ಸವಣೂರು ಚಾಪಳ್ಳ ಮದ್ರಸದಲ್ಲಿ ಸ್ವಾತಂತ್ರ್ಯೋತ್ಸವ

0

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಮರ ಕೊಡುಗೆ ಅವರ್ಣನೀಯ: ಅಶ್ರಫ್ ಫಾಝಿಲ್ ಬಾಖವಿ

ಪುತ್ತೂರು: ಹಿದಾಯತುಲ್ ಇಸ್ಲಾಂ ಮದ್ರಸ ಚಾಪಲ್ಲ ಸವಣೂರು ಇಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಮಸೀದಿಯ ಗೌರವಾಧ್ಯಕ್ಷ ಅಸಯ್ಯಿದ್ ಹಾಮಿದುಲ್ ಹಾದೀ ತಂಙಳ್ ಮಂಜೇಶ್ವರ ಪ್ರಾರ್ಥನೆಗೈದರು.


ಚಾಪಳ್ಳ ಮಸೀದಿಯ ಅಧ್ಯಕ್ಷ ಉಮರ್ ಹಾಜಿ ಕೆನರಾ ಧ್ವಜಾರೋಹಣ ನೆರವೇರಿಸಿದರು. ಹಿದಾಯತುಲ್ ಇಸ್ಲಾಂ ಮದ್ರಸ ವಿಧ್ಯಾರ್ಥಿಗಳು ರಾಷ್ಟ್ರಗೀತೆ ಮತ್ತು ದೇಶಭಕ್ತಿ ಗೀತೆ ಹಾಡಿದರು. ಸಂದೇಶದ ಭಾಷಣ ಮಾಡಿದ ಚಾಪಲ್ಲ ಮುದರ್ರಿಸ್ ಅಶ್ರಫ್ ಫಾಝಿಲ್ ಬಾಖವಿಯವರು ಭಾರತದ ಸ್ವಾತಂತ್ರ್ಯವೆಂಬುವುದು ಕೇವಲ ಒಂದಿಬ್ಬರ ಹೋರಾಟದ ಫಲವಲ್ಲ. ನಮ್ಮ ಪೂರ್ವಿಕರ ತ್ಯಾಗೋಜ್ವಲ ಬದುಕಿನ, ಹೋರಾಟದ ಉಡುಗೊರೆಯಾಗಿದೆ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮುಸಲ್ಮಾನರ ಕೊಡುಗೆ ಅಪಾರ. ಮಸೀದಿ ಮದರಸಾ ಮತ್ತು ಧಾರ್ಮಿಕ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯು ಅತ್ಯಂತ ಮಹತ್ವವನ್ನು ಪಡೆಯುತ್ತದೆ. ಇಂಡಿಯಾ ಗೇಟ್ ಗೋಡೆಯಲ್ಲಿ ಅಚ್ಚಳಿಯದೆ ಬಾಕಿಯಿರುವ ಸ್ವಾತಂತ್ರ್ಯ ಹೋರಾಟಗಾರರ ನಾಮಗಳಲ್ಲಿ ಸಿಂಹಪಾಲು ಮುಸ್ಲಿಮರದ್ದಾಗಿದೆ ಎಂಬುದು ಭಾರತಕ್ಕೆ ಮುಸ್ಲಿಮರು ನೀಡಿದ ಕೊಡುಗೆಯನ್ನು ಎತ್ತಿ ತೋರಿಸುತ್ತದೆ ಎಂದರು.
ಚಾಪಲ್ಲ ದರ್ಸ್ ಪ್ರ.ಕಾರ್ಯದರ್ಶಿ ಹನೀಫ್ ಸವಣೂರು, ಸವಣೂರು ಗ್ರಾ.ಪಂ ಸದಸ್ಯ ಎಂ.ಎ ರಫೀಕ್ ಮಾತನಾಡಿದರು.
ಚಾಪಲ್ಲ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ತೋಟದಮೂಲೆ ಹಾಗೂ ಜಮಾಅತ್ ಸಮಿತಿ ಪದಾಧಿಕಾರಿಗಳು, ಮದ್ರಸ ಅಧ್ಯಾಪಕರು, ಅಲ್ ನೂರ್ ಯೂತ್ ಫೆಡರೇಷನ್ ಸದಸ್ಯರು, ಎಸ್ಕೆಎಸ್ಸೆಸ್ಸೆಫ್ ಸದಸ್ಯರು, ರಿಫಾಯಿಯ್ಯಾ ಧಫ್ ಸಂಘದ ಸದಸ್ಯರು, ಎಂ.ಕ್ಯು.ಎಸ್.ಎ ದರ್ಸ್ ವಿದ್ಯಾರ್ಥಿಗಳು, ಊರವರು, ಎಚ್‌ಐಎಂ ಚಾಪಲ್ಲ ಸವಣೂರು ವಿದ್ಯಾರ್ಥಿ – ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ತಾಜುದ್ದೀನ್ ಫೈಝಿ ಸ್ವಾಗತಿಸಿದರು. ಅಬೂಬಕ್ಕರ್ ಸಿದ್ದೀಕ್ ಅರ್ಶದಿ ಅಡ್ಯನಡ್ಕ ವಂದಿಸಿದರು.

LEAVE A REPLY

Please enter your comment!
Please enter your name here