ಸವಣೂರು ಮೊಗರು ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಸವಣೂರು : ಸವಣೂರು ಗ್ರಾಮದ ಮೊಗರು ಸ.ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣವನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ,ಗ್ರಾ.ಪಂ.ಸದಸ್ಯ ರಫೀಕ್ ಎಂ ಎ ನೆರವೇರಿಸಿದರು.

ಈ ಸಂದರ್ಭದಲ್ಲಿಗ್ರಾ.ಪಂ.ಸದಸ್ಯರಾದ ಅಬ್ದುಲ್‌ ರಝಾಕ್‌,ಬಾಬು ಎನ್.‌,ಚೆನ್ನು,ಶಾಲಾ ವಿದ್ಯಾರ್ಥಿ ನಾಯಕಿ ಫಾತಿಮತ್‌ ಶಂಸಿಯ್ಯಾ, ಶಾಲಾಭಿವೃದ್ದಿ ಸಮಿತಿಯ ಮಾಜಿ ಮಾಜಿ ಅಧ್ಯಕ್ಷರಾದ ಫಾರೂಕ್ ಮಾಂತೂರು, ಝಕರೀಯಾ ಕುರ್ತಲ,ಅಬೂಬಕ್ಕರ್ ಮಜಲ್,ಮಹಮ್ಮದ್ ಮಾಂತೂರು, ರಫೀಕ್ ಸೋಂಪಾಡಿ,ಎಸ್.ಡಿ.ಎಂ.ಸಿ ಉಪಾಧ್ಯಕ್ಷರು ಹಾಗೂ ಸದಸ್ಯರು, ಹಳೆವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಶಾಲಾ ಪ್ರಭಾರ ಮುಖ್ಯಶಿಕ್ಷಕಿ  ಜುಸ್ತಿನಾ ಲಿಡ್ವಿನ್‌ ಡಿಸೋಜ ಸ್ವಾಗತಿಸಿದರು.ಶಿಕ್ಷಕರಾದ ಶ್ವೇತಾ ಎಂ ಪ್ರಸ್ತಾವನೆಗೈದರು. ಜಾನಕಿ ವಂದಿಸಿದರು.ದಯಾಮಣಿ, ಪೂರ್ಣಿಮ ವಿವಿಧ ಕಾರ್ಯ ನಿರ್ವಹಿಸಿದರು.

LEAVE A REPLY

Please enter your comment!
Please enter your name here