ಪುತ್ತೂರು: ಶಾಂತಿಗೋಡಿನಲ್ಲಿರುವ ನವಚೇತನ ಹಿರಿಯ ನಾಗರಿಕರ ಬಡಾವಣೆಯಲ್ಲಿ 77ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಲೋಕೋಪಯೋಗಿ ನಿವೃತ್ತ ಇಂಜಿನೀಯರ್ ಮುದ್ರಜೆ ಗೋವಿಂದ ಭಟ್ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ನಿವೃತ್ತ ಮ್ಯಾನೇಜರ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ವಿಶ್ವನಾಥ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ದೇಶದ ಇತಿಹಾಸದ ಕುರಿತು ಮಾಹಿತಿ ನೀಡಿದರು. ಬಳಿಕ ದೇಶಭಕ್ತಿ ಗೀತೆ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಇತ್ತೀಚೆಗೆ ಅಗಲಿದ ನವಚೇತನದ ಹಿರಿಯರಾದ ರಾಮಕೃಷ್ಣ ಭಟ್ ಮಿತ್ತೂರು, ಲಲಿತಾ ಭಟ್ ಬೆಳಗಜೆ ಹಾಗೂ ಬಬ್ಲಿ ಕೃಷ್ಣ ಭಟ್ ಅವರಿಗೆ ಮೌನ ಪ್ರಾರ್ಥನೆ ಮೂಲಕ ಚಿರಶಾಂತಿ ಕರುಣಿಸಲಾಯಿತು. ನವಚೇತನದ ಸಿಬ್ಬಂದಿವರ್ಗ ಮತ್ತು ನಿವಾಸಿಗಳು ಉಪಸ್ಥಿತರಿದ್ದರು.