ಸವಣೂರು ಉ.ಹಿ. ಪ್ರಾ.ಶಾಲೆಯಲ್ಲಿ ಸ್ವಾತಂತ್ರೋತ್ಸವ

0

ಪುತ್ತೂರು: ಸವಣೂರು ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 77 ನೇ ವರುಷದ ಸ್ವಾತಂತ್ರೋತ್ಸವ ಆಚರಣೆ ಜರಗಿತು. ಶಾಲಾ ಎಸ್.ಡಿಎಂಸಿ‌ ಅಧ್ಯಕ್ಷ ಮಹಮ್ಮದ್ ಹನೀಫ್ ಧ್ವಜಾರೋಹಣಗೈದು‌, ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಸವಣೂರು ಗ್ರಾ.ಪಂ. ಸದಸ್ಯರುಗಳಾದ ಚಂದ್ರಾವತಿ ಸುಣ್ಣಾಜೆ, ಇಂದಿರಾ ಬೇರಿಕೆ, ಶಾಲಾ ಎಸ್ ಡಿಎಂಸಿ ಮಾಜಿ ಅಧ್ಯಕ್ಷ ಶಿವರಾಮ ಗೌಡ ಮೆದು, ಉಪಾಧ್ಯಕ್ಷೆ ಜಯಶ್ರೀ ಬಾರಿಕೆ ಸವಣೂರು ಉಪಸ್ಥಿತರಿದ್ದರು. ಸುದ್ದಿ ಬಿಡುಗಡೆ ವರದಿಗಾರ ಉಮಾ ಪ್ರಸಾದ್ ರೈ ನಡುಬೈಲು ಮತ್ತು ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ದಿವಾಕರ ಬಸ್ತಿರವರುಗಳನ್ನು ಶಾಲೆಯ ವತಿಯಿಂದ ಗೌರವಿಸಲಾಯಿತು. ಶಾಲಾ ಮುಖ್ಯ ಗುರು ನಿಂಗರಾಜು ಕೆ.ಪಿ ಸ್ವಾಗತಿಸಿ, ದೈಹಿಕ ಶಿಕ್ಣಣ ಶಿಕ್ಷಕ ಬಾಲಕೃಷ್ಣ ಕೆ. ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here