ಪುತ್ತೂರು: ಕಲ್ಲಗುಡ್ಡೆ ಹಿದಾಯತುಲ್ ಇಸ್ಲಾಂ ಮದ್ರಸದಲ್ಲಿ ಮದ್ರಸ ಸಮಿತಿ ಅಧ್ಯಕ್ಷ ರಶೀದ್ ಹಾಜಿ ನೈತಾಡಿ ಧ್ವಜಾರೋಹಣ ನೆರೆವೇರಿಸಿದರು. ಮದ್ರಸ ಅಧ್ಯಾಪಕ ಯೂಸುಫ್ ಶಾಹೀರ್ ಯಮಾನಿ ಪೋಳ್ಯರವರು ಪ್ರಾಸ್ತಾವಿಕ ಭಾಷಣ ಮಾಡಿ ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿ ದುಆ ನೆರವೇರಿಸಿದರು.
ರುಮೈಝ್ ಕಲ್ಲಗುಡ್ಡೆ ನೆರೆದಿದ್ದ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿ ಪ್ರತಿಜ್ಞಾ ವಿಧಿ ಬೋಧಿಸಿದರು. ಮದ್ರಸದ ವಿದ್ಯಾರ್ಥಿಗಳಾದ ತಸ್ರೀಫ್, ಝುಮೈಲ್, ಕಾಮಿಲ್, ಮುನೀಸ್ ಸಂದೇಶ ಭಾಷಣ ಮಾಡಿದರು. ಮದರಸ ವಿದ್ಯಾರ್ಥಿಗಳ ಸಂಘಟನೆಯಾದ SKSSF ವತಿಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಡೆದ ಚಿತ್ರ ರಚನೆ, ಕೊಲೇಜ್ ಮೇಕಿಂಗ್, ದೇಶ ಭಕ್ತಿ ಗೀತೆ ಆಲಾಪನೆ ಮುಂತಾದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮದ್ರಸ ಸಮಿತಿ ಕಾರ್ಯದರ್ಶಿ ಝೈನುಲ್ ಆಬಿದ್ ಒಏ, ಕೋಶಾದಿಕಾರಿ ಸುಲೈಮಾನ್, ಉಪಾಧ್ಯಕ್ಷರಾದ ಇಬ್ರಾಹಿಂ ಒಏ, ಜೊತೆ ಕಾರ್ಯದರ್ಶಿ ತಸ್ರೀಪ್ ಒಏ, ಸದಸ್ಯರುಗಳಾದ ಇದ್ದಿಕುಞಿ ಒಏ, ಮಜೀದ್ ಕಲ್ಲಗುಡ್ಡೆ, ಅಬ್ಬಾಸ್ ಒಏ,ಅಬ್ದುಲ್ಲಾ ಖಿಏ, ರಫೀಕ್ ಸಿಝ್ಲರ್,ಇಸುಬು ಒಏ, ಮಹಮ್ಮದ್ ಕಲ್ಲಗುಡ್ಡೆ, ಶರೀಫ್ ನೈತಾಡಿ, ಹಂಝ ಕಲ್ಲಗುಡ್ಡೆ, ಇಮ್ತಿಯಾಝ್ ಒಏ, ಸತ್ತಾರ್ ಕಲ್ಲಗುಡ್ಡೆ, ಸಫ್ವಾನ್ ಕಲ್ಲಗುಡ್ಡೆ ಮತ್ತು ಜಮಾಅತಿನ ಪ್ರತಿನಿಧಿಗಳು, SKSSF ನಾಯಕರು, ಮದರಸ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು.