ಪುತ್ತೂರು: ಕಬಕ ಗ್ರಾಮ ಪಂಚಾಯತ್ ಎರಡನೇ ಅವಧಿಗೆ ಬಿಜೆಪಿ ಬೆಂಬಲಿತ ಸದಸ್ಯರಾದ ಸುಶೀಲಾ ನೆಕ್ಕರಾಜೆ ಆಧ್ಯಕ್ಷೆಯಾಗಿ ಹಾಗೂ ಉಪಾಧ್ಯಕ್ಷೆಯಾಗಿ ಗೀತಾ ಪದ್ನಡ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗಳು ಆ.16ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಒಟ್ಟು 12 ಮಂದಿ ಸದಸ್ಯರನ್ನು ಹೊಂದಿರುವ ಇಲ್ಲಿ ಬಿಜೆಪಿ ಬೆಂಬಲಿತ-9, ಕಾಂಗ್ರೆಸ್ ಬೆಂಬಲಿತ-1 ಹಾಗೂ ಎಸ್.ಡಿ.ಪಿ.ಐ ಬೆಂಬಲಿತ-2 ಮಂದಿ ಸದಸ್ಯರನ್ನು ಹೊಂದಿದೆ. ಪರಿಶಿಷ್ಟ ಜಾತಿ ಮೀಸಲಾತಿಯ ಅಧ್ಯಕ್ಷ ಸ್ಥಾನಕ್ಕೆ ಸುಶೀಲಾ ಹಾಗೂ ಹಿಂದುಳಿದ ವರ್ಗ ಎ ಮೀಸಲು ಉಪಾಧ್ಯಕ್ಷ ಸ್ಥಾನಕ್ಕೆ ಗೀತಾ ಪದ್ನಡ್ಕ ಮಾತ್ರ ನಾಮಪತ್ರ ಸಲ್ಲಿಸಿದ್ದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಸುಶೀಲಾ ರವರಿಗೆ ವಾರಿಜ ಸೂಚಕರಾಗಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಗೀತಾರವರಿಗೆ ರುಕ್ಮಯ್ಯ ಗೌಡ ಪೋಳ್ಯ ಸೂಚಕರಾಗಿದ್ದರು.
ಸದಸ್ಯರಾದ ವಿನಯ ಕುಮಾರ್, ಉಮ್ಮರ್ ಫಾರೂಕ್,ನಝೀರ್ , ಶಾಬಾ ಕೆ., ಡಿ.ವಾರಿಜಾ, ಪ್ರೀತಾ ಬಿ., ಪುಷ್ಪಾ, ರಾಜೇಶ್ ಪಿ ಹಾಗೂ ಶಂಕರಿ ಜಿ.ಭಟ್ ಉಪಸ್ಥಿತರಿದ್ದರು.
ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್ ಕೆ. ಚುಣಾವಣಾಧಿಕಾರಿಯಾಗಿದ್ದರು. ಪಿಡಿಓ ಆಶಾ, ಕಾರ್ಯದರ್ಶಿ ಸುರೇಶ್ ಹಾಗೂ ಸಿಬಂದಿಗಳು ಸಹಕರಿಸಿದರು