ ರೂ. ೧೫,೫೦೦ ಅನ್ನು ಹಸ್ತಾಂತರಿಸಲಾಯಿತು.

LEAVE A REPLY

Please enter your comment!
Please enter your name here