ಪುತ್ತೂರು: ಸರಕಾರಿ ಪ್ರೌಢಶಾಲೆ ಕಲ್ಪನೆ ಸರ್ವೆ ಇಲ್ಲಿ `ಸ್ನೇಹ’ ಕಿಶೋರಿ ಸಂಘವನ್ನು ರಚಿಸಲಾಯಿತು. ಕಿಶೋರಿಯರ ಸಂಘಕ್ಕೆ ಹದಿಹರೆಯದ ಆರೋಗ್ಯ ಸಮಸ್ಯೆಗಳು ಹಾಗೂ ಪೌಷ್ಟಿಕ ಆಹಾರ ನೀರು ಮತ್ತು ನೈರ್ಮಲ್ಯ ಎಂಬ ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು.
ಪದ್ಮಾವತಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆರೋಗ್ಯ ಇಲಾಖೆ ಪುತ್ತೂರು ಇದರ ಪದ್ಮಾವತಿ, ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾಧಿಕಾರಿ ಹೇಮಲತಾ, ಆಶಾ ಕಾರ್ಯಕರ್ತೆ ರಾಜೀವಿಯವರು ಪ್ರಾಥಮಿಕ ಆರೋಗ್ಯ ಕೇಂದ್ರ ಸರ್ವೆ ಇವರು ಮಾಹಿತಿನೀಡಿದರು. ನಂತರ ಕಿಶೋರಿಯರಿಗಾಗಿ ಸಾಂಕ್ರಾಮಿಕ ರೋಗಗಳು ಎಂಬ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ವಿಜೇತರಿಗೆ ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಇವರು ಪ್ರಶಸ್ತಿ ಪತ್ರವನ್ನು ವಿತರಿಸಿದರು ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕಿ ಸುವಿನಾ, ಎಂಬಿಕೆ ಸವಿತಾ, ಎಲ್‌ಸಿಆರ್‌ಪಿ ಭವಾನಿ ಹಾಗೂ ರಾಧಿಕಾ, ಕೃಷಿ ಸಖಿ ಸಂಗೀತ, ಕೃಷಿ ಉದ್ಯೋಗ ಸಖಿ ಚೈತ್ರಾ ಮಧುಚಂದ್ರ, ಬಿ ಸಿ ಸಖಿ ಫಾತಿಮಾ ಉಪಸ್ಥಿತರಿದ್ದರು.