ಬೆಟ್ಟಂಪಾಡಿ ಗ್ರಾಮ ಪಂಚಾಯತ್  ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ರಸ ಪ್ರಶ್ನೆ, ಚಿತ್ರ ಕಲಾ ಸ್ಪರ್ಧೆ

0

ನಿಡ್ಪಳ್ಳಿ;  ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ಗ್ರಂಥಪಾಲಕರ ದಿನಾಚರಣೆ ಮತ್ತು 77ನೇ ಸ್ವಾತಂತ್ರ್ಯೋತ್ಸದ ಪ್ರಯುಕ್ತ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಮತ್ತು ಚಿತ್ರಕಲಾ  ಸ್ಪರ್ದೆಗಳನ್ನು  ಹಾಗೂ ವಿವಿಧ ಚಟುವಟಿಕೆಗಳನ್ನು ಆ.12 ರಂದು ನಡೆಸಲಾಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಗ್ರಂಥಾಲಯ ವಿಜ್ಞಾನದ ಪಿತಾಮಹರಾದ ಡಾ.ಎಸ್.ಆರ್ ರಂಗನಾಥನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ  ಉದ್ಘಾಟಿಸಲಾಯಿತು .

 ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಮತ್ತು ಗ್ರಂಥಾಲಯ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಘಟಕಗಳ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಗ್ರಂಥಾಲಯದ ಮೇಲ್ವಿಚಾರಕಿ  ಪ್ರೇಮಲತಾ ದೀಕ್ಷಿತ್ ಪ್ರಾಸ್ತಾವಿಕ ಮಾತುಗಳನ್ನಾಡಿದರು . ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಹಿರಿಯ ಸ್ವಯಂಸೇವಕರಾದಸಾರ್ಥಕ್ ಟಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಯುವಜನತೆ ಜವಾಬ್ದಾರಿ ಎಂಬ ವಿಷಯದ ಬಗ್ಗೆ ಸಂವಾದ ನಡೆಸಿಕೊಟ್ಟರು.

  ಕಾರ್ಯಕ್ರಮದಲ್ಲಿ ನಡೆಸಲಾದ ರಸಪ್ರಶ್ನೆ ಸ್ಪರ್ದೆಯಲ್ಲಿ ಮಾನಸ.ಬಿ ನವೋದಯ ಪ್ರೌಢಶಾಲೆ ಮತ್ತು ಆಕಾಶ್ ಸರಕಾರಿ ಪ್ರೌಢ ಶಾಲೆ ಬೆಟ್ಟಂಪಾಡಿ (ಪ್ರಥಮ), ತೇಜಸ್ ನವೋದಯ ಪ್ರೌಢಶಾಲೆ ಮತ್ತು ತ್ರಿಶಾಂತ ಸರಕಾರಿ ಪ್ರೌಢ ಶಾಲೆ ಬೆಟ್ಟಂಪಾಡಿ (ದ್ವಿತೀಯ) , ಆಯಿಷತ್ ಸಹ್ ಲ ನವೋದಯ ಪ್ರೌಢಶಾಲೆ ಮತ್ತು ವೈಷ್ಣವಿ ಸರಕಾರಿ ಪ್ರೌಢ ಶಾಲೆ ಬೆಟ್ಟಂಪಾಡಿ (ತೃತೀಯ) ಬಹುಮಾನಗಳನ್ನು ಪಡೆದುಕೊಂಡರು.

 ಚಿತ್ರಕಲಾ ಸ್ಪರ್ದೆಯಲ್ಲಿ ತೇಜಸ್ 10ನೇ ತರಗತಿ ನವೋದಯ ಪ್ರೌಢಶಾಲೆ(ಪ್ರಥಮ), ಮುಹಮ್ಮದ್ ಆದಿಲ್ ಶಾ 10ನೇತರಗತಿ ನವೋದಯ ಪ್ರೌಢಶಾಲೆ (ದ್ವಿತೀಯ) ವೀಕ್ಷಾ 8ನೇ ತರಗತಿ ಪೇರಲ್ತಡ್ಕ ಶಾಲೆ (ತೃತೀಯ) ಬಹುಮಾನಗಳನ್ನು ಪಡೆದುಕೊಂಡರು.

 ಎನ್.ಎಸ್.ಎಸ್ ಘಟಕದ ಧನ್ಯಶ್ರೀ ಪ್ರಾರ್ಥಿಸಿದರು . ರಕ್ಷಣ್ ರೈ ಸ್ವಾಗತಿಸಿದರು. ಗ್ರಂಥಮಿತ್ರದ ನಾಯಕಿ ರಕ್ಷಿತಾ ಕೆ ಮತ್ತು ಸಹ ನಾಯಕಿ ಪಲ್ಲವಿ ಬಿ ರೈ , ಧನ್ಯ, ಹರ್ಷಿತಾ ಕೆ, ರಕ್ಷಣ್ ರೈ ಎ, ದಯಾನಿಧಿ ,ಗ್ರಾಮ ಪಂಚಾಯತ್ ಸಿಬ್ಬಂದಿ ಸಂದೀಪ್ ಟಿ ಉಪಸ್ಥಿತರಿದ್ದು ಸಹಕರಿಸಿದರು . ಸ್ಪರ್ದೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತ್ ಸದಸ್ಯ ವಿನೋದ್ ರೈ ಗುತ್ತು ಹಾಗೂ ಪ್ರಕಾಶ್ ರೈ ಬೈಲಾಡಿ ಬಹುಮಾನಗಳನ್ನು ಆಯೋಜಿಸಿದರು.

LEAVE A REPLY

Please enter your comment!
Please enter your name here