ಸರ್ಕಸ್ ಚಿತ್ರನಟಿ ರಚನಾ ರೈ, ಮಿ. ಮದಿಮಾಯೆ’ ಚಿತ್ರತಂಡ ಭಾಗಿ
ಪುತ್ತೂರು: ಎಪಿಎಂಸಿ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರಿನಲ್ಲಿ ಆ.15 ರಂದು ಆಟಿದ ನೆನಪು ಕೂಟವನ್ನು ಹಮ್ಮಿಕೊಳ್ಳಲಾಗಿತ್ತು.
ಪುತ್ತೂರು ನಗರಸಭೆಯ ಆರೋಗ್ಯ ನಿರೀಕ್ಷಕಿ ಶ್ರೀಮತಿ ಶ್ವೇತಾಕಿರಣ್ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರಿನಲ್ಲಿ ದೈಹಿಕ ಆರೋಗ್ಯದ ತರಬೇತಿಯನ್ನು ಪಡೆಯುತ್ತಿರುವ ಯುವಕ-ಯುವತಿಯರು ಸೇರಿಕೊಂಡು ಆಟಿ ಕೂಟವನ್ನು ಆಚರಿಸುತ್ತಿರುವುದು ಶ್ಲಾಘನೀಯ. ಹಿಂದಿನ ನಮ್ಮ ಹಿರಿಯರು ಆಟಿ ಸಂದರ್ಭದಲ್ಲಿ ಹೇಗೆ ಬದುಕಿದ್ದರು, ಯಾವ ತೆರನಾದ ಆರೋಗ್ಯದಾಯಕ ತಿನಸುಗಳನ್ನು ಮಾಡುತ್ತಿದ್ದರು ಎಂಬ ಅರಿವು ಮುಂದಿನ ಪೀಳಿಗೆಗೆ ಮೂಡಬೇಕು ಎಂದರು.
ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರು ಮಾತನಾಡಿ, ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರ್ ಉತ್ತಮ ತರಬೇತುದಾರರನ್ನು ಹೊಂದಿದ್ದು ಇಲ್ಲಿ ಬಂದಂತಹ ಯುವಕ-ಯುವತಿಯರಿಗೆ ಉತ್ತಮವಾಗಿ ತರಬೇತಿ ನೀಡುವ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ತಾಲೂಕಿನಲ್ಲಿ ಸುಸಜ್ಜಿತ ಫಿಟ್ನೆಸ್ ಸೆಂಟರ್ ಆಗಿ ಈ ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರ್ ಬೆಳೆಯುತ್ತಿದೆ ಎಂದರು.
ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ವಲೇರಿಯನ್ ಡಾಯಸ್, ಫಿಲೋಮಿನಾ ಕಾಲೇಜಿನ ವೈಟ್ ಲಿಪ್ಟಿಂಗ್ ಕೋಚ್ ಪುಷ್ಪರಾಜ್, ಫಿಲೋಮಿನಾ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ|ನೋರ್ಬರ್ಟ್ ಮಸ್ಕರೇನ್ಹಸ್, ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ನಿರ್ದೇಶಕ ಮನೋಜ್ ಡಾಯಸ್, ನಿರ್ದೇಶಕಿ ನಿಶಾ ಮಸ್ಕರೇನ್ಹಸ್ ಉಪಸ್ಥಿತರಿದ್ದರು.
ಅಭಿನಂದನೆ:
ಸಾಧಕರಾದ ವೈಟ್ ಲಿಪ್ಟಿಂಗ್ ನಲ್ಲಿ ಶಬರೀಶ್ ರೈ, ಬ್ಯೂಲ ಪಿ.ಟಿ, ನಿಶ್ಚಿತ್, ಅಭಿರಾಮ್ ಚಂದ್ರ, ಸ್ಪಂದನಾ, ರಂಜಿತ್, ಪವರ್ ಲಿಪ್ಟಿಂಗ್ ನಲ್ಲಿ ಕಾವ್ಯಶ್ರೀ, ನಿಶ್ಚಿತ್, ಲೈಫ್ ಸೇವಿಂಗ್ ನಲ್ಲಿ ತ್ರಿಶೂಲ್, ಶಿಶಿಲ್, ಸ್ವೀಕೃತ್ ಆನಂದ್, ನೀಲ್ ಮಸ್ಕರೇನ್ಹಸ್, ಭುವನ್ ರಾಮ್, ಬಾಡಿ ಬಿಲ್ಡಿಂಗ್ ನಲ್ಲಿ ರಾಜ್ ಗೋಪಾಲ್, ಪ್ರಥ್ವಿರಾಜ್ ಹೆಗ್ಡೆ, ಕ್ರಿಕೆಟ್ ನಲ್ಲಿ ಹಾರ್ದಿಕ್, ಶಾಫಿ ಪರ್ಪುಂಜ, ಅಥ್ಲೆಟಿಕ್ಸ್ ನಲ್ಲಿ ಪ್ರವೀಣ್ ಕುಮಾರ್ ಶೆಟ್ಟಿ, ಚಿರಾಯು, ಚಿರಾಗ್, ಪೂರ್ವಿ ಕಾಮತ್, ಕಬಡ್ಡಿಯಲ್ಲಿ ಸಿನಾನ್, ಸತ್ಯನ್, ಲಕ್ಷ್ಮೀಸಾಗರ್, ನಾಸಿರ್ ಅಮ್ಮಿ, ಹಗ್ಗಜಗ್ಗಾಟದಲ್ಲಿ ಆದರ್ಶ್ ಬಿರ್ವ, ಹರ್ಷಿತ್ ಗೌಡ, ಚಿರಾಯು, ಚಿರಾಗ್, ಧಿರೆನ್, ಧನುಷ್, ಕರಣ್, ನಿತೇಶ್, ಆದೇಶ್, ಶ್ರವಣ್ ಎಂ, ಶ್ರವಣ್, ಸನ್ಮಿತ್, ಧೀರಜ್, ಶಿವಪ್ರಸಾದ್, ಅಖಿಲ್, ಸುಹಾನ್, ಸುಚೇತ್, ಕಿರಣ್, ಮೋಹಿತ್, ಶರತ್, ಹನೀಫ್, ಸುರೇಶ್, ಸಚಿನ್, ಧನು, ನವೀನ್ ರವರನ್ನು ಅಭಿನಂದಿಸಲಾಯಿತು.
ಜಿಮ್ ತರಬೇತುದಾರ ನವೀನ್ ಕುಲಾಲ್ ಕಾರ್ಯಕ್ರಮ ನಿರ್ವಹಣೆಯೊಂದಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಬಳಿಕ ಜಿಮ್ ನ ಸದಸ್ಯರಿಂದ ವಿವಿಧ ಮನರಂಜನೆ ಕಾರ್ಯಕ್ರಮ ನಡೆದವು. ಸುಮಾರು 25 ಕ್ಕೂ ಮಿಕ್ಕಿ ಆಟಿಯ ತಿನಸುಗಳನ್ನು ಜಿಮ್ ಸದಸ್ಯರು ಮಾಡಿಕೊಂಡು ತಂದಿದ್ದರು.
ಸರ್ಕಸ್ ತುಳು ಚಿತ್ರನಟಿ ರಚನಾ ರೈ ಆಕರ್ಷಣೆ..
ಇತ್ತೀಚೆಗೆ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿ ನಾಗಾಲೋಟದಲ್ಲಿರುವ ನಟ ರೂಪೇಶ್ ಶೆಟ್ಟಿ ಅಭಿನಯದ ತುಳು ಹಾಸ್ಯಮಯ ಚಿತ್ರ ‘ಸರ್ಕ’ಸ್’ ಇದರ ಚಿತ್ರನಟಿ ರಚನಾ ರೈಯವರು ಆಗಮಿಸಿ ಕಾರ್ಯಕ್ರಮದ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ನಟಿ ರಚನಾ ರೈಯವರು, ಸರ್ಕಸ್ ಚಿತ್ರವು ಪ್ರೇಕ್ಷಕರ ಪ್ರೋತ್ಸಾಹದಿಂದ ಯಶಸ್ವಿಯತ್ತ ದಾಪುಗಾಲಿಡುತ್ತಿದೆ. ಪುತ್ತೂರಿನ ಭಾರತ್ ಸಿನೆಮಾಸ್ ನಲ್ಲಿ ಚಿತ್ರವು ಭರ್ಜರಿ ಪ್ರದರ್ಶನಗೊಳ್ಳುತ್ತಿದ್ದು ಪುತ್ತೂರಿನ ಹೃದಯವಂತ ಸಿನೆಮಾ ಅಭಿಮಾನಿಗಳು ಸರ್ಕಸ್ ಸಿನೇಮಾ ನೋಡಿ ಪ್ರೋತ್ಸಾಹಿಸಿರುವುದು ಕೃತಜ್ಞತೆಗಳು ಸಲ್ಲಿಸುತ್ತೇನೆ. ಇದೇ ರೀತಿ ಪ್ರೋತ್ಸಾಹ ತುಳು ಚಿತ್ರಕ್ಕಿರಲಿ ಎಂಬ ಆಶಯ ನನ್ನದು ಎಂದರು.
‘ಮಿಸ್ಟರ್ ಮದಿಮಾಯೆ’ ತುಳು ಚಿತ್ರದ ಪ್ರಚಾರ..
ಇನ್ನಷ್ಟೇ ಬಿಡುಗಡೆಯಾಗಬೇಕಿರುವ
‘ಮಿಸ್ಟರ್ ಮದಿಮಾಯೆ’ ಚಿತ್ರದ ನಿರ್ದೇಶಕ ನವೀನ್ ಹಾಗೂ ಚಿತ್ರತಂಡ ಕಾರ್ಯಕ್ರಮದಲ್ಲಿ ಹಾಜರಿದ್ದರು. ಆಟಿ ಕಳೆದ ಬಳಿಕ ಚಿತ್ರ ಬಿಡುಗಡೆ ಮಾಡುವ ಯೋಚನೆಯಿದ್ದು, ಎಲ್ಲರಿಗೂ ಆಮಂತ್ರಣ ಪತ್ರಿಕೆ ಕಳುಹಿಸುತ್ತಿದ್ದೇವೆ ಮಾತ್ರವಲ್ಲ ಎಲ್ಲರೂ ಆಗಮಿಸಿ ಟಿಕೆಟ್ ರೂಪದಲ್ಲಿ ಮದುವೆ ಕವರ್ ನೀಡಿ ಚಿತ್ರ ತಂಡಕ್ಕೆ ಪ್ರೋತ್ಸಾಹಿಸಬೇಕು ಎಂದು ನಿರ್ದೇಶಕ ನವೀನ್ ರವರು ಹೇಳಿದರು. ಅಲ್ಲದೆ ದಾಯ್ಜಿವಲ್ಡ್೯ ಸ್ಟ್ಯಾಂಡ್ ಅಪ್ ಕಾಮಿಡಿ ವಿಜೇತ ಮನೀಶ್ ಉಪಸ್ಥಿತಿ ಮತ್ತಷ್ಟು ಮೆರುಗು ನೀಡಿತ್ತು.