ಸವಣೂರು : ಪುಣ್ಚಪ್ಪಾಡಿಯಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಮಹಿಳೆಗೆ ಅವ್ಯಾಚ ಶಬ್ದಗಳಿಂದ ಬೈದು ಜಾತಿ ನಿಂದನೆ-ಪ್ರಕರಣ ದಾಖಲು

0

ಸವಣೂರು : ಪುಣ್ಚಪ್ಪಾಡಿಯಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಅವ್ಯಾಚ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿದ್ದಾರೆಂದು ಇಬ್ಬರ ವಿರುದ್ದ ಮಹಿಳೆಯೊಬ್ಬರು ಬೆಳ್ಳಾರೆ ಪೊಲೀಸ್‌ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಮಡಿಕೇರಿ ಕರಿಕೆ ಗ್ರಾಮದ ನಿವಾಸಿ  ಪುಷ್ಟ  ಎಂಬವರು ಬೆಳ್ಳಾರೆ ಪೊಲೀಸ್‌ ಠಾಣೆಗೆ ನೀಡಿದ ದೂರಿನಲ್ಲಿ, ನಾನು ಪರಿಶಿಷ್ಟ ಪಂಗಡದ ಸಮುದಾಯದವರಾಗಿದ್ದು, ತನ್ನ ಗಂಡನ ಜೊತೆ ಕಡಬ ತಾಲೂಕು ಪುಣ್ಚಪ್ಪಾಡಿ ಗ್ರಾಮದ ಮಾಂತೂರು ಎಂಬಲ್ಲಿ ಶ್ರೀಮತಿ ನಾಗರತ್ನಮ್ಮ ಎಂಬವರ ಜಮೀನಿನಲ್ಲಿ ಕಳೆದ ಮೂರು ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿರುತ್ತೇನೆ.

ಆ.16ರಂದು ಈ ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ಆರೋಪಿಗಳಾದ ಪುತ್ತೂರು ತಾಲೂಕು ಕುರಿಯ ಗ್ರಾಮದ ದೇರ್ಖಜೆ ನಿವಾಸಿ  ವೆಂಕಟ್ರಮಣ ಭಟ್, ಬಿನ್: ನರಸಿಂಹ ಭಟ್, ಮತ್ತು ನರೇಶ್ ಭಟ್, ಬಿನ್: ವೆಂಕಟ್ರಮಣ ಭಟ್ ಎಂಬವರುಗಳು ಬಂದು ಅವ್ಯಾಚವಾಗಿ ಬೈದು, ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದು, ಈ ಬಗ್ಗೆ ಪುಷ್ಪಾ ಅವರು ಪ್ರಶ್ನಿಸಿದಾಗ ಆರೋಪಿಗಳಿಬ್ಬರೂ ಅನುಚಿತವಾಗಿ ವರ್ತಿಸಿರುತ್ತಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

ಪುಷ್ಪಾ ಅವರು ನೀಡಿದ ದೂರಿನಂತೆ  ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಕ್ರ : 51/2022 ಕಲಂ 323, 354, 354(B), 504, 506 ಜೊತೆಗೆ 34 ಐಪಿಸಿ ಮತ್ತು ಕಲಂ 3(1)(r), 3(1)((s), 3(1)(w)(I) Prevention of atrocities (Amendment) Act  2015 ರಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here