ಕಂಡೊಡೊಂಜಿ ದಿನ ಕಾರ್ಯಕ್ರಮದಲ್ಲಿ ಆನಡ್ಕ ಶಾಲಾ ವಿದ್ಯಾರ್ಥಿಗಳು

0

ಪುತ್ತೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕ ಇಲ್ಲಿನ ವಿದ್ಯಾರ್ಥಿಗಳು ಕಂಡೊಡೊಂಜಿ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಮರಕೂರು ಜನನ ತರವಾಡು ಮನೆಯವರ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಿತು.ವಿದ್ಯಾರ್ಥಿಗಳು ಗದ್ದೆಯಲ್ಲಿ ನೇಜಿ ತೆಗೆದು, ನೆಟ್ಟು, ಕಂಬಳವನ್ನು ವೀಕ್ಷಿಸಿ, ಕೃಷಿ ಕಲಿಕೆಯನ್ನು ಪಡೆದುಕೊಂಡರು.


ಮರಕೂರು ಜನನ ದೈವಗಳ ಮನೆಯಲ್ಲಿ ತರವಾಡು ಮನೆತನದ ಹಿರಿಯರಾದ ಚೆನ್ನಪ್ಪ ಪೂಜಾರಿ, ಶ್ರೀಧರ ಕೃಷಿ ಚಟುವಟಿಕೆಗಳ ಬಗ್ಗೆ, ಕೃಷಿ ಚಟುವಟಿಕೆಯಲ್ಲಿ ಬಳಸುವ ಉಪಕರಣಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಲೋಹಿತ್ ಬಂಗೇರ ಬಾಲಯ ತಿಂಗಳಾಡಿ ಇವರು ಕಂಬಳದ ಬಗ್ಗೆ ಸವಿವರವಾಗಿ ಹೇಳಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಧಾಕರ ಕುಲಾಲ್ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು. ಗ್ರಾಮ ಪಂಚಾಯತ್ ಸದಸ್ಯ ತಾರನಾಥ ಮತ್ತು ಮರಕೂರು ಮನೆತನದ ಕರುಣಾಕರ, ಭವಿತ್, ಮನೋಜ್ ಮತ್ತಿತರರು ಉಪಸ್ಥಿತರಿದ್ದು ಸಹಕರಿಸಿದರು.


ಶಾಲಾ ಮುಖ್ಯ ಗುರು ಶುಭಲತಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶಿಕ್ಷಕಿ ಮಾಲತಿ ಸ್ವಾಗತಿಸಿ ,ಶಿಕ್ಷಕಿ ಅಕ್ಷತಾ ವಂದಿಸಿದರು. ಶಿಕ್ಷಕ ಫೆಲ್ಸಿಟಾ ಡಿಕುನ್ಹಾ, ವಿಶಾಲಾಕ್ಷಿ ಸೌಮ್ಯ ಸಹಕರಿಸಿದರು.ಮಹೇಶ್ ಮರಕೂರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.

LEAVE A REPLY

Please enter your comment!
Please enter your name here