ಆಲಂಕಾರು: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸತತ 3ನೇ ಬಾರಿಗೆ ಎಸ್.ಡಿ.ಸಿ.ಸಿ ಬ್ಯಾಂಕ್ ನ ಪೋತ್ಸಾಹಕ ಪ್ರಶಸ್ತಿಗೆ ಆಯ್ಕೆಯಾಗಿದೆ. ಆ.19 ರಂದು ನಡೆಯುವ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆಯಲ್ಲಿ ಎಸ್.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಿದ್ದಾರೆ.
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 89 ಕೋಟಿ ರೂ.ಠೇವಣಿ ಹೊಂದಿದ್ದು, ಪ್ರಸ್ತುತ 133 ಕೋಟಿರೂ ಸಾಲ ಹೊರಬಾಕಿ ಇದೆ. ವರ್ಷಾಂತ್ಯದಲ್ಲಿ ಶೇ.98.70 ಸಾಲ ವಸೂಲಾಗಿರುತ್ತದೆ. ಸಂಘವು ಒಟ್ಟು 960.46 ಕೋಟಿ ರೂ. ವಾರ್ಷಿಕ ವ್ಯವಹಾರ ಮಾಡಿದ್ದು 180.43 ಲಕ್ಷ ರೂ. ಲಾಭಗಳಿಸಿದ್ದು, ಆಲಂಕಾರಿನಲ್ಲಿರುವ ಸಂಘದ ಪ್ರಧಾನ ಕಚೇರಿ, ಕೊಯಿಲ, ಕುಂತೂರು ಶಾಖೆಗಳಲ್ಲಿ ಉತ್ತಮ ಗುಣಮಟ್ಟದ ದಿನಸಿ ಸಾಮಾಗ್ರಿಗಳ ಮಾರಾಟ ಮಾಡಲಾಗುತ್ತಿದೆ. ರಾಸಾಯನಿಕ ಗೊಬ್ಬರ ಎಲ್ಲಾ ಕೃಷಿಕರಿಗೆ ಸಿಗುವಂತೆ ಮಾಡಲು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇರಿಸಲಾಗಿದೆ. ಸಂಘದ ಕಾರ್ಯ ವ್ಯಾಪ್ತಿಯ ಹಳೆನೇರೆಂಕಿಯಲ್ಲಿ ಜಾಗ ಖರೀದಿ ಮಾಡಿ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
ರೈತ ಸದಸ್ಯರ ಅವಶ್ಯಕತೆ ಮನಗಂಡು ಸಂಘದ ಮೂಲಕ ಭಾರತೀಯ ಸ್ಟೇಟ್ ಬ್ಯಾಂಕ್ ಸಹಯೋಗದೊಂದಿಗೆ ನೆಫ್ಟ್/ ಆರ್.ಟಿ.ಜಿ.ಎಸ್ ಸೌಲಭ್ಯವನ್ನು ನೀಡಲಾಗಿದೆ. ಸೋಲಾರ್ ವಿದ್ಯುತ್ ಉಪಕರಣ ಅಳವಡಿಸಿಕೊಳ್ಳಲು ದೀರ್ಘಾವಧಿ ಸಾಲದ ವ್ಯವಸ್ಥೆ, ಮದುವೆ ಹಾಗೂ ಇತರ ಸಮಾರಂಭಗಳಿಗೆ ಸುಸಜ್ಜಿತವಾದ ರೈತ ಸಭಾಭವನ, ರೈತಾಪಿ ವರ್ಗದ ಅನುಕೂಲತೆಗಾಗಿ ನ್ಯಾಯಯುತ ಬಾಡಿಗೆ ದರದಲ್ಲಿ ಪಿಕ್ಅಪ್ ವಾಹನ ಸೌಲಭ್ಯ, ಕಾಳುಮೆಣಸು ಬೇರ್ಪಡಿಸುವ ಯಂತ್ರ ಕೂಡ ಬಾಡಿಗೆ ದೊರೆಯುತ್ತದೆ. ಸಾಲಗಾರ ಸದಸ್ಯರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸುವರ್ಣ ಸಹಕಾರಿ ನಿಧಿಯನ್ನು ಅನುಷ್ಠಾನ ಮಾಡಲಾಗಿದೆ.ಸಂಘದ ಉಪಾಧ್ಯಕ್ಷರಾಗಿ ಪ್ರದೀಪ್ ರೈ ಮನವಳಿಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಪ್ಪ ಗೌಡ ಸಂಘದ ನಿರ್ದೇಶಕ ರಾಗಿ ಜೆ.ಪಿ ಶೇಷಪತಿ ರೈ ಗುತ್ತುಪಾಲು,ಸಂತೋಷ್ ಕುಮಾರ್ ಕುಂಞಕ್ಕು,ಅಣ್ಣು ನಾಯ್ಕ ಜಯಂಪಾಡಿ,ಆಶಾ ತಿಮ್ಮಪ್ಪ ಗೌಡ ಕುಂಡಡ್ಕ,ನಳಿನಿ ಕಾಯರಟ್ಟ,ಮೋನಪ್ಪ ಬೊಳ್ಳರೋಡಿ,ಸುಧಾಕರ ಪೂಜಾರಿ ಕಲ್ಲೇರಿ,ರಾಮಚಂದ್ರ ಏಣಿತ್ತಡ್ಕ, ವಲಯ ಮೇಲ್ವಿಚಾರಕರು ಶರತ್.ಡಿ ಹಾಗು ಸಿಬ್ಬಂದಿ ವರ್ಗದವರು ಸಂಘದ ಶ್ರೆಯೋಭಿವೃದ್ದಿಗೆ ಸಹಕರಿಸುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷರಾದ ಧರ್ಮಪಾಲ ರಾವ್ ತಿಳಿಸಿದ್ದಾರೆ.
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ನಮ್ಮ ಆಡಳಿತಾವಧಿಯಲ್ಲಿ ಸತತವಾಗಿ 3 ನೇ ಬಾರಿಗೆ ಆಯ್ಕೆಯಾಗಿರುವುದು ಅತೀವ ಸಂತಸ ತಂದಿದೆ. ಈ ಪ್ರಶಸ್ತಿ ಗೆ ಕಾರಣೀಕರ್ತರಾದ. ನಮ್ಮ ಅಡಳಿತ ಮಂಡಳಿಯ ಉಪಾಧ್ಯಕ್ಷರಿಗೆ ಹಾಗು ಎಲ್ಲಾ ನಿರ್ದೇಶಕರಿಗೆ, ಸಂಘದ ಗೌರವಾನ್ವಿತ ಸದಸ್ಯರಿಗೆ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ.ರಾಜೇಂದ್ರ ಕುಮಾರ್ ರವರಿಗೆ ಹಾಗು ನಿರ್ದೇಶಕರಿಗೆ ಮತ್ತು ನಮ್ಮ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಗೆ ಮತ್ತು ಸಿಬ್ಬಂದಿಗಳಿಗೆ ಮನದಾಳದ ಕೃತಜ್ಞತೆಗಳು
ಧರ್ಮಪಾಲ ರಾವ್ ಕಜೆ
ಅಧ್ಯಕ್ಷರು ಆಲಂಕಾರು ಸಿ.ಎ ಬ್ಯಾಂಕ್